ಲಖನೌ :ಎಂಟನೇ ತರಗತಿಯ ವಿದ್ಯಾಭ್ಯಾಸವನ್ನೂ ಮುಗಿಸದ ವ್ಯಕ್ತಿಯೊಬ್ಬ ಸಿಸೇರಿಯನ್ ಆಪರೇಷನ್​ನಿಂದ ಹೆರಿಗೆ ಮಾಡಿಸಿದ ಪ್ರಸಂಗವೊಂದರಲ್ಲಿ ತಾಯಿ ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಕಲಿ ವೈದ್ಯರು ಮತ್ತು ದಾದಿಯರೊಂದಿಗೆ ನಡೆಸಲಾಗುತ್ತಿದ್ದ ಖಾಸಗಿ ಕ್ಲಿನಿಕ್​​ನಲ್ಲಿ ಈ ಘಟನೆ ನಡೆದಿದೆ.
ಸುಲ್ತಾನಪುರ ಜಿಲ್ಲೆಯ ಸೈನಿ ಗ್ರಾಮದ ನಿವಾಸಿಯಾಗಿದ್ದ ಪೂನಮ್ ಮತ್ತು ಆಕೆಯ ಮಗು ಈ ದುರಂತ ಸಾವಿಗೀಡಾಗಿರುವ ನತದೃಷ್ಟರು. ನೋಂದಣಿಯಾಗದ ಮಾ ಶಾರದಾ ಆಸ್ಪತ್ರೆಯಲ್ಲಿ ಶೇವಿಂಗ್ ಬ್ಲೇಡ್ ಬಳಸಿ ಸಿ-ಸೆಕ್ಷನ್ ಮಾಡಿದ ರಾಜೇಂದ್ರ ಶುಕ್ಲ(30) ಎಂಬುವನನ್ನೂ, ಆಸ್ಪತ್ರೆ ಮಾಲೀಕ ರಾಜೇಶ್ ಸಹನಿಯನ್ನೂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !
ಪೂನಮ್​ ಅವರ ಪತಿ ರಾಜಾರಾಮ್ ವೈದ್ಯಕೀಯ ನಿರ್ಲಕ್ಷ್ಯದಿಂದ ನನ್ನ ಹೆಂಡತಿ-ಮಗು ಸತ್ತಿದ್ದಾರೆ ಎಂದು ಪೊಲೀಸ್ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಹೆರಿಗೆನೋವು ಕಾಣಿಸಿಕೊಂಡಿದ್ದ ಪೂನಮ್​ರನ್ನು ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ನರ್ಸ್​ ಒಬ್ಬಳು ಈ ಆಸ್ಪತ್ರೆಗೆ ಕಳುಹಿಸಿದ್ದಳು. ಅಲ್ಲಿ ‘ಶಸ್ತ್ರಚಿಕಿತ್ಸೆ’ ಮಾಡಿ ಮಗುವನ್ನು ಹೊರತೆಗೆದಾಗ ಆಕೆ ವಿಪರೀತ ರಕ್ತ ಕಳೆದುಕೊಂಡರೆ, ಹುಟ್ಟಿದ ಮಗು ಕೆಲವೇ ನಿಮಿಷಗಳಲ್ಲಿ ಸಾವಪ್ಪಿದೆ.
ಏನೂ ಸೌಕರ್ಯಗಳಿಲ್ಲದ ಆಸ್ಪತ್ರೆಯಲ್ಲಿನ ಆಪರೇಷನ್ ಟೇಬಲ್​ನಲ್ಲಿ ರಕ್ತಹರಿಯುತ್ತಾ ಬಿದ್ದಿದ್ದ ಪೂನಮ್​​ರನ್ನು ನಂತರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆರೋಪಿ ಶುಕ್ಲ ಹೇಳಿದ. ಕೂಡಲೇ ಲಖನೌನ ಟ್ರಾಮಾ ಕೇರ್ ಸೆಂಟರ್​ಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವಪ್ಪಿದ್ದಾಳೆ ಎಂದು ಹೆಂಡತಿ-ಮಗು ಎರಡನ್ನೂ ಕಳೆದುಕೊಂಡ ರಾಜಾರಾಂ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಸೇರಿದ ತೆರೆಯ ಮೇಲಿನ ‘ರಾಮ’
ಸುಲ್ತಾನಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನೋಂದಣಿಯಿಲ್ಲದೆ ಕಾನೂನುಬಾಹಿರವಾಗಿ ನಡೆಯುತ್ತಿರುವ ಈ ತೆರನ ಕ್ಲಿನಿಕ್​ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಖ್ಯ ವೈದ್ಯಾಧಿಕಾರಿಗೆ ಪತ್ರ ಬರೆದಿರುವುದಾಗಿ ಸುಲ್ತಾನಪುರ ಎಸ್ಪಿ ಅರವಿಂದ ಚತುರ್ವೇದಿ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಾಸ್ಕ್ ಹಾಕಿಲ್ಲ ಎಂದು ದಂಡ ಕೇಳಿದ ಮಾರ್ಷಲ್​ಗೆ, ಹಿಗ್ಗಾ ಮುಗ್ಗಾ ಹೊಡೆದ ಮಹಿಳೆ
“ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”
‘ಧೂಮ್ ಆರ್ ಡೂಮಡ್ ?’ – ಬೈಕ್ ಸ್ಟಂಟ್ ಮಾಡುವ ಜನರಿಗೆ ಪೊಲೀಸರ ಪ್ರಶ್ನೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
