ಬರೇಲಿ:ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುತ್ತಾರೆ. ಇಲ್ಲೊಬ್ಬ ವ್ಯಕ್ತಿ ಮೋಸ ಹೋದ ಬಗೆ ಕೇಳಿದರೆ ನಿಮಗೆ ಆಶ್ಚರ್ಯವಾಗದೆ ಇರಲಾರದು. ವ್ಯಾಪಾರಿಯೊಬ್ಬ ಬರೀ ಒಂದು ಬಲ್ಬ್​ಗೆ 9 ಲಕ್ಷ ರೂಪಾಯಿ ಕೊಟ್ಟು ಮೋಸ ಹೋಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಇದನ್ನೂ ಓದಿ:ಗರ್ಲ್​ಫ್ರೆಂಡ್​ ದಪ್ಪವೆಂದು ಬಿಟ್ಟು ಹೋದ ಬಾಯ್​​ಫ್ರೆಂಡ್​! ಆಕೆ ಪಾಠ ಕಲಿಸಿದ್ದು ಹೇಗೆಂದು ಗೊತ್ತಾದರೆ ಶಾಕ್​ ಆಗುತ್ತೀರ
ಬಲೇರಿಯ ನಿತೇಶ್​ ಮಲ್ಹೋತ್ರಾ ಒಬ್ಬ ವ್ಯಾಪಾರಿ. ಲಾಕ್​ಡೌನ್​ ಸಮಯದಲ್ಲಿ ನಷ್ಟ ಕಂಡ ಆತ ಇತ್ತೀಚೆಗೆ ಬೇಸರದಿಂದಲೇ ಇರುತ್ತಿದ್ದ. ಕಳೆದ ಕೆಲವು ದಿನದಿಂದ ವ್ಯಾಪಾರ ಚೆನ್ನಾಗಾಗುತ್ತಿದೆಯೆಂದು ಸ್ವಲ್ಪ ಸಂತಸದಲ್ಲಿದ್ದ. ಹಾಗಿದ್ದಾಗ ಆತನಿಗೆ ಒಂದು ಕರೆ ಬಂದಿದೆ. ನಾವು ಒಂದು ಸಂಸ್ಥೆಯವರು, ನೀವು ಕರಾಮತಿ ಬಲ್ಬ್​ ಖರೀದಿಸಿ, ನಿಮ್ಮ ಅದೃಷ್ಟ ಬದಲಾಗುತ್ತದೆ ಎಂದು ಫೋನಿನಲ್ಲಿ ಮಾತನಾಡಿದ ವ್ಯಕ್ತಿ ಹೇಳಿದ್ದಾನೆ.
ಮೊದಲಿಗೆ ನಿತೇಶ್​ ಆತನ ಮಾತನ್ನು ನಂಬಲಿಲ್ಲವಾದರೂ ಕೊನೆ ಕೊನೆಗೆ ನಂಬಿಕೆ ಹುಟ್ಟಿದೆ. ಅದೃಷ್ಟ ಬದಲಾಗಬಹುದಲ್ಲವೇ ಎನ್ನುವ ಆಸೆ ಹುಟ್ಟಿದೆ. ಅದರಂತೆ ಆತ ಕರಾಮತಿ ಬಲ್ಬ್​ನ್ನು 9 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದಾನೆ. ಅಯಸ್ಕಾಂತಗಳನ್ನು ಬಳಸಿ ಮಾಡಲಾಗಿದ್ದ ಆ ಬಲ್ಬ್​ ಕೆಲವು ವಿಶೇಷ ಗುಣಗಳನ್ನು ಹೊಂದಿದ್ದರಿಂದ ಅದನ್ನು ಆತ ನಂಬಿದ್ದಾನೆ ಕೂಡ.
ಇದನ್ನೂ ಓದಿ:ನಾಳೆ ಅಂಗಡಿಗಳು ತೆರೆಯುತ್ತಾ? ಏನೆನ್ನುತ್ತೆ ವ್ಯಾಪಾರಿಗಳ ಒಕ್ಕೂಟ?
ಆದರೆ ಬರುಬರುತ್ತ ಬಲ್ಬ್​ನ ನಿಜಾಂಶ ನಿತೇಶ್​ಗೆ ಗೊತ್ತಾಗಿದೆ. ಇದು ಒಂದು ಮಾಮೂಲಿ ಬಲ್ಬ್ ಎನ್ನುವುದು ಅರಿವಿಗೆ ಬಂದ ನಂತರ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. ಈತನಿಗೆ ಬಂದ ಕರೆಯ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಚುಟ್ಕನ್ ಖಾನ್, ಮಸೂಮ್ ಖಾನ್ ಮತ್ತು ಇರ್ಫಾನ್ ಖಾನ್ ಹೆಸರಿನ ಮೂರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
https://www.vijayavani.net/bride-leaves-from-marriage-hall/
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
