ಕೋಲ್ಕತ:ಡ್ರಗ್ಸ್​ ಸೇವನೆ ಚಟಕ್ಕೆ ಅಂಟಿಕೊಂಡಿದ್ದ ಯುವತಿಯೊಬ್ಬಳ ಮೃತ ದೇಹ ಕೋಲ್ಕತದಲ್ಲಿ ಪತ್ತೆಯಾಗಿದೆ. ಸಿಮೆಂಟ್​ ಚೀಲದಲ್ಲಿ ಮೃತ ದೇಹ ಸಿಕ್ಕಿದ್ದು, ಇದು ಆತ್ಮಹತ್ಯೆ ಇದ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮರದಲ್ಲಿ ನೇತಾಡುತ್ತಿತ್ತು 16 ವರ್ಷದ ಬಾಲಕಿ ದೇಹ; ಬೆಚ್ಚಿ ಬೀಳಿಸುತ್ತೆ ಈ ಹೈ ಸ್ಕೂಲ್​ ಲವ್​ ಸ್ಟೋರಿ
ಸಬಾ ಖಾತೂನ್​ ಅಲಿಯಾಸ್​ ನೈನಾ(20) ಕೋಲ್ಕತದಲ್ಲಿ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. ಇತ್ತೀಚೆಗೆ ಆಕೆ ಪಿಜಿಗೆ ಸೇರಿಕೊಂಡಿದ್ದಾಳೆ. ವಿಪರೀತವಾಗಿ ಡ್ರಗ್ಸ್​ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದಾಳೆ. ಡ್ರಗ್ಸ್​ಗೆ ಹಣ ಒಟ್ಟು ಮಾಡಲು ಅನೇಕರನ್ನು ಭೇಟಿ ಮಾಡುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ:ಗ್ರಾಮದಲ್ಲಿದ್ದವರಿಗೆಲ್ಲ ಕರೊನಾ ವೈರಸ್ ಸೋಂಕು- ಒಬ್ಬ ಮಾತ್ರ ಬಚಾವ್​ !
ನಗರದ ಎಂಎಂ ಆಲಿ ರಸ್ತೆಯಲ್ಲಿ ಬಿದ್ದಿದ್ದ ಸಿಮೆಂಟ್​ ಚೀಲದಲ್ಲಿ ಯುವತಿಯ ಮೃತ ದೇಹ ಸಿಕ್ಕಿದೆ. ಚೀಲದಿಂದ ಹೊರಬಂದಿದ್ದ ಕಾಲು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಯುವತಿಯ ಗುರುತು ಪತ್ತೆ ಹಚ್ಚಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆಕೆಯನ್ನು ಕೊಲೆ ಮಾಡಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆಕೆಯ ಕುತ್ತಿಗೆಯ ಭಾಗದಲ್ಲಿರುವ ಮಾರ್ಕ್​ಗಳನ್ನು ಗಮನಿಸಿದರೆ ಇದೊಂದು ಆತ್ಮಹತ್ಯೆ ಪ್ರಕರಣ ಎನಿಸುವಂತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇನ್ನಷ್ಟು ವಿಚಾರಗಳು ಹೊರಬರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)
ಈ ನಗರದಲ್ಲಿ ಇನ್ನು ಸೂರ್ಯ ಹುಟ್ಟೋದು 2021ರಲ್ಲಿಯೇ!

ಹುಡುಗನೊಂದಿಗೆ ಚಾಟ್​ ಮಾಡುತ್ತಿದ್ದ ತಂಗಿಗೆ ಗುಂಡಿಕ್ಕಿದ ಅಣ್ಣ; ಜೈಲು ಪಾಲಾದ ಅಪ್ರಾಪ್ತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 4 =
Remember me
