ಮುಂಬೈ:ಕೆಲವು ದಿನಗಳಿಂದ ವಿದೇಶಿ ಬಂಡವಾಳ ಹಿಂತೆಗೆತ ಮುಂದುವರಿದಿರುವುದು ಮಾರುಕಟ್ಟೆಯ ಹೂಡಿಕೆ ಸೆಂಟಿಮೆಂಟ್ ಮೇಲೆ ಹೊಡೆತ ನೀಡಿದೆ. ಜಗತ್ತಿನ ಇತರೆ ಷೇರು ಮಾರುಕಟ್ಟೆಗಳಲ್ಲೂ ಇದೇ ಟ್ರೆಂಡ್ ಮುಂದುವರಿದಿದೆ. ಹೀಗಾಗಿ ಸೋಮವಾರ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ 1,546 ಅಂಶ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ 468 ಅಂಶಗಳಷ್ಟು ಭಾರಿ ಕುಸಿತ ದಾಖಲಿಸಿವೆ. ಪರಿಣಾಮ ಒಂದೇ ದಿನ ಹೂಡಿಕೆದಾರರಿಗೆ 9.15 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ.
30 ಲಿಸ್ಟೆಡ್ ಕಂಪನಿಗಳ ಷೇರುಗಳಿರುವ ಸೆನ್ಸೆಕ್ಸ್ ಸೋಮವಾರ 1,545.67 ಅಂಶ (2.62%) ಕುಸಿದು 57,491.51 ಅಂಶದಲ್ಲಿ, 50 ಷೇರುಗಳ ನಿಫ್ಟಿ 468.05 ಅಂಶ (2.66%) ಕುಸಿದು 17,149.10 ಅಂಶದಲ್ಲಿ ದಿನದ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್​ನ ಎಲ್ಲ 30 ಷೇರುಗಳು ಕೂಡ ನಷ್ಟದಲ್ಲೇ ವಹಿವಾಟು ಮುಗಿಸಿವೆ. ಈ ಪೈಕಿ ಬಜಾಜ್ ಫೈನಾನ್ಸ್ ಗರಿಷ್ಠ ಶೇಕಡ 6 ನಷ್ಟ ಅನುಭವಿಸಿದರೆ, ಟಾಟಾ ಸ್ಟೀಲ್, ಬಜಾಜ್ ಫಿನ್​ಸರ್ವ್, ವಿಪ್ರೊ, ಟೆಕ್ ಮಹಿಂದ್ರಾ, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್​ಸಿಎಲ್ ಟೆಕ್ ಕೂಡ ನಷ್ಟ ಅನುಭವಿಸಿದ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿವೆ. ಶುಕ್ರವಾರದ ದತ್ತಾಂಶ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,148.58 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.
ಮುಂಬೈ:ಲಿಕ್ವಿಡಿಟಿ ಅಡ್ಜಸ್ಟ್​ಮೆಂಟ್ ಫೆಸಿಲಿಟಿ (ಎಲ್​ಎಎಫ್) ಸೌಲಭ್ಯದ ಪ್ರಕಾರ ವೇರಿಯೆಬಲ್ ರೆಪೊ ರೇಟ್ ಅನ್ನು 75,000 ಕೋಟಿ ರೂಪಾಯಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸೋಮವಾರ ತಡರಾತ್ರಿ ಹರಾಜು ನಡೆಸಲಿದೆ. ಇದರ ರಿವರ್ಸಲ್ ದಿನಾಂಕ ಜ.25 ಎಂದು ಅದು ತಿಳಿಸಿದೆ. ಇದೇ ರೀತಿ ಜ.20ರಂದು ಕೂಡ 50,000 ಕೋಟಿ ರೂಪಾಯಿ ಮೌಲ್ಯದ ವೇರಿಯೆಬಲ್ ರೆಪೋ ರೇಟ್ ಅನ್ನು ಆರ್​ಬಿಐ ಹರಾಜು ಮಾಡಿತ್ತು. ಸರಿಯಾದ ಪ್ರಮಾಣದಲ್ಲಿ ಅರ್ಥವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೋಗುವುದಕ್ಕಾಗಿ ಈ ಕ್ರಮವನ್ನು ಮುಂದುವರಿಸುವುದಾಗಿ ಆರ್​ಬಿಐ ಸ್ಪಷ್ಟಪಡಿಸಿದೆ.
ಶಿವರಾಜಕುಮಾರ್​ಗೆ ‘ಬುದ್ಧಿವಂತ’ ನಿರ್ದೇಶಕನ ನಿರ್ದೇಶನ; ಬರಲಿದೆ ಪ್ಯಾನ್ ಇಂಡಿಯಾ ಸಿನಿಮಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 20 =
Remember me
