ಗುರುಗ್ರಾಮ:ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ ಕೆಲವೊಮ್ಮೆ ಆ ತಾಯಿಯ ಮೇಲೇ ನಾವು ಅದೆಷ್ಟು ದ್ವೇಷ ಸಾಧಿಸಿಬಿಡುತ್ತೇವೆ. ಇದೇ ರೀತಿಯಲ್ಲಿ ಮಗನೊಬ್ಬ ತಾಯಿಯೊಂದಿಗೆ ಜಗಳವಾಡಿ ಆಕೆಯನ್ನೇ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಪತಿ ಶವವಾದ
25 ವರ್ಷದ ಯುವಕನ ಅಮ್ಮನಿಗೆ ಎರಡನೇ ಮದುವೆಯಾಗಿತ್ತು. ಆಕೆ ಮೊದಲನೇ ಮದುವೆಯಾಗಿ ಮೂರು ವರ್ಷದಲ್ಲೇ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ಆತನ ತಮ್ಮನೊಂದಿಗೇ ಎರಡನೇ ಮದುವೆ ಮಾಡಿಸಲಾಗಿತ್ತು. ಎರಡನೇ ಪತಿ ನಗರದಿಂದ ಹೊರ ವಲಯದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನು. ಅಲ್ಲೇ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ಆತ, ತನ್ನ ಹೆಂಡತಿ ಮತ್ತು ಅಣ್ಣನ ಮಗನಿಗಾಗಿ ಒಂದಿಷ್ಟು ಹಣವನ್ನೂ ಕಳುಹಿಸಿಕೊಡುತ್ತಿದ್ದನಂತೆ.
ಇತ್ತ ಮಗ ಆಗಾಗ ತಾಯಿಯ ಬಳಿ ಜಗಳವಾಡುತ್ತಿದ್ದ. ನನಗೆ ಹಣ ಕೊಡು ಎಂದು ಪೀಡಿಸುತ್ತಿದ್ದ. ಮಗನ ಕಾಟ ತಾಳಲಾರದೆ ಒಂದೆರೆಡು ದಿನ ಆತನನ್ನು ಮನೆಯಿಂದ ಹೊರ ಹಾಕಿದ್ದಳಂತೆ ಆ ತಾಯಿ. ಆದರೆ ಇತ್ತೀಚೆಗೆ ಸಿಟ್ಟಿಗೆದ್ದ ಮಗ ಜೀವನದಲ್ಲಿ ಕ್ಷಮಿಸಲಾಗಂದತಹ ತಪ್ಪನ್ನು ಮಾಡಿದ್ದಾನೆ.
ಇದನ್ನೂ ಓದಿ:ರಾಜಕುಮಾರಿಗೆ ಬಾಡಿಗಾರ್ಡ್​ನೊಂದಿಗೆ ಅಕ್ರಮ ಸಂಬಂಧ; ವಿಷಯ ಮುಚ್ಚಿಡಲು ಕೊಟ್ಟಿದ್ದು 12 ಕೋಟಿ ರೂ!
ತನ್ನ ಹೆತ್ತ ತಾಯಿಯ ಮೇಲೇ ಅತ್ಯಾಚಾರ ಮಾಡಿದ್ದಾನೆ. ಆಕೆಯನ್ನು ಕೊಲೆ ಮಾಡಿ, ಅಪ್ಪನಿಗೆ ಕರೆ ಮಾಡಿದ್ದಾನೆ. ಅಮ್ಮ ಸತ್ತಿದ್ದಾಳೆ, ಬೇಗ ಮನೆಗೆ ಬಾ ಎಂದಿದ್ದಾನೆ. ಮನೆಗೆ ಬಂದ ತಂದೆ, ಪೊಲೀಸರಿಗೆ ವಿಚಾರ ತಿಳಿಸಿದ್ದಾನೆ. ಪೊಲೀಸ್​ ತನಿಖೆಯಲ್ಲಿ ನಿಜಾಂಶ ಹೊರಬಿದ್ದಿದೆ. ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)
ಉಡುಪಿ ಮೂಲದ ಮಹಿಳೆಯೀಗ ಅಮೆರಿಕದ ಪ್ರಥಮ ಮಹಿಳೆಯ ಪಾಲಿಸಿ ಡೈರೆಕ್ಟರ್​!

ಫ್ರೀಯಾಗಿ ಡ್ರಾಪ್​ ಕೊಡುತ್ತೇವೆ ಎನ್ನುತ್ತಿದ್ದರು; ದರೋಡೆ ಮಾಡಿ ರಸ್ತೆಗೆ ದೂಡಿ ಪರಾರಿಯಾಗುತ್ತಿದ್ದರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + three =
Remember me
