ಬಿಹಾರ:ಭೂವಿವಾದಕ್ಕೆ ಸಂಬಂಧಿಸಿದಂತೆ ಮನೆ ನೆಲಸಮ ಮಾಡಲು ಬಂದವರಿಗೆ ಅಡ್ಡ ನಿಂತಿದ್ದಕ್ಕೆ ಆ ಮನೆಯವರನ್ನೇ ಸುಟ್ಟುಕೊಂದಿದ್ದ ಪ್ರಕರಣದಲ್ಲಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಸಾವಿಗೀಡಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಭೂವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮನೆಯನ್ನು ನೆಲಸಮ ಮಾಡಲು ಬಂದಿದ್ದಕ್ಕೆ ಆ ಮನೆಯ ಮೂವರು ಅದಕ್ಕೆ ಆಕ್ಷೇಪವೊಡ್ಡಿ ಅಡ್ಡ ನಿಂತಿದ್ದರು. ಆದರೆ ಅದನ್ನು ಲೆಕ್ಕಿಸದೆ ಮುಂದುವರಿದ ವಿರೋಧಿಗಳು ಆ ಮನೆಯ ಮೂವರಿಗೆ ಬೆಂಕಿ ಹಚ್ಚಿದ್ದರು. ಈ ಪ್ರಕರಣದಲ್ಲಿ 32 ವರ್ಷದ ಗರ್ಭಿಣಿ ಪಿಂಕಿ ಝಾ, ಆಕೆಯ ಸಹೋದರ ಸಂಜಯ್ ಝಾ (30) ಮತ್ತು ಸಹೋದರಿ ನಿಕ್ಕಿಗೆ ಬೆಂಕಿ ಹಚ್ಚಲಾಗಿತ್ತು.
ಫೆ. 10ರಂದು ಶಿವಕುಮಾರ್ ಝಾ ಎಂಬಾತನ ನೇತೃತ್ವದಲ್ಲಿ ಬಿಹಾರದ ದರ್ಭಂಗ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿತ್ತು. ಪಿಂಕಿ ಮತ್ತು ಸಂಜಯ್​ ಪಾಟ್ನಾದ ಆಸ್ಪತ್ರೆಯಲ್ಲಿ ಫೆ. 15ರಂದು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ನಿಕ್ಕಿ ನೀಡಿದ ದೂರು ಹಾಗೂ ವಿಡಿಯೋ ತುಣುಕಿನ ಆಧಾರದ ಮೇಲೆ ಪೊಲೀಸರು ನಿನ್ನೆ ಇಬ್ಬರನ್ನು ಬಂಧಿಸಿದ್ದು, ಇದುವರೆಗೆ ಒಟ್ಟು 9 ಮಂದಿಯ ಬಂಧನವಾಗಿದೆ.
ಕಬ್ಬು ತಿನ್ನುವ ಆಸೆಯಿಂದಾಗಿ ಪ್ರಾಣ ಕಳ್ಕೊಂಡ ಬಾಲಕ; ಟ್ರ್ಯಾಕ್ಟರ್​ ಅಡಿಗೆ ಸಿಲುಕಿ ಸಾವು…
ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿದ ಭೂಪ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + twelve =
Remember me
