ಕೋಲ್ಕತ:ಚೀನಾದಲ್ಲಿ ಹುಟ್ಟಿ ಪೂರ್ತಿ ವಿಶ್ವದಲ್ಲೇ ಮರಣ ಮೃದಂಗ ಭಾರಿಸುತ್ತಿರುವ ಕರೊನಾ ವೈರಸ್​ ಭಾರತದಲ್ಲಿ ತನ್ನ ದಾಳಿಯನ್ನು ಮುಂದುವರೆಸಿದೆ. ಇಂದು ದೇಶದಲ್ಲಿ ಇಬ್ಬರು ವ್ಯಕ್ತಿಗಳು ವೈರಸ್​ನಿಂದಾಗಿ ಮೃತರಾಗಿದ್ದು ಸಾವಿನ ಸಂಖ್ಯೆ 9ಕ್ಕೆ ಏರಿದೆ.
ಕೊಲ್ಕತ್ತಾದ ಎಎಮ್​ಆರ್​ಐ ಆಸ್ಪತ್ರೆಯಲ್ಲಿ ದೇಶದ ಒಂಬತ್ತನೇ ಸಾವು ವರದಿಯಾಗಿದೆ. ಕಳೆದ ಒಂದು ವಾರದ ಹಿಂದೆ ಇಟಲಿ ಮೂಲದ 55 ವರ್ಷದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದು, ಆತನಲ್ಲಿ ಕರೊನಾ ವೈರಸ್​ ಇರುವುದು ದೃಢವಾಗಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಆತ ಇಂದು ಮೃತನಾಗಿದ್ದಾನೆ. ಮೃತ ವ್ಯಕ್ತಿಯ ಕುಟುಂಬ ಇಟಲಿಯಲ್ಲಿ ವಾಸವಿರುವುದಾಗಿ ತಿಳಿಸಲಾಗಿದೆ.
ಇಂದು ಬೆಳಗ್ಗೆ ಮಹಾರಾಷ್ಟ್ರದ ಮುಂಬೈನಲ್ಲಿ ಫಿಲಿಪೈನ್​ ಮೂಲದ 68 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಮೃತನಾಗಿದ್ದ. ಕರೊನಾ ವೈರಸ್​ ಇರುವುದು ದೃಢವಾದ ನಂತರ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದ ಆತ ಕರೊನಾದಿಂದ ಗುಣಮುಖನಾದ ನಂತರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ.
ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು, ಇಂದು 400ರ ಗಡಿ ದಾಟಿದೆ. ಕರ್ನಾಟಕದಲ್ಲಿ 27 ಜನರಲ್ಲಿ ಸೋಂಕಿರುವುದು ದೃಢವಾಗಿದೆ.(ಏಜೆನ್ಸೀಸ್​)
ವೆಂಟಿಲೇಟರ್​ ವಿಚಾರ ಕ್ರಿಮಿನಲ್​ ಪಿತೂರಿ ಅಲ್ಲವೇ? ಪ್ರಧಾನಿಗೆ ರಾಹುಲ್​ ಗಾಂಧಿ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
