ಬೆಂಗಳೂರು:ಮೊನ್ನೆ(ಜು.28) ಜಾಲಹಳ್ಳಿ ಪೊಲೀಸರು ಎಚ್​ಎಂಟಿ ಸವಿರ್ಸ್​ ರಸ್ತೆಯಲ್ಲಿ 30 ಲಕ್ಷ ರೂ. ಮೌಲ್ಯದ ನಿಷೇಧಿತ 1 ಸಾವಿರ ರೂ. ಮುಖಬೆಲೆಯ ನೋಟುಗಳು ಜಪ್ತಿ ಮಾಡಿದ ಬೆನ್ನಲ್ಲೇ, ಯಶವಂತಪುರ ಪೊಲೀಸರು ನಿಷೇಧಿತ ಒಂದು ಸಾವಿರ ಮತ್ತು ಐನೂರು ರೂ. ಮುಖಬೆಲೆಯ 96 ಲಕ್ಷ ರೂ. ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ಶೇ.20 ಕಮೀಷನ್​ ಆಸೆಗಾಗಿ ಕೇರಳ ಮೂಲದ ವ್ಯಕ್ತಿಗಳಿಬ್ಬರ ಸೂಚನೆ ಮೇರೆಗೆ ಕೊಡಗಿನ ನಾಲ್ವರು ಹಳೇ ನೋಟುಗಳ ಸಮೇತ ಯಶವಂತಪುರ ಆರ್​ಟಿಒ ಕಚೇರಿ ಬಳಿ ಕಾರಿನಲ್ಲಿ ಕುಳಿತು ಚಲಾವಣೆಗೆ ಯತ್ನಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ಕೊಡಗು ಮೂಲದ ದಿನೇಶ್​(39), ರಾಸಿಕ್(25), ನಾಗರಾಜ್​(48) ಮತ್ತು ಕೃಷ್ಣಮೂರ್ತಿ(36) ಎಂಬುವವರನ್ನು ಬಂಧಿಸಿ, ಅವರ ಬಳಿಯಿದ್ದ 96 ಲಕ್ಷ ರೂ. ಮೌಲ್ಯದ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿರಿರಾಜ್ಯದಲ್ಲಿ ಆನ್​ಲೈನ್​ ಮೂಲಕ ಮದ್ಯ ಮಾರಾಟ?
ನಿಷೇಧಿತ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಯಶವಂತಪುರ ಠಾಣಾಧಿಕಾರಿ ಮೊಹಮದ್​ ಮುಕ್ರಂ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಉತ್ತರ ವಿಭಾಗದ ಡಿಸಿಪಿ ಎನ್​.ಶಶಿಕುಮಾರ್​ ತಿಳಿಸಿದ್ದಾರೆ.
ದೇಶದಲ್ಲಿ 1 ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ನೋಟು ಬ್ಯಾನ್​ ಆಗಿ ಮೂರು ವರ್ಷ ಕಳೆದರೂ ಹಳೆಯ ನೋಟುಗಳ ಚಲಾವಣೆ ದಂಧೆ ರಾಜ್ಯ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.
ಕಾರಿನಲ್ಲಿತ್ತು 30 ಲಕ್ಷ ರೂ. ನಿಷೇಧಿತ ನೋಟು, ಇನ್ನು 70 ಲಕ್ಷಕ್ಕಾಗಿ ಹುಡುಕಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 1 =
Remember me
