ಭೋಪಾಲ್​:ಶೌಚಗೃಹದಲ್ಲಿ ಅಜ್ಜನ ಸಹಾಯಕ್ಕೆ ಇಟ್ಟಿರುವ ಹಗ್ಗವೇ ಮೊಮ್ಮಗನಿಗೆ ಉರುಳಾಗಿರುವ ಘಟನೆ ಭೋಪಾಲದಲ್ಲಿ ನಡೆದಿದೆ.ಉರುಳಿಗೆ ಬಲಿಯಾದ ಎಂಟು ವರ್ಷದ ಬಾಲಕ ಅಭಿನಂತ್​ ತಿವಾರಿ.
ಈತ ಬೆಳಗ್ಗೆ ಶೌಚಕ್ಕೆ ಹೋಗಿದ್ದಾನೆ. ಬಾಲಕನ ಅಜ್ಜ ಕಮೊಡೊದಿಂದ ಮೇಲೆ ಏಳುವಾಗಿ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಹಗ್ಗವನ್ನು ಕಟ್ಟಲಾಗಿತ್ತು. ಬಾಲಕ ಆ ಹಗ್ಗವನ್ನು ಸುಮ್ಮನೆ ಕುತ್ತಿಗೆಗೆ ಬಿಗಿದುಕೊಂಡಿದ್ದಾರೆ. ದುರದೃಷ್ಟಕ್ಕೆ ಬಾಲಕನ ಕಾಲು ಜಾರಿಬಿಟ್ಟಿದೆ. ಇದರಿಂದ ಕುತ್ತಿಗೆಗೆ ಸಿಲುಕಿದ್ದ ಹಗ್ಗವೇ ಉರುಳಾಗಿಬಿಟ್ಟಿದೆ.
ಇದನ್ನೂ ಓದಿ:ಮಗುವಿನ ಮೇಲೆ ಬೀದಿನಾಯಿ ದಾಳಿ
ಜಾರಿಬಿದ್ದ ಶಬ್ದಕ್ಕೆ ಒಳಗಡೆ ಹೋಗಿ ಪಾಲಕರು ನೋಡಿದಾಗ ಬಾಲಕನ ಸ್ಥಿತಿ ಗಂಭೀರವಾಗಿತ್ತು. 2-3 ಆಸ್ಪತ್ರೆಗಳಿಗೆ ಹೋದರೂ ಬಾಲಕನನ್ನು ಅಡ್ಮಿಟ್​ ಮಾಡಿಕೊಳ್ಳಲಿಲ್ಲ. ನಂತರ ಬೇರೊಂದು ಆಸ್ಪತ್ರೆಗೆ ಸಾಗಿಸುವಾಗಲೇ ಬಾಲಕ ಮೃತಪಟ್ಟಿದ್ದಾನೆ!
ಮನೆಯಲ್ಲಿ ವಯಸ್ಸಾದವರು ಇರುವಾಗ ಅಥವಾ ಇನ್ನಾರಿಗೇ ಆಗಲಿ ಇಂಥದ್ದೊಂದು ಅನುಕೂಲ ಕಲ್ಪಿಸಿದ ಸಮಯದಲ್ಲಿ ಅದರ ಬಗ್ಗೆ ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ತಿಳಿಹೇಳಬೇಕು ಎಂದು ಪೊಲೀಸ್​ ಇಲಾಖೆ ಇದೇ ವೇಳೆ ಸೂಚನೆ ಕೊಟ್ಟಿದೆ.
ಸಚಿವೆಗೆ ‘ಕೋವಿಡ್​ ರಾಣಿ’ ಎಂದರೆ ತಪ್ಪೇನಿದೆ- ಕಾಂಗ್ರೆಸ್​ ಮುಖಂಡನ ಪ್ರಶ್ನೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − eleven =
Remember me
