ಪಶ್ಚಿಮಬಂಗಾಳ:ಪುರುಲಿಯಾದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ಟೇಟ್ ಬ್ಯಾಂಕ್ ನಲ್ಲಿ ಸಿನಿಮಾ ಶೈಲಿಯಲ್ಲಿ ದರೋಡೆಗೆ ಯತ್ನಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಬ್ಯಾಂಕ್‌ನಲ್ಲಿ ದರೋಡೆಗೆ ಯೋಜನೆ ರೂಪಿಸಿದ್ದ ಯುವಕ, ತಂತ್ರಜ್ಞಾನದ ಸಹಾಯದಿಂದ ಬ್ಯಾಂಕ್‌ನ ಬಾಗಿಲು ಮುರಿದು ದರೋಡೆ ಮಾಡಲು ಏಕಾಂಗಿಯಾಗಿ ನುಗ್ಗಿದ. ಈ ವೇಳೆ ಬ್ಯಾಂಕ್‌ನಲ್ಲಿದ್ದ ಎಮರ್ಜೆನ್ಸಿ ಅಲಾರಾಂ ಸದ್ದು ಮಾಡಿದೆ. ಆದರೆ, ಅಲಾರಾಂ ಹೊಡೆದುಕೊಂಡ ನಂತರ ಬ್ಯಾಂಕ್‌ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನಾದರೂ ಸಿಕ್ಕಿಬಿದ್ದಿದ್ದಾನೆ.
ಎಂಟನೇ ತರಗತಿ ಪಾಸಾದ ಈ ಯುವಕನ ಹೆಸರು ಸಮೀರ್ ಅನ್ಸಾರಿ. ಈತನ ದರೋಡೆ ಪ್ಲಾನ್ ಕೇಳಿ ಪೊಲೀಸರೂ ಅಚ್ಚರಿಗೊಂಡಿದ್ದಾರೆ. ಬಂಧಿತ ಯುವಕ ಯೂಟ್ಯೂಬ್ ವಿಡಿಯೋ ನೋಡಿ ದರೋಡೆಗೆ ಯೋಜನೆ ರೂಪಿಸಿದ್ದ ಎಂದು ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಇಡೀ ದರೋಡೆ ಘಟನೆಯ ವಿಧಾನದ ಬಗ್ಗೆ ವಿವರವಾದ ಮಾಹಿತಿ ನೀಡಿದ ಅವರು, ಯುವಕ ಪುರುಲಿಯಾ ಹುಡಾ ಪೊಲೀಸ್ ಠಾಣೆಯ ದುಮ್ಮಿ ಗ್ರಾಮದವನು. ಡ್ರಿಲ್ ಮಷಿನ್, ಜಾಮರ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿದ್ದ, ಯೂಟ್ಯೂಬ್‌ನಿಂದ ತರಬೇತಿ ಪಡೆದಿದ್ದಾನೆ ಎಂದು ತಿಳಿಸಿದ್ದಾರೆ.
ಯುವಕನ ಮನೆಯಿಂದ ಉಪಕರಣಗಳಿಗೆ ಹೊಂದಿಕೆಯಾಗುವ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಈತನ ಜೊತೆ ಬೇರೆ ಯಾರಾದರೂ ಇದ್ದಾರೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಬ್ಯಾಂಕ್ ಪ್ರವೇಶಿಸಿದ ಬಳಿಕ ನೋಡುಗರಿಗೆ ಎಲ್ಲವೂ ಸರಿಯಾಗಿದೆ ಎಂದು ತಿಳಿಯಲೆಂದು ಬ್ಯಾಂಕ್‌ನ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿ, ಮುಖಕ್ಕೆ ಯುವಕ ಮಾಸ್ಕ್‌ ಹಾಕಿಕೊಂಡಿದ್ದು ತಿಳಿದುಬಂದಿದೆ.
ಕಳೆದ ಶನಿವಾರ ರಾತ್ರಿ 8:50 ರ ಸುಮಾರಿಗೆ ಬ್ಯಾಂಕ್‌ ಅನ್ನು ದರೋಡೆ ಮಾಡಲು ಪ್ರಯತ್ನಿಸಲಾಗಿದೆ. ಬ್ಯಾಂಕ್‌ ನ ಎಮರ್ಜೆನ್ಸಿ ಅಲಾರ್ಮ್‌ ಬಾರಿಸಿದ ಕೂಡಲೇ ವಂಚಕ ಓಡಿ ಹೋಗಿದ್ದಾನೆ. ಆದರೆ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ಯುವಕನ ಜೊತೆಗೆ ಬ್ಯಾಗ್, ಅತ್ಯಾಧುನಿಕ ವಾಲ್ ಕಟರ್ ಮತ್ತು ವೈರ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ ಆರೋಪಿಯನ್ನು ಪತ್ತೆ ಹಚ್ಚಿದ್ದರು ಎಂದು ವರದಿಯಾಗಿದೆ.
ಕಾಲು ಜಾರಿ ಬಿದ್ದರೂ ನಗುತ್ತಲೇ ಎದ್ದು ನಡೆದ ಬಿಹಾರ ಸಿಎಂ, ನೆರವಾದ ಭದ್ರತಾ ಸಿಬ್ಬಂದಿ ವಿಡಿಯೋ ವೈರಲ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
