ನವದೆಹಲಿ:ಫೇಸ್​ಬುಕ್​ನಲ್ಲಿ ಕೆಲಸ ನಿರ್ವಹಿಸುತ್ತಿರುವವರ ಪೈಕಿ ಸಾವಿರಾರು ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಆವರಿಸಿದೆ! ಸುಮಾರು 12,000 ನೌಕರರನ್ನು ಕೆಲಸದಿಂದ ತೆಗೆದು ಹಾಕಲು ಮೆಟಾ ಪ್ಲಾಟ್​ಫಾರ್ಮ್​ ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದ್ದು, ಶೀಘ್ರದಲ್ಲೇ ಕೆಲಸದಿಂದ ವಜಾ ಆಗಲಿದ್ದಾರೆ.
12 ಸಾವಿರ ನೌಕರರು ವಜಾಗೊಂಡರೆ ಫೇಸ್​ಬುಕ್​ನ ಒಟ್ಟು ಉದ್ಯೋಗಿಗಳ ಶೇ.15ರಷ್ಟು ಖಡಿತ ಮಾಡಿದಂತೆ ಆಗುತ್ತದೆ. ದೊಡ್ಡ ಪ್ರಮಾಣದಲ್ಲಿ ನೌಕರರನ್ನು ಮನೆಗೆ ಕಳಿಸುವ ಬಗ್ಗೆ ಕಂಪನಿಯಲ್ಲಿ ಆಂತರಿಕವಾಗಿ ಯೋಜನೆ ಸಿದ್ಧವಾಗುತ್ತಿದೆ. ಕಳಪೆಯಾಗಿ ಕೆಲಸ ಮಾಡುವವರ ಪಟ್ಟಿ ಸಿದ್ಧವಾಗುತ್ತಿದೆ ಎಂದೂ ತಿಳಿದು ಬಂದಿದೆ.
ನೇಮಕಾತಿಗಳನ್ನು ಸ್ಥಗಿತಗೊಳಿಸಿರುವುದಾಗಿ ಕಳೆದ ತಿಂಗಳು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್​ ಝುಕರ್​ಬರ್ಗ್ ಘೋಷಿಸಿದ್ದರು. ಇದರ ಬೆನ್ನಲ್ಲೇ ದೊಡ್ಡ ಮಟ್ಟದಲ್ಲಿ ನೌಕರರನ್ನು ವಜಾ ಮಾಡುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಸಿಬ್ಬಂದಿ ಮತ್ತು ಮಾರ್ಕ್​ ಝುಕರ್​ಬರ್ಗ್​ ನಡುವೆ ಇತ್ತೀಚೆಗೆ ನಡೆದ ಸಾಪ್ತಾಹಿಕ ಪ್ರಶ್ನೋತ್ತರ ಸೆಷನ್​ನಲ್ಲಿ, “ಲೇ ಆಫ್​​” ಮಾಡಲು ತಂಡಗಳ ಶೇ.15 ಉದ್ಯೋಗಿಗಳನ್ನು ಆಯ್ಕೆ ಮಾಡುವುದು ಅಗತ್ಯ ಎಂದು ಆಯಾ ವಿಭಾಗಗಳ ನಿರ್ದೇಶಕರಿಗೆ ಕಾರ್ಯ ನಿರ್ವಾಹಕರು ಸೂಚಿಸಿದ್ದಾಗಿ ಬಿಸಿನೆಸ್​ ಇನ್​ಸೈಡರ್​ ವರದಿ ಹೇಳಿದೆ.
ರಿಲ್ಯಾಕ್ಸ್​ ಮೂಡ್​ಗೆ ಜಾರಿದ ಗಜಪಡೆ: ಮೈಸೂರು ಅರಮನೆ ಅಂಗಳದಲ್ಲಿ ಆನೆಗಳ ಮಜ್ಜನ ನೋಡಿ ಸಂಭ್ರಮಿಸಿದ ಚಿಣ್ಣರು

ಲವ್​ ಜಿಹಾದ್​ ಬಲೆಗೆ ಕನ್ನಡದ ನಟಿ? ಕಣ್ಣೀರಿಟ್ಟು ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದಿವ್ಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 11 =
Remember me
