ಪುಣೆ:ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈವರೆಗೂ ಆತ್ಮಹತ್ಯೆ ಎಂದೇ ಹೇಳಲಾಗಿದ್ದ ಪ್ರಕರಣಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿದ್ದ ಕುಟುಂಬದ ಸದ್ಯಸ್ಯರ ಸಾವು ಆತ್ಮಹತ್ಯೆ ಅಲ್ಲ,ಬದಲಾಗಿ ಇದು ಕೊಲೆ ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊಂದಿರುವ 25 ಜನರ ಪೈಕಿ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ಕುಟುಂಬವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಆರೋಪಿಗಳಿಂದ ಹಣ ಸಾಲವಾಗಿ ಪಡೆದಿತ್ತು. ಈ ಸಾಲ ಹಿಂತಿರುಗಿಸಿಲ್ಲ ಎಂದು ಕುಟುಂಬದ ಸದಸ್ಯರಿಗೆ ವಿಷ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲ ಪಡೆದ ವನಮೋರೆ ಕುಟುಂಬದವರನ್ನು ಆರೋಪಿಗಳು ಸಾಲ ಮರುಪಾವತಿಸುವಂತೆ ವಿಪರೀತ ಕಿರುಕುಳ ನೀಡುತ್ತಿದ್ದರು.ಇವರ ಕಿರುಕುಳದ ಕಾರಣದಿಂದಲೇ ವನಮೋರೆ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಬಂಧಿತರಲ್ಲಿ ಕೆಲವರು ಈ ಮುನ್ನವೇ ಹಣಕಾಸು ಸಂಬಂಧಿತ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ:ಮಹಾರಾಷ್ಟ್ರದ ಮೀರಜ್ ತಾಲೂಕಿನ ಮ್ಹೈಸಲ್​ ಬಳಿಯ ನಾರ್ವಡ್​ ರಸ್ತೆಯ ಅಂಬಿಕಾನಗರ ಚೌಕ ಹತ್ತಿರದ ಮನೆಯೊಂದರಲ್ಲಿ ಈ ಪ್ರಕರಣ ನಡೆದಿತ್ತು.
ವೈದ್ಯರಾಗಿರುವ ಪೋಪಟ್​ ಯಲ್ಲಪ್ಪ ವಾನ್ಮೋರ್​ (52), ಸಂಗೀತಾ ಪೋಪಟ್​ (48), ಅರ್ಚನಾ ಪೋಪಟ್ ವಾನ್ಮೋರ್ (30), ಶುಭಂ ಪೋಪಟ್​ ವಾನ್ಮೋರ್​ (28), ಮನಿಕ್​ ಯಲ್ಲಪ್ಪ ವಾನ್ಮೋರ್​ (49), ರೇಖಾ ಮನಿಕ್ ವಾನ್ಮೋರ್​ (45), ಆದಿತ್ಯ ಮನಿಕ್ ವಾನ್​ (15), ಅನಿತಾ ಮನಿಕ್ ವಾನ್ಮೋರ್ (28) ಮತ್ತು ಅಕ್ಕತಾಯ್ ವಾನ್ಮೋರ್​ (72) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.(ಏಜೆನ್ಸೀಸ್​)
ಇದು ಬಾಳಸಾಹೇಬ್​ ಅವರ ಹಿಂದುತ್ವದ ಜಯ: ಸುಪ್ರೀಂಕೋರ್ಟ್​ ತೀರ್ಪಿನ ಕುರಿತು ಏಕನಾಥ್​ ಶಿಂಧೆ ಪ್ರತಿಕ್ರಿಯೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 2 =
Remember me
