ಜಮ್ಮುಕಾಶ್ಮೀರ:84 ವರ್ಷದ ವೃದ್ಧನೊಬ್ಬ ಇ ತ್ಯಾಜ್ಯ ಬಳಸಿಕೊಂಡು ಎಲೆಕ್ಟ್ರಿಕ್ ಸೈಕಲ್ ನಿರ್ಮಿಸಿದ್ದಾರೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಜಮ್ಮು ಕಾಶ್ಮೀರದ ಉಧಮಪುರ ನಿವಾಸಿಯಾಗಿರುವ  84ರ ಹರೆಯದ ಮುಂಶಿ ರಾಮ್, ಬಳಕೆ ಮಾಡಿ ಬೀಸಾಡಿದ ಲ್ಯಾಪ್‌ಟಾಪ್ ಬ್ಯಾಟರಿ ಸೇರಿದಂತೆ ಹಲವು ಇ ತ್ಯಾಜ್ಯಗಳನ್ನು ಬಳಸಿಕೊಂಡು ಸಾಮಾನ್ಯ ಸೈಕಲನ್ನು ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸಲಾಗಿದೆ. ಇಕೋ ಫ್ರೆಂಡ್ಲಿ ಇ ಸೈಕಲ್ ಸೋಲಾರ್ ಹಾಗೂ ವಿದ್ಯುತ್‌ನಲ್ಲಿ ಚಾರ್ಜ್ ಆಗಲಿದೆ.
ಪ್ರಧಾನಿ ನರೇಂದ್ರ ಮೋದಿಯ ವೋಕಲ್ ಫಾರ್ ಲೋಕಲ್ ಹಾಗೂ ಗ್ರೀನ್ ಇಂಡಿಯಾ ಯೋಜನೆಯಿಂದ ಪ್ರೇರಿತವಾಗಿರುವ ಮುಂಶಿ ರಾಮ್ ತಮ್ಮ ಅಗತ್ಯಕ್ಕೆ ತಕ್ಕಂತೆ ಸಾಮಾನ್ಯ ಸೈಕಲನ್ನು ಇದೀಗ ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸಿದ್ದಾರೆ.
ಇ ಬೈಸಿಕಲ್ ನಿರ್ಮಾಣ:ಲ್ಯಾಪ್‌ಟಾಪ್ ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಬಳಸಿ ಇ ಬೈಸಿಕಲ್ ನಿರ್ಮಾಣ ಮಾಡಲಾಗಿದೆ. ಯಾವುದೇ ಹೊಸ ವಸ್ತುಗಳನ್ನು ಖರೀದಿಸಿಲ್ಲ. ಎಲ್ಲವೂ ಬಳಸಿ ಬಿಸಾಡಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನೇ ಬಳಸಲಾಗಿದೆ. ಚಾರ್ಜ್ ಮಾಡಲು ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು 50 ಕಿಲೋಮೀಟರ್‌ಗೂ ಹೆಚ್ಚು ದೂರ ಈ ಸೈಕಲ್ ಕ್ರಮಿಸಲಿದೆ.
ಮಾತನಾಡಿದ ಮುಂಶಿ ರಾಮ್, ನನ್ನ ಗೆಳೆಯರು ಕೂಡ ಇದೀಗ ಇದೇ ರೀತಿ ತಮಗೂ ಇ ಸೈಕಲ್ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಖುಷಿ ಇದೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + two =
Remember me
