ಲಖನೌ:ಅದೆಷ್ಟೇ ಪರಿಚಿತರಾದರೂ ಅವರು ಕರೆದೊಡನೆ ಹೋಗಿಬಿಡಬಾರದು. ಹಾಗೊಂದು ವೇಳೆ ಹೋಗುವುದಾದರೂ ತಮಗೆ ರಕ್ಷಣೆ ಇದೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎನ್ನುತ್ತಾರೆ ತಿಳಿದವರು. ಆದರೆ ಇಲ್ಲೊಬ್ಬ ಬಾಲಕಿ ಪರಿಚಯಸ್ಥರು ಕರೆದರೆಂದು, ಹಿಂದೆ ಮುಂದೆ ಯೋಚಿಸದೆ ಹೋಗಿ, ಜೀವನವನ್ನೇ ಹಾಳು ಮಾಡಿಕೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:
ಉತ್ತರ ಪ್ರದೇಶದ ಕಾನ್ಪುರದ 13 ವರ್ಷದ ಬಾಲಕಿ ಈ ರೀತಿ ಮೋಸ ಹೋದ ಬಾಲಕಿ. ಇತ್ತೀಚೆಗೆ ಆಕೆಯ ಅಣ್ಣನ ಸ್ನೇಹಿತ ಸಾಹಿಲ್​ ಅವಳನ್ನು ಕಾಫಿ ಕುಡಿಯಲು ಕಾಫಿ ಶಾಪ್​ಗೆ ಕರೆದಿದ್ದಾನೆ. ಸಾಹಿಲ್​ ಅನ್ನು ತನ್ನ ಅಣ್ಣನಂತೆಯೇ ಕಾಣುತ್ತಿದ್ದ ಬಾಲಕಿ ಬೇರೇನೂ ಯೋಚಿಸದೆ ಕಾಫಿ ಶಾಪ್​ಗೆ ಹೋಗಿದ್ದಾಳೆ. ಅಲ್ಲಿಂದ ಬಾಲಕಿಯನ್ನು ಸಾಹಿಲ್​ ತನ್ನ ಫ್ಲಾಟ್​ಗೆ ಕರೆದುಕೊಂಡು ಹೋಗಿದ್ದಾನೆ. ಫ್ಲಾಟ್​ನಲ್ಲಿ ಆಕೆಗೆ ಮದ್ಯಪಾನ ಮಾಡಿಸಿದ್ದಾನೆ. ಬಾಲಕಿ ಅಮಲಿನಿಂದಾಗಿ ಮೂರ್ಛೆ ಹೋದ ನಂತರ ಸ್ನೇಹಿತರೊಂದಿಗೆ ಆಕೆಯ ಮೇಲೆ ಗ್ಯಾಂಗ್​ ರೇಪ್​ ಮಾಡಿದ್ದಾನೆ. ಕಾಮದಾಸೆ ತೀರಿದ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ:
ಇತ್ತ ಮಗಳು ಕಾಣಿಸದಿದ್ದಾಗ ತಂದೆ ತಾಯಿ ಗಾಬರಿಗೊಂಡಿದ್ದಾರೆ. ಪೊಲೀಸ್​ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. ಭಾನುವಾರ ಸಂಜೆ ವೇಳೆಗೆ ಬಾಲಕಿ ಮನೆಗೆ ವಾಪಾಸಾಗಿದ್ದಾಳೆ. ಅತ್ಯಂತ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಆಕೆ ನಡೆದ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದಾಳೆ. ಆಕೆಯ ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ದೃಢವಾದ ನಂತರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸದ್ಯ ರಾಹುಲ್​ ಮತ್ತು ಮಿಥುನ್​ ಹೆಸರಿನ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಹಿಲ್​ ಮತ್ತು ವಿ.ಕೆ. ರಾಜಪೂತ್​ ಹೆಸರಿನ ಆರೋಪಿಗಳಿಗಾಗಿ ಹುಡುಕಾಡಲಾಗುತ್ತಿದೆ. (ಏಜೆನ್ಸೀಸ್​)
ಲಾಕ್​ಡೌನ್​ನಲ್ಲಿ ಅತ್ತೆ ಮನೆಯಲ್ಲಿದ್ದ ಅಳಿಯನಿಗೆ ನಾದಿನಿ ಮೇಲೆ ಪ್ರೀತಿ; ತಂಗಿಯೊಡನೆ ಕಾಲ್ಕಿತ್ತ ಪತಿರಾಯ

ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 17 =
Remember me
