ಮುಂಬೈ:ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸಿಲಿಂಡರ್ ಬಳಿಕ ಬೆಲೆ ಏರಿಕೆ ಬರೆ ಔಷಧಕ್ಕೂ ತಟ್ಟಿದೆ. ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯಲ್ಲಿರುವ ಸುಮಾರು 850ಕ್ಕೂ ಅಧಿಕ ಔಷಧಗಳ ಬೆಲೆ ಏ.1ರಿಂದಲೇ ಶೇಕಡ 10.8ರಷ್ಟು ತುಟ್ಟಿಯಾಗಲಿವೆ.
2021ರ ಕ್ಯಾಲೆಂಡರ್ ವರ್ಷಕ್ಕೆ ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಶೇ.10.8 ಬದಲಾವಣೆ ಮಾಡಲಾಗುವುದೆಂದು ಭಾರತ ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರ (ಎನ್​ಪಿಪಿಎ) ಶುಕ್ರವಾರ ಪ್ರಕಟಿಸಿದೆ. ಅದರ ಫಲವಾಗಿ ಔಷಧಗಳ ಬೆಲೆ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಗಳು ಇದರಿಂದ ತುಟ್ಟಿಯಾಗಲಿವೆ. ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಆರ್ಥಿಕ ಸಲಹೆಗಾರರು ಒದಗಿಸಿದ ಡಬ್ಲ್ಯು ಪಿಐ ಆಧಾರದಲ್ಲಿ ಈ ಏರಿಕೆಗೆ ಎನ್​ಪಿಪಿಎ ಅನುಮೋದನೆ ನೀಡಿದೆ. ಇದರಿಂದಾಗಿ ನೋವು ನಿವಾರಕಗಳು, ಸೋಂಕು-ನಿರೋಧಕಗಳು, ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಆಂಟಿಬಯಾಟಿಕ್ ಸಹಿತ ಅಗತ್ಯ ಔಷಧಗಳ ಬೆಲೆ ಗ್ರಾಹಕರಿಗೆ ಬಿಸಿ ಮುಟ್ಟಿಸಲಿದೆ.
ಉದ್ಯಮದ ಸ್ವಾಗತ:ಔಷಧ ತಯಾರಿಕೆಯ ಕಚ್ಚಾ ಸಾಮಗ್ರಿಗಳ ಬೆಲೆಗಳು ತೀವ್ರ ದುಬಾರಿಯಾಗಿರುವುದರಿಂದ ಔಷಧಗಳ ಬೆಲೆಯೇರಿಕೆಗೆ ಅನುಮತಿ ನೀಡಿರುವುದು ಸಮಾಧಾನದ ಸಂಗತಿ ಎಂದು ಫಾರ್ವಸ್ಯುಟಿಕಲ್ ಉದ್ಯಮದವರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ವರ್ಷ ಶೇಕಡ 20 ಏರಿಕೆಗೆ ಅನುಮತಿ ಕೋರಲಾಗಿತ್ತು.
ಕಚ್ಚಾವಸ್ತು ಎಫೆಕ್ಟ್:ಕೆಲವು ಕಚ್ಚಾ ಸಾಮಗ್ರಿ ಗಳು ಹಾಗೂ ಸಹಾಯಕ ವಸ್ತುಗಳ ಬೆಲೆ ಗಳಂತೂ ಶೇ.60ರಿಂದ ಶೇ.70 ಏರಿದ್ದವು ಎಂದು ಔಷಧೋದ್ಯಮಿಗಳು ಹೇಳಿದ್ದಾರೆ. ಸಾಗಾಟ ಹಾಗೂ ಪ್ಯಾಕೇ ಜಿಂಗ್ ವೆಚ್ಚದಲ್ಲೂ ಅಗಾಧ ಏರಿಕೆಯಾಗಿದೆ ಎಂದು ಕಂಪನಿಯೊಂದರ ಅಧಿಕಾರಿ ಹೇಳಿದ್ದಾರೆ.
ಚೀನಾದಿಂದ ಆಮದು:ಕಾರ್ಡಿಯೋ- ವಾಸ್ಕು ್ಯಾರ್, ಡಯಾಬಿಟಿಸ್, ಆಂಟಿಬಯಾಟಿಕ್ಸ್, ಆಂಟಿ-ಇನ್​ಫೆಕ್ಟಿವ್ಸ್ ಮತ್ತು ವಿಟಮಿನ್​ಗಳ ತಯಾರಿಕೆಯಲ್ಲಿ ಬಳಸುವ ಹಲವು ಪ್ರಮುಖ ವಸ್ತು ಗಳನ್ನು ಪ್ರಮುಖವಾಗಿ ಚೀನಾದಿಂದ ಆಮದು ಮಾಡಿಕೊಳ್ಳ ಲಾಗುತ್ತದೆ. ಕೆಲವು ನಿರ್ದಿಷ್ಟ ಕಚ್ಚಾ ವಸ್ತುಗಳಿಗೆ (ಎಪಿಐ) ಚೀನಾದ ಮೇಲೆ ಭಾರತದ ಅವಲಂಬನೆ ಶೇ. 80ರಿಂದ ಶೇ.90ರಷ್ಟಿದೆ.
