ಪಂಜಾಬ್​:ಮೊಬೈಲ್​ ಕಳ್ಳರ ಕಾಟ ಹೆಚ್ಚಾಗುತ್ತಿದೆ. ರಸ್ತೆಬದಿ ಇರಲಿ, ಮನೆ ಆವರಣದಲ್ಲೂ ನಿರಾತಂಕವಾಗಿ ಮೊಬೈಲ್​ ಹಿಡಿದು ಮಾತನಾಡುವಂತಿಲ್ಲ. ನೋಡನೋಡುತ್ತಿದ್ದಂತೆಯೇ ಅಲ್ಲಿಗೆ ಬರುವ ದುಷ್ಕರ್ಮಿಗಳು ಮೊಬೈಲ್​ ಕಸಿದುಕೊಂಡು ಕ್ಷಣಾರ್ಧದಲ್ಲೇ ಪರಾರಿಯಾಗುತ್ತಿದ್ದಾರೆ. ಇಂತಹ ಪ್ರಕರಣಗಳು ನಿತ್ಯ ಲಕ್ಕವಿಲ್ಲದಷ್ಟು ನಡೆಯುತ್ತಲೇ ಇದೆ. ಈ ನಡುವೆ 15 ವರ್ಷದ ಬಾಲಕಿಯೊಬ್ಬಳು ಮೊಬೈಲ್​ ಕಳ್ಳರ ವಿರುದ್ಧ ನಡುರಸ್ತೆಯಲ್ಲಿ ಹೋರಾಡಿ ಮೊಬೈಲ್​ ಸಮೇತ ದುಷ್ಕರ್ಮಿಯನ್ನು ಹಿಡಿದಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಖತ್​ ವೈರಲ್​ ಆಗಿದೆ.
ಪಂಜಾಬ್‌ನ ಜಲಂಧರ್-ಕಪುರ್ಥಾಲಾ ರಸ್ತೆ ಬಳಿಯ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ಆ.30ರಂದು ಈ ಘಟನೆ ಸಂಭವಿಸಿದೆ. ಕುಸುಮ್ ಕುಮಾರ್ ಎಂಬ ಹದಿನೈದು ವರ್ಷದ ಬಾಲಕಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್​ ಆಗುತ್ತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಬಾಲಕಿ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಾಲಕಿಯ ಮೇಲೆ ಹಲ್ಲೆ ಮಾಡಿ ಕೆಳಕ್ಕೆ ದೂಡಿದರೂ ಧೃತಿಗೆಡದ ಆಕೆ, ಬೈಕ್‌ನಲ್ಲಿ ಹೋಗುತ್ತಿದ್ದ ಕಳ್ಳರನ್ನು ಬೆನ್ನಟ್ಟಿದಳು.ಇದನ್ನೂ ಓದಿರಿಎಲ್ಲವೂ ಸರ್ವನಾಶವಾಯ್ತು… ಎಂದು ಗೋಳಾಡುತ್ತಿದ್ದ ರೈತನಿಗೆ ಪಿಎಸ್ಐ ಕೊಟ್ರು ಅಚ್ಚರಿಯ ಉಡುಗೊರೆ!
ನೆಲಕ್ಕೆ ಬಿದ್ದ ಕುಸುಮ್ ತಕ್ಷಣ ಎದ್ದು ಬೈಕ್ ಹಿಂಬದಿ ಸವಾರನನ್ನು ಗಟ್ಟಿಯಾಗಿ ಹಿಡಿದು ಎಳೆಯುತ್ತಿದ್ದಂತೆ ಬೈಕ್​ ನಿಯಂತ್ರಣ ತಪ್ಪಿದರೂ ಸವಾರ ಮಾತ್ರ ನಿಲ್ಲಿಸಲಿಲ್ಲ. ಕಳ್ಳರು
ತಪ್ಪಿಸಿಕೊಳ್ಳಲು ಆಕೆಯ ಮೇಲೆ ಹಲ್ಲೆ ಮಾಡಿದರೂ ಪಟ್ಟುಬಿಡದ ಬಾಲಕಿ, ಹಿಂಬದಿ ಸವಾರನನ್ನು ಹಿಡಿದುಕೊಂಡಳು. ಅಷ್ಟರಲ್ಲಿ ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಬೈಕ್​ ಸವಾರ ಪರಾರಿಯಾದ. ಹಿಂಬದಿ ಸವಾರ ಸಿಕ್ಕಿಬಿದ್ದ.
ಸಿಕ್ಕಿಬಿದ್ದ ಕಳ್ಳ ಅವಿನಾಶ್​ ಕುಮಾರ್​ ಅಲಿಯಾಸ್​ ಅಶು(22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅವಿನಾಶ್​ ಕುಮಾರ್​ನನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರಬೇಕಿದೆ. ಕಳ್ಳರ ಹಲ್ಲೆಯಿಂದ ಗಾಯಗೊಂಡಿದ್ದ ಕುಸುಮ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಮೊಬೈಲ್ ಚೋರರ ವಿರುದ್ಧ ಹೋರಾಡಿ ಗೆದ್ದ ಬಾಲಕಿಯ ಸಾಹಸಕ್ಕೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
https://www.facebook.com/VVani4U/videos/3205181416183608/
video/ ಬೆಂಕಿಯಲ್ಲಿ ಚಿತ್ರ ಬಿಡಿಸಿ ದಾಖಲೆ ಬರೆದ ಕರ್ನಾಟಕದ ಕುವರ

Sign in to your account
Please enter an answer in digits:four × one =
Remember me
