ಲಖನೌ:ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ಟ್ರಕ್ ಮತ್ತು ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ 9 ಜನರು ಸಾವನ್ನಪ್ಪಿದ್ದು, 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿ ಬಸ್​ ಒಂದು ದೇವ ಕೋತ್ವಾಲಿ ಪ್ರದೇಶದ ಬಾಬುರಿ ಗ್ರಾಮದ ಬಳಿ ತಲುಪಿದಾಗ ಎದುರು ದಿಕ್ಕಿನಿಂದ ಬರುತ್ತಿದ್ದ ಟ್ರಕ್​ ಏಕಾಏಕಿ ಬಂದು ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿತು ಎನ್ನಲಾಗಿದೆ.
ಹಲವು ಪ್ರಯಾಣಿಕರು ತುಂಬಿದ್ದ ಬಸ್​ ದೆಹಲಿಯಿಂದ ಯುಪಿಯ ಬಹ್ರೈಚ್​ಗೆ ಹೋಗುತ್ತಿತ್ತು. ಎರಡೂ ವಾಹನಗಳು ಅತಿವೇಗವಾಗಿ ಸಾಗುತ್ತಿದ್ದುದರಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನಗಳ ಮುಂಭಾಗಗಳು ನಜ್ಜುಗುಜ್ಜಾದವು. ಸ್ಥಳಕ್ಕೆ ತಲುಪಿದ ಪೊಲೀಸರು ಮತ್ತು ರಕ್ಷಣಾ ತಂಡಗಳು ಗಾಯಗೊಂಡ ಜನರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಗಂಭೀರವಾಗಿ ಗಾಯಗೊಂಡವರನ್ನು ರಾಜಧಾನಿ ಲಖನೌನ ಕೆಜಿಎಂಯು ಆಘಾತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ, ಉಳಿದವರು ಬಾರಾಬಂಕಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದರ್ಶ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:Lakhimpur Kheri Case: ಎಷ್ಟು ಜನರನ್ನು ಬಂಧಿಸಿದ್ದೀರಿ ನಾಳೆ ವರದಿ ಕೊಡಿ, ಯುಪಿ ಸರ್ಕಾರಕ್ಕೆ ಸುಪ್ರೀಂ ತಾಕೀತು
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಅಪಘಾತದಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.(ಏಜೆನ್ಸೀಸ್)
VIDEO| ಪ್ರತಿಭಟನಕಾರರ ಮೇಲೆ ವಾಹನ ಹರಿದುಹೋದ ಸ್ಪಷ್ಟ ಚಿತ್ರಣ! ನ್ಯಾಯ ಒದಗಿಸಿ ಎಂದ ಬಿಜೆಪಿ ಸಂಸದ

ಚಾರ್​ ಧಾಮ್​ ಯಾತ್ರೆಗೆ ಸಂಪೂರ್ಣ ತೆರೆದ ಬಾಗಿಲು; ಯಾತ್ರಾರ್ಥಿಗಳಿಗೆ ಈ ದಾಖಲಾತಿಗಳು ಅಗತ್ಯ

ಜಗಳದ ನಡುವೆ ಶೂಟೌಟ್: ಮಗನಿಗೇ ಬಿತ್ತು ಅಪ್ಪನ ಗುಂಡು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 20 =
Remember me
