
ಮುಂಬೈ:ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ವಿದ್ಯಾರ್ಥಿಗಳು ನೇಮಕಾತಿಯಲ್ಲಿ ಅದ್ಭುತ ಯಶಸ್ಸನ್ನು ಗಳಿಸಿದ್ದಾರೆ.
ದೇಶ ಮತ್ತು ವಿದೇಶಗಳ ಕಂಪನಿಗಳಿಂದ ಭಾರೀ ಸಂಬಳದ ಉದ್ಯೋಗದ ಆಫರ್​ಗಳನ್ನು ಸಾಕಷ್ಟು ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆ.
ಭಾರತದಲ್ಲಿ ವಾರ್ಷಿಕ ಸಂಬಳವಾಗಿ 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪ್ಯಾಕೇಜ್​ಗಳನ್ನು 85 ವಿದ್ಯಾರ್ಥಿಗಳು ಪಡೆದುಕೊಂಡಿರುವುದು ಗಮನಾರ್ಹವಾಗಿದೆ.
ಐಐಟಿ ಬಾಂಬೆ ಈ ವರ್ಷದ ಉದ್ಯೋಗ ನಿಯೋಜನೆ ಋತುವಿನಲ್ಲಿ, ಪಡೆದ ಅನೇಕ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಈ ಉದ್ಯೋಗಗಳಿಗೆ ಸರಾಸರಿ 36.9 ಲಕ್ಷ ರೂಪಾಯಿ ಪ್ಯಾಕೇಜ್ ಸಂಬಳ ನೀಡಲಾಗಿದೆ. ಕಳೆದ ವರ್ಷದ ಪ್ಯಾಕೇಜ್‌ 32.25 ಲಕ್ಷ ರೂ. ಆಗಿತ್ತು.
ಐಐಟಿ ಬಾಂಬೆಯಲ್ಲಿನ 2023–24ರ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಮೊದಲಾರ್ಧದಲ್ಲಿ 388 ಸಂಸ್ಥೆಗಳು ಭಾಗವಹಿಸಿದ್ದವು.ಇಂಜಿನಿಯರಿಂಗ್, ತಂತ್ರಜ್ಞಾನ, ಹಣಕಾಸು, ಬ್ಯಾಂಕಿಂಗ್, ಫಿನ್‌ಟೆಕ್ ಸೇರಿದಂತೆ ವ್ಯಾಪಕ ಶ್ರೇಣಿಯ ನೇಮಕಾತಿಗಾಗಿ ಈ ಪ್ಲೇಸ್‌ಮೆಂಟ್ ಸೆಷನ್​ನಲ್ಲಿ ವಿವಿಧ ಕಂಪನಿಗಳು ಭಾಗವಹಿಸಿದ್ದವು. ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಮತ್ತು ಡೇಟಾ ಸೈನ್ಸ್ ಕಂಪನಿಗಳು ಕೂಡ ಇದ್ದವು.
ಜಪಾನ್, ತೈವಾನ್, ದಕ್ಷಿಣ ಕೊರಿಯಾ, ನೆದರ್​ಲೆಂಡ್​, ಸಿಂಗಾಪುರ್, ಹಾಂಗ್ ಕಾಂಗ್ ಸೇರಿದಂತೆ ವಿದೇಶಗಳ ಕಂಪನಿಗಳಿಂದ 63 ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದುಕೊಂಡರು.
ನೇಮಕಾತಿಗಾಗಿ ಕ್ಯಾಂಪಸ್‌ಗೆ ಭೇಟಿ ನೀಡಿದ ಕೆಲವು ಉನ್ನತ ನೇಮಕಾತಿ ಕಂಪನಿಗಳಲ್ಲಿ ಐಸಿಐಸಿಐ ಲೊಂಬಾರ್ಡ್, ಐಡಿಯಾ ಫೋರ್ಜ್, ಐಎಂಸಿ ಟ್ರೇಡಿಂಗ್, ಇಂಟೆಲ್, ಜಾಗ್ವಾರ್ ಲ್ಯಾಂಡ್ ರೋವರ್, ಜೆಪಿ ಮೋರ್ಗಾನ್ ಚೇಸ್, ಜೆಎಸ್​ಡಬ್ಲ್ಯು, ಕೋಟಾಕ್ ಸೆಕ್ಯುರಿಟೀಸ್, ಮಾರ್ಷ್ ಮೆಕ್ಲೆನ್ನನ್, ಮಹೀಂದ್ರಾ ಗ್ರೂಪ್, ಮೈಕ್ರಾನ್, ಮೈಕ್ರೋಸಾಫ್ಟ್, ಮೋರ್ಗನ್ ಸ್ಟಾನ್ಲಿ, ಮರ್ಸಿಡಿಸ್-ಬೆನ್ಜ್, ಮೊದಲಾದವು ಇದ್ದವು ಎಂದು ಐಐಟಿ ಬಾಂಬ್​ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + twenty =
Remember me
