ಥಾಣೆ:ಬೀದಿನಾಯಿಗಳಿಗೆ ಅನ್ನ ಹಾಕಿದ್ದಕ್ಕೂ ದಂಡ ತೆರಬೇಕಾದ ಪರಿಸ್ಥಿತಿ ಮಹಿಳೆಯೊಬ್ಬರಿಗೆ ಎದುರಾಗಿದೆ. ಅಷ್ಟಕ್ಕೂ ಅದು ಹತ್ತು, ನೂರು, ಸಾವಿರ ರೂಪಾಯಿಗಳಲ್ಲಲ್ಲ.. 8 ಲಕ್ಷ ರೂಪಾಯಿಗೂ ಅಧಿಕ!
ನವಿ ಮುಂಬೈನ ಎನ್​ಆರ್​ಐ ಕಾಂಪ್ಲೆಕ್ಸ್​ನ ಆಡಳಿತ ಸಮಿತಿ, ಒಟ್ಟು 8 ಲಕ್ಷ ರೂಪಾಯಿಗೂ ಅಧಿಕ ದಂಡ ತೆರುವಂತೆ ಅಲ್ಲಿನ ನಿವಾಸಿಗರೊಬ್ಬರಿಗೆ ತಾಕೀತು ಮಾಡಿದೆ. ಈ ಬೃಹತ್ ವಸತಿ ಸಂಕೀರ್ಣದಲ್ಲಿ ವಾಸವಿರುವ ಅಂಶು ಸಿಂಗ್ ಎಂಬ ಮಹಿಳೆ ಇಂಥದ್ದೊಂದು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ನಿವಾಸಿಗರು ಕಾಂಪ್ಲೆಕ್ಸ್ ಆವರಣದೊಳಗೆ ಬೀದಿನಾಯಿಗಳಿಗೆ ಅನ್ನ-ತಿಂಡಿ ಹಾಕಿದರೆ ದಂಡ ವಿಧಿಸುವ ಪರಿಪಾಠವನ್ನು ಸಮಿತಿ ಇಟ್ಟುಕೊಂಡಿದೆ. ಯಾರಾದರೂ ಬೀದಿನಾಯಿಗಳಿಗೆ ಅನ್ನ ಹಾಕಿದರೆ ದಿನಕ್ಕೆ 5 ಸಾವಿರ ರೂಪಾಯಿಯಂತೆ ಈ ಸಮಿತಿ ದಂಡ ವಿಧಿಸುತ್ತದೆ. ಅಂಶು ಅವರು ಜುಲೈನಿಂದ ಅನ್ನ ಹಾಕುತ್ತಿದ್ದು, ಅವರು ಒಟ್ಟು 8 ಲಕ್ಷ ರೂಪಾಯಿಗೂ ಅಧಿಕ ದಂಡ ನೀಡಬೇಕು ಎಂದು ನೋಟಿಸ್ ನೀಡಿದೆ.
ಇದನ್ನೂ ಓದಿ:ಚಿದಂಬರಂ ಸ್ವಂತ ಶಕ್ತಿ ಮೇಲೆ ಒಂದು ಗ್ರಾಮ ಪಂಚಾಯತ್​ನಲ್ಲಿ ಕೂಡ ಗೆಲ್ಲಲಾರರು; ಅವರು ಚಿದಂಬರಂ ಅಲ್ಲ ಡಿಸಾಸ್ಟ್ರಂ: ಪ್ರಲ್ಹಾದ ಜೋಶಿ
ಇನ್ನೊಬ್ಬ ನಿವಾಸಿ ಲೀಲಾ ವರ್ಮಾ ಎಂಬವರಿಗೂ ಬೀದಿನಾಯಿಗೆ ಅನ್ನ ಹಾಕಿದ್ದಕ್ಕೆ ದಂಡ ಹಾಕಲಾಗಿದ್ದು, ಅವರ ದಂಡದ ಮೊತ್ತ 6 ಲಕ್ಷ ರೂಪಾಯಿಗೂ ಅಧಿಕ. ಇಲ್ಲಿನ ಸೆಕ್ಯುರಿಟಿ ಗಾರ್ಡ್ ಬೀದಿನಾಯಿಗೆ ಅನ್ನ ಹಾಕುವವರ ಹೆಸರನ್ನು ನೋಟ್ ಮಾಡಿಕೊಂಡು ಸಮಿತಿಗೆ ನೀಡುತ್ತಿದ್ದು, ಆ ಪ್ರಕಾರ ದಂಡ ಹಾಕುತ್ತಿದ್ದಾರೆ ಎಂದು ಅಂಶು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!
ಬೀದಿನಾಯಿಗಳಿಂದಾಗಿ ಟ್ಯೂಷನ್​ಗೆ ಹೋಗುವ ಮಕ್ಕಳು ಭಯದಲ್ಲೇ ಓಡಾಡುವಂತಾಗಿದೆ. ಮತ್ತೊಂದೆಡೆ ವಯಸ್ಸಾದವರು ಕೂಡ ಮುಕ್ತವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ನಾಯಿಗಳ ಬೊಗಳುವಿಕೆಯಿಂದ ರಾತ್ರಿ ನೆಮ್ಮದಿಯಲ್ಲಿ ನಿದ್ರೆ ಮಾಡಲಿಕ್ಕೂ ತೊಂದರೆ ಆಗುತ್ತದೆ. ಅದೇ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ. ಅಷ್ಟಕ್ಕೂ ಬೀದಿನಾಯಿಗಳಿಗೆ ಅನ್ನ ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದರೂ, ಕೆಲವರು ತೆರೆದ ಪ್ರದೇಶದಲ್ಲಿ ಹಾಕುತ್ತಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿ ವಿನಿತಾ ಶ್ರೀನಂದನ್ ಸಮಜಾಯಿಷಿ ನೀಡಿದ್ದಾರೆ.
ದೇಶದಲ್ಲಿ ಶತಕ ದಾಟಿತು ಒಮಿಕ್ರಾನ್ ಪ್ರಕರಣ; ವೇಗವಾಗಿ ಹರಡುತ್ತಿರುವುದು ಗೋಚರ, ಹೆಚ್ಚಾಯ್ತು ರೂಪಾಂತರಿ ವೈರಸ್​ ಆತಂಕ!
ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six + nine =
Remember me
