ಗ್ಲಾಸ್ಗೋ:“ಪ್ರತಿಯೊಂದು ಕಾರಣವೂ ನಮ್ಮಲ್ಲಿ ಕೋಪ ಉಂಟುಮಾಡುತ್ತದೆ. ಆದರೆ, ನನಗೆ ಕೋಪ ಮಾಡಿಕೊಳ್ಳಲು ಸಮಯವಿಲ್ಲ. ಕ್ರಿಯಾಶೀಲವಾಗಿರಲು ಬಯಸುತ್ತೇನೆ. ನಾನು ಕೇವಲ ಭಾರತದ ಹೆಣ್ಣುಮಗಳಲ್ಲ. ಈ ಭೂಮಿಯ ಹೆಣ್ಣುಮಗಳು. ಹೀಗಾಗಿ ನನಗೆ ಹೆಮ್ಮೆ ಇದೆ. ನಾನೊಬ್ಬ ವಿದ್ಯಾರ್ಥಿ, ನವೋನ್ವೇಷಕಿ, ಪರಿಸರ ಕಾಳಜಿಯುಳ್ಳವಳು, ಉದ್ಯಮಿ ಎಲ್ಲದಕ್ಕೂ ಮಿಗಿಲಾಗಿ ನಾನು ಆಶಾವಾದಿ” ಹೀಗೆಂದು ಸ್ಕಾಟ್ಲೆಂಡ್​ನ ಗ್ಲಾಸ್ಗೋನಲ್ಲಿ ಜಾಗತಿಕ ನಾಯಕರು ಭಾಗವಹಿಸುತ್ತಿರುವ ಸಿಒಪಿ-26 ಶೃಂಗದಲ್ಲಿ ಬಿರುಸಾಗಿ ಮಾತನಾಡಿ ಗಮನಸೆಳೆದವರು ವಿನಿಶಾ ಉಮಾಶಂಕರ್​.
ವಿನಿಶಾ ಉಮಾಶಂಕರ್​ ತಮಿಳುನಾಡಿನ ತಿರುವಣ್ಣಾಮಲೈನ 10ನೇ ತರಗತಿ ವಿದ್ಯಾರ್ಥಿನಿ. ಪ್ರಿನ್ಸ್​ ವಿಲಿಯಮ್​ ಅವರ ಆಹ್ವಾನದ ಮೇರೆಗೆ ವಿನಿಶಾ ಸ್ವಚ್ಛ ತಂತ್ರಜ್ಞಾನ ಮತ್ತು ನವೋನ್ವೇಷಣೆ ಕುರಿತ ಐದು ನಿಮಿಷ ಕಾಲ ತನ್ನ ವಿಚಾರವನ್ನು ಈ ವೇದಿಕೆಯಲ್ಲಿ ಮಂಡಿಸಿದರು.

“ಈ ವೇದಿಕೆಯಲ್ಲಿರುವ ಗಣ್ಯರನ್ನು ಕೇಳಿಕೊಳ್ಳುವುದಿಷ್ಟು-ನಾವು ಮಾತನಾಡುವುದನ್ನು ನಿಲ್ಲಿಸಬೇಕು. ಕೆಲಸ ಮಾಡಿ ತೋರಿಸಬೇಕು. ನಾವು ದ ಅರ್ಥ್​ಶಾಟ್​ ಫ್ರೈಜ್​ ವಿಜೇತರು ಮತ್ತು ಫೈನಲಿಸ್ಟ್​ಗಳು ವಿವಿಧ ನವೋನ್ವೇಷಣೆ, ಪ್ರಾಜೆಕ್ಟ್​ ಮತ್ತು ಸಲ್ಯೂಷನ್ಸ್​ಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿದ್ದೇವೆ. ಇದು ಪಳೆಯುಳಿಕೆ ಇಂಧನ, ಹೊಗೆ ಮತ್ತು ಮಾಲಿನ್ಯಗಳ ಮೇಲೆ ಕಟ್ಟಿದ ಅರ್ಥವ್ಯವಸ್ಥೆಯ ಭಾಗವಲ್ಲ. ಹೀಗಾಗಿ ಇದನ್ನು ಬೆಂಬಲಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಹಳಸಲು ವಿಚಾರಗಳ ಮೇಲೆ ಚರ್ಚೆ ಮಾಡುವುದನ್ನು ಬಿಟ್ಟುಬಿಡಿ, ಹೊಸ ಭವಿಷ್ಯಕ್ಕಾಗಿ ಹೊಸ ದೃಷ್ಟಿಕೋನದೊಂದಿಗೆ ಮುಂದುವರಿಯೋಣ. ನಿಮ್ಮ ಸಮಯ, ಹಣ ಮತ್ತು ಪ್ರಯತ್ನವನ್ನು ನಮ್ಮ ಪ್ರಯತ್ನಕ್ಕೆ ಸೇರಿಸಿ, ನಮ್ಮ ಭವಿಷ್ಯಕ್ಕೆ ರೂಪುಕೊಡಲು ಮುಂದಾಗಿ” ಎಂದು ಹೇಳಿದರು.
ಈಕೆಯ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​, ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮತ್ತು ಇತರೆ ಗಣ್ಯರು ವೇದಿಕೆಯಲ್ಲಿದ್ದರು.
ಭಜರಂಗಿ 2 ಪ್ರೀ ರಿಲೀಸ್​ ದಿನವೇ ಅಪ್ಪು ಡಲ್​ ಆಗಿದ್ದರು… ಪುನೀತ್​ ಸಾವಿನ ಬಳಿಕ ಸ್ಫೋಟಕ ವಿಚಾರ ಬಿಚ್ಚಿಟ್ಟ ಶಿವಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 18 =
Remember me
