ಕೊಚ್ಚಿ:ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಬಾಲಕಿಯೊಬ್ಬಳು ಗರ್ಭಿಣಿಯಾಗಿರುವ ಸುದ್ದಿ ಹೊರಬಿದ್ದ ಕೂಡಲೇ ಪೊಲೀಸ್​ ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ಕೇರಳದ ವೆಲ್ಲರಾಡದಲ್ಲಿ ನಡೆದಿದೆ.
ಬಂಧಿತರನ್ನು ಮರಯೂರ್​ ಠಾಣಾ​ ಸಿಪಿಒ ದಿಲೀಪ್​ (43) ಎಂದು ಗುರುತಿಸಲಾಗಿದೆ. ಅರ್ಯಾಂಕೋಡ್​ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿ ದಿಲೀಪ್​, ಸಂತ್ರಸ್ತ ಬಾಲಕಿಗೆ ದೂರದ ಸಂಬಂಧಿ ಆಗಬೇಕು.
ಇದನ್ನೂ ಓದಿ:ಕೇರಳದ 13 ಯೂಟ್ಯೂಬರ್ಸ್​ ಮನೆಗಳ ಮೇಲೆ ಐಟಿ ದಾಳಿ: ಸ್ಫೋಟಕ ಮಾಹಿತಿ ಬಯಲು, ದಂಗಾದ ಅಧಿಕಾರಿಗಳು
9ನೇ ತರಗತಿ ಓದುತ್ತಿರುವ ಸಂತ್ರಸ್ತೆ ಕಳೆದ ಕೆಲವು ದಿನಗಳಿಂದ ಹೊಟ್ಟೆ ನೋವಿ ಅನುಭವಿಸುತ್ತಿದ್ದಳು. ಇತ್ತೀಚೆಗೆ ಹೋಟೆ ನೋವು ಸಹಿಸಿಕೊಳ್ಳಲಾಗದಷ್ಟು ಜಾಸ್ತಿಯಾದ್ದರಿಂದ ಪಾಲಕರು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯ ಹೊಟ್ಟೆಯನ್ನು ಸ್ಕ್ಯಾನ್​ ಮಾಡಿ, ವರದಿಯನ್ನು ನೋಡಿದ ವೈದ್ಯರಿಗೆ ಶಾಕ್​ ಒಂದು ಕಾದಿತ್ತು.
ಸ್ಕ್ಯಾನಿಂಗ್​ ವರದಿಯಲ್ಲಿ ಬಾಲಕಿ ಗರ್ಭಿಣಿ ಎಂಬ ಬಯಲಾಯಿತು. ಇದನ್ನು ಕೇಳಿ ಬಾಲಕಿಯ ಪಾಲಕರಿಗೂ ಆಘಾತವಾಯಿತು. ಬಳಿಕ ವಿಚಾರಿಸಿದಾಗ ಪೊಲೀಸ್​ ಅಧಿಕಾರಿ ಕಾಮಕಾಂಡವನ್ನು ಹುಡುಗಿ ಬಿಚ್ಚಿಟ್ಟಿದ್ದು, ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ಪಾಸ್​ ಮಾಡಲು ಎಚ್​ಒಡಿಗೆ 18 ವರ್ಷದ ಹುಡುಗಿಯರ ಪೂರೈಕೆ: ಬಿರುಗಾಳಿ ಎಬ್ಬಿಸಿದ ಗಾಯಕಿ ಚಿನ್ಮಯಿ ರೀಟ್ವೀಟ್​

ಡಿಎಂಕೆ ಸಂಸದೆ ಕನಿಮೋಳಿ ಪ್ರಯಾಣ: ಖಾಸಗಿ ಬಸ್​ ಮಹಿಳಾ ಚಾಲಕಿಯನ್ನು ಕೆಲಸದಿಂದ ತೆಗೆದ ಮಾಲೀಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 1 =
Remember me
