ನವದೆಹಲಿ:ಲಖನೌ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿರುವ 80 ವರ್ಷದ ವೃದ್ಧನೋರ್ವ ಮನೆಗೆ ತೆರಳುವ ಕಾರ್ಮಿಕರಿಗೆ ಉಚಿತವಾಗಿ ಸಹಾಯ ಮಾಡುತ್ತಿರುವ ವಿಡಿಯೋ ವರದಿ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಸಾಗಿಸಲು ಸರ್ಕಾರ ಶ್ರಮಿಕ್ ವಿಶೇಷ ರೈಲುಗಳನ್ನು ಪ್ರಾರಂಭಿಸಿದ ನಂತರ, ಮುಜೀಬುಲ್ಲಾ ರೆಹ್​​​ಮಾನ್ ಚಾರ್ಬಾಗ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅವರ ಸಾಮಾನುಗಳನ್ನು ಉಚಿತವಾಗಿ ಸಾಗಿಸುವ ಸೇವೆ ನೀಡುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರು ರೈಲ್ವೆ ನಿಲ್ದಾಣದಲ್ಲೇ ಗಂಟಲುದ್ರವ ಪರೀಕ್ಷೆ ಕೇಂದ್ರ ಆರಂಭ
ರೆಹಮಾನ್ ಪ್ರತಿದಿನ ಸುಮಾರು 8-10 ಗಂಟೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಾರೆ. ರೈಲ್ವೆ ಪೋರ್ಟರ್‌ ಸಮವಸ್ತ್ರ ಹಾಗೂ ಮಾಸ್ಕ್ ಧರಿಸಿ, ರೈಲುಗಳು ಪ್ಲಾಟ್‌ಫಾರ್ಮ್‌ಗೆ ಬರುವವರೆಗೆ ಕಾಯುತ್ತಿರುತ್ತಾರೆ. ಪ್ರಯಾಣಿಕರು ಬಂದಿಳಿಯುತ್ತಲೇ ಅವರ ಸಾಮಾನುಗಳನ್ನು ಉಚಿತವಾಗಿ ಸಾಗಿಸುತ್ತಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 80ರ ಈ ಇಳಿವಯಸ್ಸಿನಲ್ಲೂ ಅಗತ್ಯವಿರುವವರಿಗೆ ಉಚಿತ ಸೇವೆ ನೀಡುತ್ತಿರುವ ರೆಹ್​ಮಾನ್​ರ ಸಾಮಾಜಿಕ ಕಳಕಳಿಗೆ ನೆಟ್ಟಿಗರು ಮನ ಸೋತಿದ್ದಾರೆ. ಜಾಲತಾಣದಲ್ಲಿ ಅವರಿಗೆ ನೆಟ್ಟಿಗರು ಗೌರವ, ಪ್ರೀತಿ ಸಲ್ಲಿಸಿದ್ದಾರೆ.
ಮರಳಿನಲ್ಲಿ ಅರಳಿತು ಸೋನು ಸೂದ್​ ಕಲಾಕೃತಿ; ಸುದರ್ಶನ್​ ಪಟ್ನಾಯಕ್ ಕಲಾನಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 7 =
Remember me
