ಭೋಪಾಲ್​:ಈಗಿನ್ನೂ ಮನೆಯಿಂದ ಹೊರಬಂದು ಆಟವಾಡುತ್ತಿದ್ದ ಬಾಲಕಿಯನ್ನು ಕಿರಾತಕನೊಬ್ಬ ಕಸದ ತೊಟ್ಟಿಯೊಳಗೆ ಹೊತ್ತೊಯ್ದು ರೇಪ್​ ಮಾಡಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ಈ ವಿಚಾರವನ್ನು ಮುಚ್ಚಿಡಲು ಆತ ಬಾಲಕಿಗೆ 5 ರೂಪಾಯಿ ನೀಡಿರುವುದಾಗಿ ತಿಳಿಸಲಾಗಿದೆ.
ಭೋಪಾಲ್​ನ ಅಯೋಧ್ಯಾ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮನೆಯ ಬಳಿ ಆಟವಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಕರೆದ ವ್ಯಕ್ತಿಯೊಬ್ಬ, 100 ರೂಪಾಯಿ ಕೊಟ್ಟು ಅಂಡಿಯಿಂದ ತಂಬಾಕು ತೆಗೆದುಕೊಂಡು ಬಾ ಎಂದು ಕಳುಹಿಸಿದ್ದಾನೆ. ಏನೂ ಅರಿಯದ ಬಾಲಕಿ ತಂಬಾಕು ತಂದು ಆತನ ಕೈಗೆ ಕೊಡಲು ಮುಂದಾಗಿದ್ದಾಳೆ. ಆಗ ಆತ ನನಗೆ ಬೇಡ, ಅಲ್ಲಿ ಕಸದ ತೊಟ್ಟಿಯ ಬಳಿ ಇರುವ ಅಂಕಲ್​ಗೆ ಕೊಡು ಎಂದು ಹೇಳಿದ್ದಾನೆ. ಆಕೆ ಅವನ ಬಳಿ ಹೋಗಿ ಕೊಡಲು ಮುಂದಾದಾಗ ಎಳೆದುಕೊಂಡ ವ್ಯಕ್ತಿ, ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ 5 ರೂಪಾಯಿಯನ್ನು ಆಕೆಯ ಕೈಗಿತ್ತು, ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಹೇಳಿ ಕಳುಹಿಸಿದ್ದಾನೆ.
ಮನೆಗೆ ಬಂದ ಬಾಲಕಿ ಕುಟುಂಬಸ್ಥರ ಎದುರು ನಡೆದ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಲಾಗಿದೆ. ಆರೋಪಿಗಾಗಿ ಬಲೆ ಬೀಸಿದ ಪೊಲೀಸರು, ಘಟನೆ ನಡೆದ ದಿನದಂದು ಸ್ಥಳದಲ್ಲಿ ಕಂಡುಬಂದ 40 ಅನುಮಾನಾಸ್ಪದ ಮಂದಿಯ ಫೋಟೋಗಳನ್ನು ಬಾಲಕಿಯ ಮುಂದಿಟ್ಟಿದ್ದಾರೆ. ಆಕೆ ಆರೋಪಿ ಯಾರೆಂದು ತೋರಿಸಿದ್ದಾಳೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ ರವಿ ಹೆಸರಿನ ವ್ಯಕ್ತಿಯನ್ನು ಶನಿವಾರದಂದು ಬಂಧಿಸಲಾಗಿದೆ. ಆ ವೇಳೆ ಆತ ಗುಜರಾತ್​ಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಎನ್ನುವುದು ತಿಳಿದುಬಂದಿದೆ. (ಏಜೆನ್ಸೀಸ್​)
ಶುಭ ಬಿಗ್​ಬಾಸ್​ನಲ್ಲಿದ್ದರೆ, ಆಕೆಯ ಭಾವಿ ಪತಿ ಏನು ಮಾಡುತ್ತಿದ್ದಾರೆ ಗೊತ್ತಾ? ಸುದೀಪ್​ ಬಿಚ್ಚಿಟ್ಟ ಸತ್ಯ ಏನು?

VIDEO| ಅಬ್ಬಬ್ಬಾ! ಜ್ವಾಲಾಮುಖಿಯ ರುದ್ರತಾಂಡವ ಹೇಗಿದೆ ನೋಡಿ! ಎದೆ ಝಲ್​ ಎನಿಸುವ ವಿಡಿಯೋ ಇದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 1 =
Remember me
