ಸೌದಿ ಅರೇಬಿಯಾ:ವೃದ್ಧನೊಬ್ಬ ತನ್ನ 90ನೇ ವಯಸ್ಸಿನಲ್ಲಿ ಐದನೇ ಬಾರಿಗೆ ವಿವಾಹವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿರುವ ಘಟನೆ ಸೌದಿ ಅರೇಬಿಯಾದ ಅಫೀಫ್ ಪ್ರಾಂತ್ಯದಲ್ಲಿ ನಡೆದಿದೆ.ನಾಸರ್ ಬಿನ್ ದಹೈಮ್ ಎಂಬಾತನೇ ಇಳಿವಯಸ್ಸಿನಲ್ಲಿಯೂ ವಿವಾಹವಾಗುವ ಮೂಲಕ ದೇಶದ ಹಿರಿಯ ವರ ಎನಿಸಿಕೊಂಡಿದ್ದಾನೆ. ಈ ವರನಿಗೆ ಆತನ ಮೊಮ್ಮಗನು ಕೂಡ ಶುಭ ಹಾರೈಸಿದ್ದು, ಈ ಕುರಿತಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.ಇದನ್ನೂ ಓದಿ:ತಾಂತ್ರಿಕನ ಮಾತು ಕೇಳಿ ಬಾಲಕಿಯ ಹೃದಯವನ್ನೇ ಚಾಕುವಿನಿಂದ ಬಗೆದ ಮಹಿಳೆಈ ಕುರಿತು ಉತ್ಸಾಹಭರಿತದಿಂದ ಮಾತನಾಡಿರುವ ನಾಸರ್​​, ತಾನು ಮತ್ತೆ ಮದುವೆಯಾಗಲು ಬಯಸುತ್ತೇನೆ. ವೈವಾಹಿಕ ಜೀವನವು ನಂಬಿಕೆಯ ಸರ್ವಶಕ್ತ ಕಾರ್ಯವಾಗಿದೆ. ಲೋಕಗಳ ಪ್ರಭುವಿನ ಮುಂದೆ ಹೆಮ್ಮೆಯ ಮೂಲವಾಗಿದ್ದು, ಇದು ಸಾಂತ್ವನ, ಪ್ರಾಪಂಚಿಕ ಸಮೃದ್ಧಿಯನ್ನು ತರುತ್ತದೆ. ಅಲ್ಲದೇ, ನನ್ನ ಉತ್ತಮ ಆರೋಗ್ಯದ ರಹಸ್ಯವು ಕೂಡ ಇದರಲ್ಲೇ ಅಡಗಿದ್ದು, ವಿವಾಹವನ್ನು ಸ್ವೀಕರಿಸಲು ಹಿಂದೇಟು ಹಾಕುವ ಯುವಜನರು ಸಾರ್ಥಕ ಜೀವನಕ್ಕಾಗಿ ವಿವಾಹ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾನೆ.ಅಲ್ಲದೇ, ಮದುವೆಯು ದೈಹಿಕ ಸೌಕರ್ಯ ಮತ್ತು ಸಂತೋಷದ ಮೂಲವಾಗಿದ್ದು ವೃದ್ಧಾಪ್ಯವು ವಿವಾಹವಾಗುವುದನ್ನು ತಡೆಯುವುದಿಲ್ಲ. ನನ್ನ ಮಕ್ಕಳಿಗೆ ಈಗ ಮಕ್ಕಳಿದ್ದು, ನಾನು ಇನ್ನೂ ಹೆಚ್ಚಿನ ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದು ಆತ ತಿಳಿಸಿದ್ದಾನೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
