ಕರೀಂನಗರ:ರಾಖಿ ಹಬ್ಬ ಎಂದಾಕ್ಷಣ ಅಣ್ಣ ತಂಗಿ, ಅಣ್ಣನ ನಡುವಿನ ಬಾಂಧವ್ಯ ನೆನಪಾಗುತ್ತದೆ. ರಕ್ಷಾ ಬಂಧನವು ಅವರ ನಡುವಿನ ಬಾಂಧವ್ಯವನ್ನು ಸಂಕೇತಿಸುತ್ತದೆ. 80 ವರ್ಷದ ಮಹಿಳೆಯೊಬ್ಬರು ತನ್ನ ಕಿರಿಯ ಸಹೋದರನಿಗೆ ರಾಖಿ ಕಟ್ಟಲು ಒಬ್ಬಂಟಿಯಾಗಿ 8 ಕಿಲೋಮೀಟರ್ ನಡೆದು ಬಂದಿರುವ ಘಟನೆ ತೆಲಂಗಾಣದ ಕರೀಂನಗರ ಬಳಿ ನಡೆದಿದೆ.ಇದನ್ನೂ ಓದಿ:ಹಾಸಿಗೆ ಕೆಳಗೆ ಪತ್ತೆಯಾಯ್ತು 12 ವರ್ಷದ ಬಾಲಕನ ಮೃತದೇಹ: ಸ್ನೇಹಿತನನ್ನು ನೋಡಿ ಉಳಿದವರಿಗೆ ಶಾಕ್​..!
ಕರೀಂನಗರ ಜಿಲ್ಲೆಯ ಕೊತ್ತಪಲ್ಲಿಯ 80 ವರ್ಷದ ಮಹಿಳೆಯೊಬ್ಬರು ತನ್ನ ಕಿರಿಯ ಸಹೋದರನಿಗೆ ರಾಖಿ ಕಟ್ಟಲು ಬರಿಗಾಲಿನಲ್ಲಿ ಬಿಸಿಲನ್ನೂ ಲೆಕ್ಕಿಸದೇ 8 ಕಿ.ಮೀ. ನಡೆದಿದ್ದಾಳೆ. ಈ ವೇಳೆ ಆಕೆಯನ್ನು ಕಂಡ ಯುವಕನೊಬ್ಬ, ನಡೆದುಕೊಂಡು  ಎಲ್ಲಿಗೆ ಹೋಗುತ್ತೀಯಾ?’ ಎಂದು ಕೇಳಿದಾಗ ಆಕೆ ತಾನು ಕೊತ್ತಪಲ್ಲಿಯವಳು, ತಾನು ಕೊಂಡಯ್ಯಪಲ್ಲಿಯಲ್ಲಿರುವ ತನ್ನ ಕಿರಿಯ ಸಹೋದರನಿಗೆ ರಾಖಿ ಕಟ್ಟಲು ಹೊರಟಿದ್ದಾಗಿ ತಿಳಿಸಿದ್ದಾಳೆ.
This grandma walked 8 km barefoot to tie#Rakhito her younger brother in Telangana.
Rakhi is not just a festival but a symbol of love, closeness and affection between brother and sister.
Truly an emotional video❤️🙏#RakshaBandhanpic.twitter.com/1H5AhKOW9D
— Vishnu Vardhan Reddy (@SVishnuReddy)August 31, 2023

ಈ ವಿಡಿಯೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಮನುಷ್ಯ ಸಂಬಂಧಕ್ಕಿಂತ ಹಣವೇ ಮುಖ್ಯವಾಗಿರುವ ಈ ಕಾಲದಲ್ಲಿ ಇಂತಹ ಪ್ರೀತಿ ನಿಜಕ್ಕೂ ಪವಾಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಹದಲ್ಲಿ ಶಕ್ತಿ ಕಡಿಮೆಯಾಗಿದ್ದರೂ ತನ್ನ ಅಣ್ಣನ ಮೇಲಿನ ಪ್ರೀತಿಗೆ ಸಾವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
