ಹೈದರಾಬಾದ್​:ಒಂದೇ ಕುಟುಂಬದ ಆರು ಮಂದಿ ಸೇರಿದಂತೆ 9 ಮಂದಿಯ ಮೃತದೇಹ ಬಾವಿಯೊಂದರಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ವಾರಂಗಲ್​ ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಮಹಾಮಾರಿ ಕರೊನಾದಿಂದ ಹೀಗೂ ಆಗುತ್ತಾ? ಮಗಳ ಸ್ಥಿತಿ ಕಂಡು ಬೆಚ್ಚಿಬಿದ್ದ ತಾಯಿ…!
ಆರು ಮಂದಿಯನ್ನು ಹೊರತುಪಡಿಸಿದರೆ, ಉಳಿದ ಮೂವರಲ್ಲಿ ಇಬ್ಬರು ಬಿಹಾರದವರಾಗಿದ್ದು, ಓರ್ವ ತ್ರಿಪುರ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಗುರುವಾರ ನಾಲ್ಕು ಮೃತದೇಹಗಳನ್ನು ಪತ್ತೆಹಚ್ಚಿದ್ದರು. ಬಳಿಕ ಶುಕ್ರವಾರ ಮತ್ತೆ 5 ದೇಹಗಳು ಪತ್ತೆಯಾಗಿವೆ. ಶವಗಳ ಮೇಲೆ ಯಾವುದೇ ರೀತಿಯ ಗಾಯದ ಕಲೆಯಿಲ್ಲ. ಪ್ರಕರಣ ದಾಖಲಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿಯಲು ತನಿಖೆ ಕೈಗೊಂಡಿರುವುದಾಗಿ ವಾರಂಗಲ್​ ಪೊಲೀಸ್​ ಮುಖ್ಯಸ್ಥ ವಿ.ರವಿಂದರ್​ ಹೇಳಿದ್ದಾರೆ.
ಇದನ್ನೂ ಓದಿ:ಇಡೀ ಜಗತ್ತಿಗೆ ಕರೊನಾ ಹಬ್ಬಿಸಿ ತನ್ನ ದೇಶದೊಳಗೆ ಮೊದಲ ಬಾರಿಗೆ ಮಹತ್ತರ ಸಾಧನೆಗೈದ ಚೀನಾ ಸರ್ಕಾರ!
ಮೃತರಲ್ಲಿ ಏಳು ಮಂದಿ ಗೋಣಿ ಚೀಲ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಓರ್ವನ ಮಗಳ ಮೂರನೇ ವರ್ಷದ ಬರ್ತಡೇ ಹಿನ್ನೆಲೆಯಲ್ಲಿ ರಾತ್ರಿ ಒಟ್ಟಿಗೆ ಊಟ ಮುಗಿಸಿದ್ದರು. ಮಗಳ ತಂದೆಯು ಸಹ ಸಾವಿಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಇರಿಸಲಾಗಿದ್ದ ಆಸ್ಪತ್ರೆಗೆ ಪಂಚಾಯತ್​ ರಾಜ್​ ಸಚಿವ ಎರ್ರಾಬೆಲ್ಲಿ ದಯಾಕರ್​ ರಾವ್​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದು, ತನಿಖೆ ನಡೆದ ಬಳಿಕ ಸಾವಿಗೆ ಖಚಿತ ಕಾರಣ ತಿಳಿದುಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ:8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!
ಪೊಲೀಸರು ಇದಕ್ಕೂ ಮುನ್ನ ಇದೊಂದು ಆತ್ಮಹತ್ಯೆ ಇರಬಹುದೆಂದು ತಿಳಿದಿದ್ದರು. ಆದರೆ, ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಇಲ್ಲದೇ ಇರುವುದರಿಂದ ಶವಪರೀಕ್ಷೆ ನಡೆದ ನಂತರವಷ್ಟೇ ಕಾರಣ ಏನಿರಬಹುದೆಂದು ತಿಳಿಯಲಿದೆ.(ಏಜೆನ್ಸೀಸ್​)
ಕೆಲಸದ ಆಮಿಷವೊಡ್ಡಿ ಹೊರರಾಜ್ಯದಿಂದ ಅಮಾಯಕ ಹೆಣ್ಣು ಮಕ್ಕಳನ್ನು ಕರೆತಂದು ದುಷ್ಕೃತ್ಯ: ಇಬ್ಬರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seven =
Remember me
