ಸೂರತ್​:ಆಡಿ ನಲಿಯಬೇಕಾದ ವಯಸ್ಸಲ್ಲಿ 8 ವರ್ಷದ ಬಾಲಕಿಯೊಬ್ಬಳು ಸನ್ಯಾಸತ್ವ ಸ್ವೀಕರಿಸಿದ್ದಾಳೆ ಅಂದರೆ ಅದಕ್ಕಿಂತ ಅಚ್ಚರಿ ಮತ್ತೊಂದಿಲ್ಲ. ಅದರಲ್ಲೂ ಡೈಮಂಡ್​ ವ್ಯಾಪಾರಿಯ ಮಗಳು ಅಂದ್ರೆ ನಿಜಕ್ಕೂ ಹುಬ್ಬೇರಿಸುವ ಸಂಗತಿಯೇ! ಯಾವುದರಲ್ಲೂ ಕಡಿಮೆ ಇಲ್ಲದ, ಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಬಂದವಳು ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕ ಜಗತ್ತಿನ ಕಡೆ ಹೆಜ್ಜೆ ಇಡುತ್ತಿರುವುದು ನಿಜಕ್ಕೂ ಸೋಜಿಗ ವಿಚಾರವೇ ಸರಿ.
ಸನ್ಯಾಸತ್ವ ಸ್ವೀಕರಿಸಿದ ಬಾಲಕಿಯ ಹೆಸರು ದೇವಾಂಶಿ. ಗುಜರಾತ್​ ಮೂಲದ ವಜ್ರದ ವ್ಯಾಪಾರಿ ಧನೇಶ್​ ಮತ್ತು ಆಮಿ ಸಂಘ್ವಿ ದಂಪತಿಯ ಪುತ್ರಿ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಮೂವರಲ್ಲಿ ದೇವಾಂಶಿ ಹಿರಿಯ ಮಗಳು. ಕೋಟ್ಯಂತರ ರೂಪಾಯಿ ಆಸ್ತಿ, ಐಷಾರಾಮಿ ಜೀವನ ಇದ್ದರೂ ಸಹ ದೇವಾಂಶಿ ಸನ್ಯಾಸತ್ವ ಸ್ವೀಕರಿಸಿರುವುದು ಹಲವರ ಹುಬ್ಬೇರಿಸಿದೆ.
ಸೂರತ್‌ನಲ್ಲಿ ನೂರಾರು ಜನರು ಭಾಗವಹಿಸಿದ್ದ ಸಮಾರಂಭದಲ್ಲಿ ಬಾಲಕಿ ದೇವಾಂಶಿ, ಜೈನ ಸನ್ಯಾಸಿ ಆಚಾರ್ಯ ವಿಜಯ್ ಕೀರ್ತಿಶ್ಸೂರಿ ಅವರಿಂದ ಸನ್ಯಾಸ ‘ದೀಕ್ಷೆ’ ಪಡೆದರು. ಶನಿವಾರ ಆರಂಭವಾದ ದೀಕ್ಷಾ ಕಾರ್ಯಕ್ರಮ ಇಂದು ದೀಕ್ಷೆ ಪಡೆಯುವುದರೊಂದಿಗೆ ಅಂತ್ಯವಾಗಿದೆ. ಸಂಬಂಧಿಕರು ಸಹ ಧಾರ್ಮಿಕ ಆಚರಣೆ ನೆರವೇರಿಸಿದ್ದಾರೆ.
ಬಾಲ್ಯದಲ್ಲೇ ದೇವಾಂಶಿ ಧಾರ್ಮಿಕ ಜೀವನದ ಕಡೆ ಒಲವು ತೋರಿಸಿದಳಂತೆ. ಈ ಮುಂಚೆಯೇ ಸನ್ಯಾಸಿಗಳೊಂದಿಗೆ ಆಕೆ 700 ಕಿ.ಮೀ. ಪಾದಯಾತ್ರೆ ಮಾಡಿದ್ದಳಂತೆ. ದೇವಾಂಶಿಗೆ ಐದು ಭಾಷೆಗಳು ಗೊತ್ತಿದೆ. ದೇವಾಂಶಿ 4 ವರ್ಷದ ಸಹೋದರಿಯನ್ನು ಹೊಂದಿದ್ದಾಳೆ.
ಅಂದಹಾಗೆ ಧನೇಶ್​ ಸಾಂಘ್ವಿ ಅವರು ಗುಜರಾತ್​ನಲ್ಲಿ ಮೂಂಚೂಣಿಯಲ್ಲಿರುವ ಡೈಮಂಡ್ ವ್ಯಾಪಾರಿಯಾಗಿದ್ದಾರೆ. ಪ್ರಸ್ತುತ ಸೂರತ್​ನಲ್ಲಿರುವ ಸಾಂಘ್ವಿ ಆ್ಯಂಡ್​ ಸನ್ಸ್​ ಡೈಮಂಡ್​ ಕಂಪನಿಯ​ ಮುಖ್ಯಸ್ಥರಾಗಿದ್ದಾರೆ. ಇದೀಗ ಅವರ ಹಿರಿಯ ಮಗಳು ದೇವಾಂಶಿ, ಚಿಕ್ಕ ವಯಸ್ಸಿನಲ್ಲೇ ಐಷಾರಾಮಿ ಜೀವನದ ಮೇಲೆ ವೈರಾಗ್ಯ ತಾಳಿ, ಸನ್ಯಾಸತ್ವ ಸ್ವೀಕರಿಸಿದ್ದಾರೆ.(ಏಜೆನ್ಸೀಸ್​)
ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೊಡೆದಾಡಿ ಬ್ಯಾಂಕ್ ದರೋಡೆ ತಪ್ಪಿಸಿದ ಮಹಿಳಾ ಕಾನ್​​ಸ್ಟೇಬಲ್​ಗಳು!

ಬಾಬುಗೆ ಕೋರ್ಟ್​ನಲ್ಲಿ ಜಯ; ‘ಸ್ವಾತಿಮುತ್ತಿನ ಮಳೆ ಹನಿಯೇ’ ಶೀರ್ಷಿಕೆಯನ್ನು ರಮ್ಯಾ ಬಳಸುವಂತಿಲ್ಲ!

ಕಲ್ಯಾಣ ಕರ್ನಾಟಕದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ನಮೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
