ಆಗ್ರಾ:ಮಣಪ್ಪುರಂ ಗೋಲ್ಡ್​ ಲೋನ್​ ಫೈನಾನ್ಸ್ ಕಚೇರಿಗೆ ಬಂದೂಕು ಹಿಡಿದು ನುಗ್ಗಿದ 6 ಮಂದಿ ದರೋಡೆಕೋರರು 15 ಕೆಜಿ ಚಿನ್ನ, 5 ಲಕ್ಷ ರೂಪಾಯಿ ನಗದು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ಕಮಲಾ ನಗರದಲ್ಲಿ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 6 ಮಂದಿ ಪೈಕಿ ಇಬ್ಬರು ದರೋಡೆಕೋರರನ್ನು ಎನ್​ಕೌಂಟರ್​ ಮಾಡಿದ್ದಾರೆ. ಆರೋಪಿಗಳಾದ ಮನೀಷ್​ ಪಾಂಡೆ ಮತ್ತು ನಿದೋರ್ಷ್​ ಕುಮಾರ್​ ಮೃತರು.
ಶಸ್ತ್ರಾಸ್ತ್ರಗಳನ್ನು ಹಿಡಿದು ಮುಸುಕುಧಾರಿಗಳಾಗಿ ನುಗ್ಗಿದ ಮಣಪ್ಪುರಂ ಕಚೇರಿಗೆ ನುಗ್ಗಿದ ದರೋಡೆಕೋರರ ತಂಡ ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಮತ್ತು ಹಣ ತುಂಬಿಕೊಂಡು 20 ನಿಮಷದಲ್ಲಿ ಪರಾರಿಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಚೇರಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ದರೋಡೆಕೋರರ ಪತ್ತೆಗೆ ಮಿಂಚಿನ ಕಾರ್ಯಾಚರಣೆ ನಡೆಸಿತ್ತು. ಸಮೀಪದ ಮೆಡಿಕಲ್​ ಶಾಪ್​ವೊಂದರಲ್ಲಿ ದರೋಡೆಕೋರರು ಇರುವ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ಮಾಡಿದ್ದು, ಆ ವೇಳೆ ದರೋಡೆಕೋರರ ತಂಡ ಪೊಲೀಸರತ್ತ ಗುಂಡಿನ ದಾಳಿ ಮಾಡಿತ್ತು. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿದ್ದು. ಆರೋಪಿಗಳಿಬ್ಬರು ಎನ್​ಕೌಂಟರ್​ಗೆ ಬಲಿಯಾಗಿದ್ದಾರೆ. ಅವರಿಂದ 7.5 ಕೆಜಿ ಚಿನ್ನ, ಒಂದೂವರೆ ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ನಿರ್ದೇಶಕರು ಪುಡಂಗಿ ಅಲ್ಲ, ಅವ್ರಿಗೆ ಕೊಂಬೂ ಇರಲ್ಲ.. ದಯವಿಟ್ಟು ಯೋಚಿಸಿ ಮಾತಾಡಿ: ದರ್ಶನ್​ಗೆ ಪ್ರೇಮ್​ ಎಚ್ಚರಿಕೆ

ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್​ಗೆ ಆಸ್ತಿ ಕೊಡಲ್ಲ ಅಂದೆ…

‘ಮಹಾ’ ಮಳೆಗೆ ಗೋಡೆ ಕುಸಿದು 14 ಮಂದಿ ಸಾವು! ವರುಣನ ಆರ್ಭಟಕ್ಕೆ ತತ್ತರಿಸಿದ ವಾಣಿಜ್ಯ ನಗರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
