ಮುಂಬೈ:ಒಂದೇ ಕುಟುಂಬದ 9 ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದ್ದು, ಆ ಪೈಕಿ 6 ಶವ ಒಂದು ಮನೆಯಲ್ಲಿ, ಇನ್ನು ಮೂರು ಶವ ಪಕ್ಕದ ಇನ್ನೊಂದು ಮನೆಯಲ್ಲಿ ಪತ್ತೆಯಾಗಿವೆ. ಒಂಬತ್ತೂ ಮಂದಿ ವಿಷ ಸೇವಿಸಿದ್ದಾರೆ.
ಮಹಾರಾಷ್ಟ್ರದ ಮೀರಜ್ ತಾಲೂಕಿನ ಮ್ಹೈಸಲ್​ ಬಳಿಯ ನಾರ್ವಡ್​ ರಸ್ತೆಯ ಅಂಬಿಕಾನಗರ ಚೌಕ ಹತ್ತಿರದ ಮನೆಯೊಂದರಲ್ಲಿ ಈ ಪ್ರಕರಣ ನಡೆದಿದೆ. ಈ ಮನೆಯವರು ಇಂದು ಬೆಳಗಿನಿಂದ ಬಾಗಿಲು ತೆಗೆಯದ್ದನ್ನು ನೆರೆಹೊರೆಯವರು ಹೋಗಿ ಬಾಗಿಲು ತಟ್ಟಿದ್ದಾರೆ. ಆದರೆ ಯಾವ ಪ್ರತಿಕ್ರಿಯೆ ಬರದ್ದರಿಂದ ಬಾಗಿಲು ಒಡೆದು ನೋಡಿದಾಗ ಮನೆಯೊಳಗೆ 6 ಶವಗಳು ಪತ್ತೆಯಾಗಿವೆ. ಬಳಿಕ ಅಲ್ಲೇ ಸಮೀಪದ ರಾಜಧಾನಿ ಕಾರ್ನರ್​ನ ಇನ್ನೊಂದು ಮನೆಯಲ್ಲೂ ಬೆಳಗಿನಿಂದ ಬಾಗಿಲು ತೆರೆಯದ್ದರಿಂದ ಒಡೆದು ನೋಡಿದಾಗ, ಅಲ್ಲಿ ಮೂವರ ಶವ ಪತ್ತೆಯಾಗಿದೆ.
ವೈದ್ಯರಾಗಿರುವ ಪೋಪಟ್​ ಯಲ್ಲಪ್ಪ ವಾನ್ಮೋರ್​ (52), ಸಂಗೀತಾ ಪೋಪಟ್​ (48), ಅರ್ಚನಾ ಪೋಪಟ್ ವಾನ್ಮೋರ್ (30), ಶುಭಂ ಪೋಪಟ್​ ವಾನ್ಮೋರ್​ (28), ಮನಿಕ್​ ಯಲ್ಲಪ್ಪ ವಾನ್ಮೋರ್​ (49), ರೇಖಾ ಮನಿಕ್ ವಾನ್ಮೋರ್​ (45), ಆದಿತ್ಯ ಮನಿಕ್ ವಾನ್​ (15), ಅನಿತಾ ಮನಿಕ್ ವಾನ್ಮೋರ್ (28) ಮತ್ತು ಅಕ್ಕತಾಯ್ ವಾನ್ಮೋರ್​ (72) ಸಾವಿಗೀಡಾದವರು.
ಈ ಕುಟುಂಬ ಸಂಬಂಧಿಕರು ಮತ್ತು ಗ್ರಾಮಸ್ಥರ ಬಳಿ ಬಹಳಷ್ಟು ಸಾಲ ಮಾಡಿದ್ದರಿಂದ ಅದು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಾಲ ಕೊಟ್ಟವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಲು ಮೀರಜ್​ಗಾಂವ್ ಪೊಲೀಸರು ಮುಂದಾಗಿದ್ದಾರೆ. ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಸ್ಥಳೀಯರನ್ನು ಆಘಾತಕ್ಕೆ ಒಳಪಡಿಸಿದೆ.
ಪಂಚತಾರಾ ಹೋಟೆಲ್​ನಲ್ಲಿ ಬಾಲಕನಿಂದ ಅತ್ಯಾಚಾರ; ಪ್ರಕರಣ ಮುಚ್ಚಿ ಹಾಕಲು ಹಣದ ಆಮಿಷವೊಡ್ಡಿದ ಅಪ್ಪ..

ಮತ್ತೊಂದು ಭೀಕರ ಅಪಘಾತ; ಅಪ್ಪನ ದಿನದಂದೇ ಇನ್ನೊಂದು ತಂದೆ-ಮಗನ ಸಾವು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 1 =
Remember me
