ಉತ್ತರಪ್ರದೇಶ:ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದ್ದು ಆ ಸಂಬಂಧ ವಿರೋಧ ಹಾಗೂ ಒಂದಷ್ಟು ಸಮರ್ಥನೆ ಹೊರ ಹೊಮ್ಮುತ್ತಲೂ ಇದೆ. ಇದೀಗ ಸಚಿವರೊಬ್ಬರು ಪೆಟ್ರೋಲ್​ ಬೆಲೆ ಏರಿಕೆಯನ್ನು ಮತ್ತೊಂದು ರೀತಿಯಲ್ಲಿ ಸಮರ್ಥನೆಗೆ ಮುಂದಾಗಿ ಅಚ್ಚರಿ ಮೂಡಿಸಿದ್ದಾರೆ. ಅವರ ಪ್ರಕಾರ, ದೇಶದ ಶೇ. 95 ಮಂದಿಗೆ ಪೆಟ್ರೋಲ್​ ಅಗತ್ಯವೇ ಇಲ್ಲವಂತೆ!
ದೇಶದಲ್ಲಿ ಕೆಲವೇ ಮಂದಿ ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಿದ್ದಾರೆ, ಅವರಿಗಷ್ಟೇ ಪೆಟ್ರೋಲ್ ಅಗತ್ಯವಿದೆ. ಉಳಿದಂತೆ ಶೇ. 95 ಮಂದಿಗೆ ಪೆಟ್ರೋಲ್​ ಅಗತ್ಯವೇ ಇಲ್ಲ ಎಂಬುದಾಗಿ ಈ ಸಚಿವರು ಹೇಳಿದ್ದಾರೆ. ದೇಶದಲ್ಲಿ ಶತಕೋಟಿಗೂ ಅಧಿಕ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ. ಪೆಟ್ರೋಲ್​ ಬೆಲೆಯನ್ನು ತಲಾ ಆದಾಯಕ್ಕೆ ಹೋಲಿಸಿದರೆ ಆ ಬೆಲೆ ಕಡಿಮೆಯೇ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ:ಕರ್ತವ್ಯದಲ್ಲಿರುವಾಗ, ಸಮವಸ್ತ್ರ ಧರಿಸಿಕೊಂಡೇ ಪೊಲೀಸರ ಡ್ರಿಂಕ್ಸ್​ ಪಾರ್ಟಿ; ಬಾರ್​ವೊಂದರ ಕೊಠಡಿಯಲ್ಲಿ ಕುಡಿಯುತ್ತಿದ್ದ ವಿಡಿಯೋ ವೈರಲ್​
ಅಂದಹಾಗೆ ಈ ರೀತಿಯಲ್ಲಿ ಪೆಟ್ರೋಲ್ ಬೆಲೆಯನ್ನು ಸಮರ್ಥನೆ ಮಾಡಿಕೊಂಡಿರುವುದು ಉತ್ತರಪ್ರದೇಶದ ಸಚಿವ ಉಪೇಂದ್ರ ತಿವಾರಿ. ಮತ್ತೊಂದೆಡೆ ಗುರುವಾರವೂ ದೇಶದಲ್ಲಿ ಪೆಟ್ರೋಲ್​-ಡೀಸೆಲ್ ಬೆಲೆ ಏರಿಕೆ ಕಂಡಿದೆ. ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಏರಿಕೆ ಕಂಡಿದ್ದು, ಒಂದೇ ಸಲಕ್ಕೆ ಲೀಟರ್​ಗೆ 45 ಪೈಸೆ ಏರಿದೆ. (ಏಜೆನ್ಸೀಸ್)
ಯುವತಿಯನ್ನು ಪ್ರೀತಿಸುತ್ತಿದ್ದಾತನ ಎದೆಗೇ ಚಾಕು ಚುಚ್ಚಿದ್ರು; ಆಕೆಯನ್ನು ಭೇಟಿ ಮಾಡ್ಬೇಡ ಅಂದ್ರೂ ಮಾಡಿದ್ದಕ್ಕೆ ಇರಿದಿದ್ದವರ ಸೆರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
