ನವದೆಹಲಿ :ಕರೊನಾ ಸಮರದಲ್ಲಿ ದೇಶದ ಆರೋಗ್ಯ ವ್ಯವಸ್ಥೆಯ ಬಲ ಹೆಚ್ಚಿಸಲು ಆಯುಷ್​ ಮಂತ್ರಾಲಯದ ಅಡಿ ಬರುವ 8 ಲಕ್ಷಕ್ಕೂ ಮೀರಿದ ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ಆಯುಷ್​ ರಾಜ್ಯ ಸಚಿವ ಕಿರೆನ್​​ ರಿಜಿಜು ಘೋಷಿಸಿದ್ದಾರೆ. ಈಗಾಗಲೇ ಕೋವಿಡ್​ನ ಕ್ಲಿನಿಕಲ್ ನಿರ್ವಹಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಆಯುಷ್​ ವೈದ್ಯರಿಗೆ ತರಬೇತಿ ನೀಡಲಾಗಿದ್ದು, ಆಯುಷ್​​ ಮಾನವ ಸಂಪನ್ಮೂಲವನ್ನು ಮುಂಚೂಣಿ ಕೋವಿಡ್​ ಕರ್ತವ್ಯಗಳಿಗೆ ನಿಯುಕ್ತಿಗೊಳಿಸುವ ಬಗ್ಗೆ ಸೂಚನೆ ಜಾರಿಯಾಗಿದೆ ಎಂದಿದ್ದಾರೆ.
ಜೊತೆಗೆ ದೇಶಾದ್ಯಂತ ಇರುವ ಆಯುಷ್​ ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಕೋವಿಡ್​ ಚಿಕಿತ್ಸಾ ಘಟಕಗಳಾಗಿ ಪರಿವರ್ತಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 750 ಆಯುಷ್​ ಆಸ್ಪತ್ರೆಗಳನ್ನು ಮತ್ತು ಆಯುಷ್​ನ ನ್ಯಾಷನಲ್​ ಇನ್ಸ್​​ಸ್ಟಿಟ್ಯೂಟ್​ಗಳು ಮತ್ತು ಸಂಶೋಧನಾ ಘಟಕಗಳಲ್ಲಿರುವ 86 ಕ್ಲಿನಿಕಲ್ ಫೆಸಿಲಿಟಿಗಳನ್ನು ಕೋವಿಡ್​ ಚಿಕಿತ್ಸೆಗೆ ಸೂಕ್ತವಾಗುವ ರೀತಿಯಲ್ಲಿ ಪರಿವರ್ತಿಸಲು ಆಯುಷ್​ ಮಂತ್ರಾಲಯ ಸಹಕಾರ ನೀಡಲಿದೆ. ಇದರಿಂದ ಹೊಸದಾಗಿ 50,000 ಬೆಡ್​ಗಳು ಕೋವಿಡ್​ ಚಿಕಿತ್ಸೆಗೆ ಲಭ್ಯವಾಗಲಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಗಿವ್‌ ಇಂಡಿಯಾದಿಂದ ಆಮ್ಲಜನಕ ಸಾಂದ್ರಕಗಳ ಕೊಡುಗೆ ; ಯಲಹಂಕದಲ್ಲಿ ಬೋಯಿಂಗ್​​ನ ಚಿಕಿತ್ಸಾ ಘಟಕ
ಆಯುರ್ವೇದ, ಯುನಾನಿ, ಹೋಮಿಯೋಪಥಿಯಂತಹ ಪರ್ಯಾಯ ಚಿಕಿತ್ಸಾ ಪದ್ಧತಿಗಳನ್ನು ಸೂಕ್ತ ಶೈಕ್ಷಣಿಕ ತರಬೇತಿಯೊಂದಿಗೆ ಅಭ್ಯಸಿಸುವ ವೈದ್ಯರು ಆಯುಷ್​ ಮಂತ್ರಾಲಯದ ಅಡಿಯಲ್ಲಿ ಬರುತ್ತಾರೆ. ಕರೊನಾ ಉಲ್ಬಣದ ಈ ಪರಿಸ್ಥಿತಿಯಲ್ಲಿ ಆಯುಷ್​​​ ಮಂತ್ರಾಲಯವು ಸುಮಾರು 8.32 ಲಕ್ಷ ಆಯುಷ್​ ವೈದ್ಯಕೀಯ ವೃತ್ತಿಪರರ ವಿವರಗಳನ್ನು ಕೇಂದ್ರ ಸರ್ಕಾರದ ಕೋವಿಡ್​ ವಾರಿಯರ್ಸ್​ ಪೋರ್ಟಲ್​ನಲ್ಲಿ ಒದಗಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಪರೀಕ್ಷೆ ಮುಂದಕ್ಕೆ :ಕರೊನಾ ಹಿನ್ನೆಲೆಯಲ್ಲಿ ಎನ್​ಟಿಎ ನಡೆಸುವ ಆಲ್​ಇಂಡಿಯಾ ಆಯುಷ್​ ಪಿಜಿ ಎಂಟ್ರೆನ್ಸ್​ ಪರೀಕ್ಷೆಯನ್ನು 2021ರ ಆಗಸ್ಟ್​ 31 ರ ನಂತರ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಹತ್ತು ಪಟ್ಟು ಬೆಲೆಗೆ ಆಕ್ಸಿಜನ್ ಸಿಲಿಂಡರ್​ ಮಾರಾಟ : ಓರ್ವನ ಬಂಧನ

ಸ್ಕೂಲ್​ಬ್ಯಾಗ್​ನಿಂದ ಬಂದೂಕು ಹೊರಗೆಳೆದಳು, ಮೂವರ ಮೇಲೆ ಗುಂಡು ಹಾರಿಸಿದಳು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
