ನವದೆಹಲಿ:ಸಿಬಿಐ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಬುಧವಾರ ತಿಳಿಸಿದೆ. ವೆಚ್ಚ ಇಲಾಖೆಯ ವೇತನ ಸಂಶೋಧನಾ ಘಟಕದ ವಾರ್ಷಿಕ ವರದಿಯ ಪ್ರಕಾರ 2021 ಮಾರ್ಚ್ 1ಕ್ಕೆ ಅನ್ವಯವಾಗುವಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9,79,327 ಹುದ್ದೆಗಳು ಖಾಲಿ ಇವೆ. ರೋಜ್ಗಾರ್ ಮೇಳಗಳು ಮತ್ತಷ್ಟು ಉದ್ಯೋಗ ಸೃಷ್ಟಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿವೆ. ಯುವಜನರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನೇರವಾಗಿ ಭಾಗವಹಿಸಲು ಅರ್ಥ ಪೂರ್ಣ ಅವಕಾಶಗಳನ್ನು ಒದಗಿಸುತ್ತಿವೆ ಎಂದು ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು. ಏಪ್ರಿಲ್ 1ರಿಂದ ಡಿ. 6ರವರೆಗೆ ಪಿಂಚಣಿ ಸಂಬಂಧಿತ 36,700 ದೂರುಗಳು ಬಂದಿವೆ ಎಂದೂ ಹೇಳಿದರು.
ಸದ್ಯಕ್ಕೆ ರಿಯಾಯಿತಿ ಇಲ್ಲ:ರೈಲು ಪ್ರಯಾಣದಲ್ಲಿ ಹಿರಿಯರಿಗೆ ಸದ್ಯಕ್ಕೆ ಯಾವುದೇ ರಿಯಾಯಿತಿ ಸೌಲಭ್ಯ ಗಳನ್ನು ಮರುಕಲ್ಪಿಸಲಾಗುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸಾಂಕ್ರಾಮಿಕ ಅವಧಿಯಿಂದ ಈ ಸೌಲಭ್ಯ ಸ್ಥಗಿತಗೊಳಿಸಲಾಗಿತ್ತು.
ಕಳೆದ ಬಾರಿ ಪ್ರಯಾಣಿಕರ ಸೌಲಭ್ಯಗಳಿಗೆ 59 ಸಾವಿರ ಕೋಟಿ ಸಬ್ಸಿಡಿ ನೀಡಲಾಗಿತ್ತು. ಇದು ಕೆಲ ರಾಜ್ಯಗಳ ವಾರ್ಷಿಕ ಬಜೆಟ್​ಗಿಂತಲೂ ದೊಡ್ಡ ಮೊತ್ತವಾಗಿದೆ. ಪಿಂಚಣಿಗೆ ವಾರ್ಷಿಕ 60 ಸಾವಿರ ಕೋಟಿ, ವೇತನಕ್ಕೆ 97 ಸಾವಿರ ಕೋಟಿ ಹಾಗೂ ಇಂಧನಕ್ಕೆ 40 ಸಾವಿರ ಕೋಟಿಯನ್ನು ವಿನಿಯೋಗಿಸಲಾಗುತ್ತಿದೆ. ರೈಲ್ವೆಯ ಈಗಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಕುಸಿದಿದ್ದ ಐಆರ್​ಸಿಟಿಸಿ ಆದಾಯ:ಕೋವಿಡ್ ನಿರ್ಬಂಧಗಳಿಂದಾಗಿ 2019-20ಕ್ಕೆ ಹೋಲಿಸಿದರೆ 2020-21ರ ಅವಧಿಯಲ್ಲಿ ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್​ಸಿಟಿಸಿ) ಆದಾಯ ಶೇ.64ರಷ್ಟು ಕಡಿಮೆಯಾಗಿತ್ತು ಎಂದು ಸಚಿವ ವೈಷ್ಣವ್ ತಿಳಿಸಿದರು. ಐಆರ್​ಸಿಟಿಸಿ 2019-20ರಲ್ಲಿ 2,342 ಕೋಟಿ ರೂ. ಆದಾಯ ಗಳಿಸಿದೆ. 2020-21ರ ಕೋವಿಡ್ ಸಂದರ್ಭದಲ್ಲಿ ಅದರ ಆದಾಯ 861.64 ಕೋಟಿಗೆ ಇಳಿದಿತ್ತು. ಈಗ 2021-22ರಲ್ಲಿ 1,952.30 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿಸಿದರು.
ವಿರೋಧ ಪಕ್ಷಗಳಿಂದ ಜಂಟಿ ಕಾರ್ಯತಂತ್ರ: ಭಾರತ -ಚೀನಾ ಗಡಿ ವಿಚಾರದಲ್ಲಿ ಚರ್ಚೆಗೆ ಕೇಂದ್ರ ಸರ್ಕಾರ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ 17 ವಿರೋಧ ಪಕ್ಷಗಳ ನಾಯಕರು ಬುಧವಾರ ಸಭೆ ನಡೆಸಿ, ಸರ್ಕಾರವನ್ನು ಒಗ್ಗಟ್ಟಾಗಿ ಎದುರಿಸಲು ಜಂಟಿ ಕಾರ್ಯತಂತ್ರ ರೂಪಿಸಿದ್ದಾರೆ.
ದಾಖಲೆಯ ರಫ್ತು:ಎಲೆಕ್ಟ್ರಾನಿಕ್ ಉತ್ಪಾದನೆಯು ಮೌಲ್ಯ ದಲ್ಲಿ 6.4 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ವೇಳೆ ಈ ವಲಯದ ರಫ್ತು ಪ್ರಮಾಣ 2021-22ರಲ್ಲಿ ಸಾರ್ವಕಾಲಿಕ ಗರಿಷ್ಠ 109 ಲಕ್ಷ ಕೋಟಿ ರೂ. ಗೆ ತಲುಪಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.
ಗುಜರಾತ್ ಜಯಕ್ಕೆ ಪ್ರಧಾನಿಗೆ ಅಭಿನಂದನೆ:ಗುಜರಾತ್ ವಿಧಾನಸಭೆ ಚುನಾವಣೆಯ ದಾಖಲೆ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಅಭಿನಂದಿಸಲಾಯಿತು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಕೂಡ ಗುಜರಾತ್ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರನ್ನು ಹೊಗಳಿದರು. ಈ ಗೆಲುವು ಬಿಜೆಪಿಯ ಸಂಘಟನಾ ಶಕ್ತಿ ಮತ್ತು ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದೂ ಪ್ರಧಾನಿ ಹೇಳಿದರು.
ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?

ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್​ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
