ನವದೆಹಲಿ:ನನಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ವೆಂಟಿಲೇಟರ್​ ಚಿಕಿತ್ಸೆ ನೀಡಬೇಕು ಎಂದು ಹೈಕೋರ್ಟ್​ಗೆ ಮನವಿ ಮಾಡಿದ್ದ 80ವರ್ಷದ ವೃದ್ಧ, ಅರ್ಜಿ ವಿಚಾರಣೆಗೂ ಮೊದಲೇ ಮೃತಪಟ್ಟಿದ್ದಾರೆ.
ಮೋತಿರಾಮ್​ ಗೋಯಲ್​ ಎಂಬ ವೃದ್ಧ ಕರೊನಾ ಸೋಂಕಿಗೆ ತುತ್ತಾಗಿದ್ದರು. ವೆಂಟಿಲೇಟರ್​ ವ್ಯವಸ್ಥೆ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ತಮಗೆ ಉಚಿತವಾಗಿ ಚಿಕಿತ್ಸೆ ನೀಡಲು ಆದೇಶ ನೀಡಿ ಎಂದು ಮನವಿ ಮಾಡಿ ದೆಹಲಿ ಹೈಕೋರ್ಟ್​ಗೆ ಮನವಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಮಂಕಿ V/S ಲೆಪರ್ಡ್: ಮಂಗನ ಹಿಡಿತಕ್ಕೆ ಸೋಲಲೇ ಬೇಕಾಯ್ತು ಈ ಚಿರತೆ
ಇಂದು ಶುಕ್ರವಾರ ಅವರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ ಕೈಗೆತ್ತಿಕೊಳ್ಳುವುದಿತ್ತು. ಆದರೆ ವೃದ್ಧ ಜೂ.3ರಂದು, ಅಂದರೆ ವಿಚಾರಣೆಗೆ ಎರಡು ದಿನಗಳ ಮೊದಲು ಮೃತಪಟ್ಟಿದ್ದಾರೆ. ಇನ್ನೂ ಒಂದು ವಿಚಿತ್ರವೆಂದರೆ ಅವರು ಕೋರ್ಟ್​ಗೆ ಮನವಿ ಸಲ್ಲಿಸಿದ್ದರೂ ಕೂಡ ಜೂ.3ರಂದೇ. ಅರ್ಜಿ ಸಲ್ಲಿಸಿದ ದಿನವೇ ವೃದ್ಧ ಮೃತಪಟ್ಟಿದ್ದಾರೆ.
ಮೋತಿರಾಮ್​ ಗೋಯಲ್​ ಅವರು ಅತಿಯಾದ ಜ್ವರದಿಂದ ಜೈನ್​ ಆಸ್ಪತ್ರೆಗೆ ಮೇ 25ರಂದು ದಾಖಲಾಗಿದ್ದರು. ಮೇ 30ರಂದು ಮೊದಲ ಬಾರಿಗೆ ಕೊವಿಡ್​-19 ಪಾಸಿಟಿವ್​ ಎಂದು ವರದಿ ಬಂದಿತ್ತು. ಜೂ.1ರಂದು ಟೆಸ್ಟ್ ಮಾಡಿದಾಗಲೂ ಕರೊನಾ ದೃಢಪಟ್ಟಿತ್ತು.
ಅಲ್ಲಿಂದ ಅವರ ಆರೋಗ್ಯ ಸ್ಥಿತಿ ತುಂಬ ಹದಗೆಡುತ್ತ ಹೋಗಿ, ಚಿಕಿತ್ಸೆಗೆ ವೆಂಟಿಲೇಟರ್​ ಅಗತ್ಯಬಿತ್ತು. ಆದರೆ ಅವರು ಗೋಯಲ್​ ದಾಖಲಾಗಿದ್ದ ಆಸ್ಪತ್ರೆ ವೈದ್ಯರು ತಮ್ಮ ಬಳಿ ಅಗತ್ಯ ಸಲಕರಣೆಗಳು ಇಲ್ಲ. ವೆಂಟಿಲೇಟರ್​ ಇಲ್ಲ. ಹಾಗಾಗಿ ಅವರನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಿ ಎಂದು ವೃದ್ಧನ ಮಗನ ಮೇಲೆ ಒತ್ತಡ ಹಾಕಿದರು.
ಹಾಗೇ ವೃದ್ಧನ ಮಗ ಹಲವು ಪ್ರಮುಖ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರೂ ಅವರೂ ಸಹ ಬೆಡ್​ಗಳ ಕೊರತೆಯಂಥ ನೆಪ ಹೇಳಿ ಗೋಯಲ್​ ಅವರನ್ನು ಅಡ್ಮಿಟ್​ ಮಾಡಿಕೊಂಡಿರಲಿಲ್ಲ. ಹಾಗೇ ವೆಂಟಿಲೇಟರ್​ ಚಿಕಿತ್ಸೆಗೆ ಸಿಕ್ಕಾಪಟೆ ಹಣದ ಬೇಡಿಕೆಯನ್ನಿಟ್ಟಿವು.
ಇದನ್ನೂ ಓದಿ:ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆ: ಟ್ರಂಪ್‌ಗೆ ಹಿನ್ನಡೆಯೋ, ಮುನ್ನಡೆಯೋ?
ಈ ವೃದ್ಧ ತುಂಬ ಬಡವರಾಗಿದ್ದರು. ಚಿಕಿತ್ಸೆಗೆ ಭರಿಸುವ ಹಣ ಅವರಲ್ಲಿ ಇರಲಿಲ್ಲ. ಕೂಡಲೇ ಅವರು ಲಾಯರ್ ಆರ್​​. ಪಿ.ಎಸ್​.​ ಭಟ್ಟಿ ಮೂಲಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ, ಬಿಪಿಎಲ್​ ಹೊಂದಿರುವ ತಮಗೆ ಯಾವುದಾದರೂ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. (ಏಜೆನ್ಸೀಸ್​)
ಇಸ್ರೇಲ್​​​: ​ಡಜನ್​ಗಟ್ಟಲೆ ಶಾಲೆಗಳಿಗೆ ಬೀಗ, ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕ್ವಾರಂಟೈನ್​​ಗೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
