ಪಂಜಾಬ್​ನಲ್ಲಿ ಮೊದಲ ಕರೊನಾ ಕೇಸು ಬೆಳಕಿಗೆ ಬಂದಿದ್ದು ಮಾರ್ಚ್ 9ರಂದು. ಇಟಲಿಯಿಂದ ರಾಜ್ಯಕ್ಕೆ ವಾಪಸಾದ ವ್ಯಕ್ತಿಯೊಬ್ಬರಿಗೆ ತಗುಲಿದ ಸೋಂಕು ಬೇರೆಯವರಿಗೂ ಹಬ್ಬಿತ್ತು. ಸದ್ಯ 256 ಸೋಂಕಿತರು ರಾಜ್ಯದಲ್ಲಿದ್ದು, 49 ಮಂದಿ ಗುಣಮುಖರಾಗಿದ್ದಾರೆ. 16 ಮಂದಿ ಮೃತಪಟ್ಟಿದ್ದಾರೆ. ಏತನ್ಮಧ್ಯೆ, ಪಂಜಾಬಿನ 98 ವರ್ಷದ ವೃದ್ಧೆ ಮಾಸ್ಕ್ ತಯಾರಿಕೆಯಲ್ಲಿ ತೊಡಗಿಕೊಂಡಿರುವುದು ರಾಜ್ಯವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿದೆ. ಮೊಂಗಾ ಎಂಬ ಪ್ರದೇಶದ ವೃದ್ಧೆ ಗುರುದೇವ್ ಕೌರ್ ತನ್ನ ಕುಟುಂಬದೊಂದಿಗೆ ಸೇರಿ ಮಾಸ್ಕ್ ತಯಾರಿಸಿ ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಪ್ರಾರ್ಥನೆ ಯೊಂದಿಗೆ ತನ್ನ ದಿನ ಆರಂಭಿಸುವ ಗುರುದೇವ್ ಕೌರ್, ನಂತರ 4 ಗಂಟೆಗಳ ಕಾಲ ಮಾಸ್ಕ್ ತಯಾರಿಕೆಯಲ್ಲಿ ತೊಡಗುತ್ತಾರೆ. ಈ ಬಗ್ಗೆ ಖುದ್ದು ಸಿಎಂ ಅಮರಿಂದರ್ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಜನರು ಎಷ್ಟು ಪ್ರಬಲರು ಎಂಬುದಕ್ಕೆ ಇವರೇ ಉದಾಹರಣೆ ಮತ್ತು ಕರೊನಾ ಸವಾಲನ್ನು ಮೀರಿ ನಾವು ಮುನ್ನಡೆಯಲಿದ್ದೇವೆ ಎಂದು ಸಿಎಂ ಭರವಸೆ ವ್ಯಕ್ತಪಡಿಸಿದ್ದಾರೆ. ‘ನಾವಿರುವ ಪ್ರದೇಶದಲ್ಲಿ ತರಕಾರಿ ಮಾರುವವರು ಮಾಸ್ಕ್ ಧರಿಸುತ್ತಿರಲಿಲ್ಲ. ನೂರಿನ್ನೂರು ರೂಪಾಯಿ ಕೊಟ್ಟು ಮಾಸ್ಕ್ ಧರಿಸಬೇಕೇ ಎಂಬುದು ಅವರ ಪ್ರಶ್ನೆಯಾಗಿತ್ತು. ದಿನದಲ್ಲಿ ಸಿಕ್ಕ ಹಣವನ್ನು ಮಾಸ್ಕ್​ಗೆ ಹೇಗೆ ಕೊಡಲಿ ಎನ್ನುತ್ತಿದ್ದರು. ಹೀಗಾಗಿ ಬಡವರಿಗೆ ಮಾಸ್ಕ್ ತಯಾರಿಸಿಕೊಡಲು ನಿರ್ಧರಿಸಿದೆವು’ ಎಂದು ಗುರುದೇವ್ ಕೌರ್ ಅವರ ಪುತ್ರಿ ಹೇಳುತ್ತಾರೆ. ಅನೇಕ ಮಂದಿ ಗುರುದೇವ್ ಕೌರ್ ಅವರ ಸೇವೆಗೆ ಸಾಥ್ ನೀಡಲು ಮುಂದಾಗಿದ್ದು, ಹಣಕಾಸಿನ ನೆರವನ್ನೂ ಒದಗಿಸುತ್ತಿದ್ದಾರೆ.
ಸೋಂಕಿನ ನಡುವೆಯೂ ವ್ಯಾಯಾಮ: ಪಂಜಾಬ್​ನ ಫಿರೋಜ್​ಪುರದಲ್ಲಿ ಕರೊನಾ ಸೋಂಕಿತ ಪೊಲೀಸ್ ಸಿಬ್ಬಂದಿಯೊಬ್ಬ ಸೋಂಕಿನ ಬಗ್ಗೆ ಯಾವುದೇ ಆತಂಕವಿಲ್ಲದೆ ದೈಹಿಕ ವ್ಯಾಯಾಮಗಳನ್ನು ನಡೆಸುತ್ತ ನಿರಾತಂಕವಾಗಿರುವುದು ಇತರರಲ್ಲೂ ಸ್ಪೂರ್ತಿ ತುಂಬಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡಿದ್ದು, ಅವರ ಆತ್ಮವಿಶ್ವಾಸಕ್ಕೆ ಮೆಚ್ಚುಗೆಯ ಸುರಿಮಳೆ ಬರುತ್ತಿದೆ. ಅದೇ ರೀತಿ ಸೋಂಕಿತ ಹಿರಿಯ ಮಹಿಳಾ ಮುಖ್ಯ ಪೇದೆಯೊಬ್ಬರು ತಮ್ಮ ಇತರ ಸಿಬ್ಬಂದಿಗೆ ಸ್ಪೂರ್ತಿ ತುಂಬಿದ ಮಾತುಗಳನ್ನು ಹೇಳುತ್ತಿರುವುದು ಕೂಡ ಸದ್ದು ಮಾಡಿತ್ತು. ಕರೊನಾ ನಿಯಂತ್ರಿಸಲು ಲಾಕ್​ಡೌನ್ ವಿಸ್ತರಿಸಬೇಕು ಎಂದು ಮೊದಲಿಂದಲೂ ಪ್ರತಿಪಾದಿಸುತ್ತಿರುವವರಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಜತೆ ಸಿಎಂ ಅಮರಿಂದರ್ ಕೂಡ ಸೇರಿದ್ದಾರೆ. 2 ಅಥವಾ ಅದಕ್ಕಿಂತ ಹೆಚ್ಚಿನ ಕರೊನಾ ಪಾಸಿಟಿವ್ ಕೇಸ್ ಇರುವ ರಾಜ್ಯದ 17 ಸ್ಥಳಗಳನ್ನು ಹಾಟ್​ಸ್ಪಾಟ್ ಎಂದು ಸರ್ಕಾರ ಗುರುತಿಸಿದೆ. ಸಿಖ್ಖರ ಪ್ರಮುಖ ಧಾರ್ವಿುಕ ಸಂಘಟನೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು ಕರೊನಾ ಸಮರದಲ್ಲಿ ಸರ್ಕಾರದ ಜತೆ ಕೈಜೋಡಿ ಸಿದ್ದು, ತನ್ನ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿದೆ.
ಸರ್ಕಾರಿ ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ಸಂಬಳಕ್ಕೆ ಯಾವುದೇ ಸಮಸ್ಯೆ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 18 =
Remember me
