ವೆಲ್ಲೋರ್​​:ಭಾರೀ ಮಳೆಯಿಂದಾಗಿ ವಿವಿಧೆಡೆಗಳಲ್ಲಿ ಭೂಕುಸಿತ, ಕಟ್ಟಡ ಕುಸಿತಗಳು ವರದಿಯಾಗುತ್ತಿವೆ. ತಮಿಳುನಾಡಿನ ವೆಲ್ಲೋರ್​ ಜಿಲ್ಲೆಯಲ್ಲಿ ಇಂಥ ಒಂದು ದೊಡ್ಡ ದುರ್ಘಟನೆ ಸಂಭವಿಸಿದೆ. ಬಹುಮಹಡಿ ಕಟ್ಟಡದ ಗೋಡೆ ಕುಸಿದು, ನಾಲ್ಕು ಮಕ್ಕಳೂ ಸೇರಿದಂತೆ ಒಂಭತ್ತು ಜನರು ಮೃತಪಟ್ಟಿದ್ದಾರೆ.
ವೆಲ್ಲೋರಿನ ಪೆರ್ನಂಪಟ್ಟು ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದ ಬಡಾವಣೆಯಲ್ಲಿ, ಶುಕ್ರವಾರ, ಶಿಥಿಲಗೊಂಡಿದ್ದ ಕಟ್ಟಡವೊಂದರ ಗೋಡೆ ಕುಸಿದಿದೆ. ಪರಿಣಾಮವಾಗಿ ಮನೆಗಳ ಒಳಗಿದ್ದ ಒಂಭತ್ತು ಜನರು ಸಾವಪ್ಪಿದ್ದು, ಇನ್ನೂ ಅನೇಕರಿಗೆ ತೀವ್ರ ಗಾಯಗಳುಂಟಾಗಿದೆ. ಪೆರ್ನಂಪಟ್ಟು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಕಟ್ಟೆಗೆ ಬಿದ್ದು ಅಕ್ಕ-ತಂಗಿ ಧಾರುಣ ಸಾವು: ಅಮ್ಮನ ಕಣ್ಣೆದುರೇ ನಡೆಯಿತು ಘೋರ ದುರಂತ
ಈ ದುರ್ಘಟನೆಯ ಬಗ್ಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ದುಃಖ ವ್ಯಕ್ತಪಡಿಸಿದ್ದು, ಮೃತಪಟ್ಟ ಒಂಭತ್ತು ಜನರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.(ಏಜೆನ್ಸೀಸ್)
ಪಕ್ಕದ ಮನೆಗೆ ಹೋಗಿ ಅಮ್ಮನನ್ನು ಬೈದಂತೆ! ವೀರ್​ ದಾಸ್​​ ಭಾಷಣಕ್ಕೆ ಲೇಖಕನ ಅಸಮಾಧಾನ

VIDEO| ಹಳೇ ಡೈಲಾಗ್​ ನೆನಪಿಸಿ ರೈತರನ್ನು ಅಭಿನಂದಿಸಿದ ರಾಹುಲ್​ ಗಾಂಧಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