ಕರೊನಾ ಎಫೆಕ್ಟ್:2020ರಲ್ಲಿ ಚೀನಾದಲ್ಲಿ ಕರೊನಾ ಸಾಂಕ್ರಾಮಿಕತೆ ಉಲ್ಬಣಿಸಿದ ನಂತರ ಸರಬರಾಜು ಸರಪಳಿ ಅಸ್ತವ್ಯಸ್ತವಾಗಿದ್ದು ಕೊರತೆ ಗಳಿಂದಾಗಿ ದೇಶೀಯ ಕಂಪನಿಗಳ ವೆಚ್ಚದ ಹೊರೆ ಜಾಸ್ತಿಯಾಗಿತ್ತು.
ರಷ್ಯಾ ಹಾಗೂ ಯೂಕ್ರೇನ್ ನಡುವಿನ ಯುದ್ಧ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್​ಪಿಪಿಎ) ಔಷಧಗಳ ಬೆಲೆ ಹೆಚ್ಚಿಸಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ ಬಳಿಕವಷ್ಟೇ ಯಾವ ಔಷಧಗಳಿಗೆ ಎಷ್ಟು ದರ ಹೆಚ್ಚಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಬಳಿಕ, ಅಷ್ಟೇ ಮೊತ್ತಕ್ಕೆ ಔಷಧಗಳನ್ನು ಖರೀದಿಸಲಾಗುವುದು.
|ನಾಗರಾಜುಎಂಡಿ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ
ಹಣದುಬ್ಬರ, ಇಂಧನ ಬೆಲೆ ಏರಿಕೆಯಿಂದ ತತ್ತರಿಸಿರುವಾಗ ಅಗತ್ಯ ಔಷಧಗಳ ಬೆಲೆಯನ್ನು ಶೇ.10 ಏರಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ.
|ಸಿದ್ದರಾಮಯ್ಯವಿಧಾನಸಭೆ ಪ್ರತಿಪಕ್ಷದ ನಾಯಕ
ಇದೇ ಮೊದಲು:ಶೆಡ್ಯೂಲ್ಡ್ ಔಷಧಗಳ ಬೆಲೆಗಳನ್ನು ಬೆಲೆ ನಿಯಂತ್ರಣಕ್ಕೆ ಹೊರತಾದ ಅನುಸೂಚಿತವಲ್ಲದ (ನಾನ್-ಶೆಡ್ಯೂಲ್ಡ್) ಔಷಧಗಳ ಬೆಲೆಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಏರಿಸಲು ಅನುಮತಿ ನೀಡಿರುವುದು ಇದೇ ಮೊದಲ ಬಾರಿಯಾಗಿದೆ. ನಾನ್-ಶೆಡ್ಯೂಲ್ಡ್ ಮದ್ದುಗಳ ಬೆಲೆಗಳನ್ನು ವಾರ್ಷಿಕ ಶೇ.10 ಏರಿಸಲು ಅವಕಾಶ ನೀಡಲಾಗುತ್ತದೆ.
ದರ ಹೆಚ್ಚಾಗುವ ಪ್ರಮುಖ ಔಷಧಗಳು:ಜ್ವರ, ಸೋಂಕುಗಳು, ಹೃದಯ ಕಾಯಿಲೆಗಳು, ಅತಿ ರಕ್ತದೊತ್ತಡ (ಹೈ ಬಿ.ಪಿ.) ಮತ್ತು ರಕ್ತಹೀನತೆ ವ್ಯಾಧಿಗಳ ಚಿಕಿತ್ಸೆಗೆ ಬಳಸುವ ಮದ್ದಿನ ಬೆಲೆಗಳು ತುಟ್ಟಿಯಾಗಲಿವೆ. ಪ್ಯಾರಾಸಿಟಮಲ್, ಫೆನೋಬಾರ್ಬಿಟೋನ್, ಫೆನೋಟಿನ್ ಸೋಡಿಯಂ, ಅಝಿತ್ರೋಮೈಸಿನ್, ಹೈಡ್ರೋಕ್ಲೋರೈಡ್, ಸಿಪ್ರೊಫ್ಲಾಕ್ಸಿನ್ ಮತ್ತು ಮೆಟ್ರೊನಿಡಾಝೋಲ್ ಈ ಔಷಧಗಳಲ್ಲಿ ಒಳಗೊಂಡಿವೆ. ಬೆಲೆ ಹೆಚ್ಚಳ ವಿಚಾರವನ್ನು 2013ರ ಔಷಧಗಳ ಬೆಲೆ ನಿಯಂತ್ರಣ ಆದೇಶದನ್ವಯ ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ ಎಂದು ಎನ್​ಪಿಪಿಎ ಹೇಳಿದೆ.
ಗಂಡನನ್ನು ಬಿಟ್ಟು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​; ಅವಳಿಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯತ್ನ!

ಮೊಬೈಲ್​ಫೋನ್​ ಎತ್ತಿಟ್ಟಿದ್ದಕ್ಕೆ ಮನೆಯನ್ನೇ ಬಿಟ್ಟು ಹೋದ ಎಂಟನೇ ತರಗತಿ ವಿದ್ಯಾರ್ಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 8 =
Remember me
