ರಾಯ್​ಬರೇಲಿ:ತನ್ನ ಮಾಜಿ ಪ್ರೇಯಸಿಗೆ ಮದುವೆ ನಿಶ್ಚಯವಾಗಿದೆ ಎಂಬ ಸಿಟ್ಟಿನಿಂದಾಗಿ ಯುವಕನೊಬ್ಬ ಪ್ರೇಯಸಿಯ ಜತೆಗಿದ್ದ ಹಳೆಯ ಫೋಟೊವನ್ನು ಪೋಸ್ಟರ್ ಮಾಡಿಸಿ ಅಂಟಿಸಿರುವ ಘಟನೆ ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿ ನಡೆದಿದೆ.
28 ವರ್ಷದ ಯುವಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯಾವುದೋ ಕಾರಣಕ್ಕೆ ಅವರಿಬ್ಬರ ಪ್ರೀತಿ ಮುರಿದುಬಿದ್ದಿದೆ. ಅದಾದ ನಂತರ ಯುವತಿ ತನ್ನ ಮನೆಯವರು ನಿಶ್ಚಯಿಸಿದ ಲಾಯರ್​ ವರನನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ. ಮುಂದಿನ ವಾರದಲ್ಲಿ ಅವರ ಮದುವೆ ದಿನಾಂಕವನ್ನು ನಿಶ್ಚಯಿಸಲಾಗಿದೆ. ತನ್ನ ಹುಡುಗಿ ತನ್ನ ಬಿಟ್ಟು ಬೇರೆಯವನನ್ನು ಮದುವೆಯಾಗುತ್ತಿದ್ದಾಳೆ ಎಂಬ ಸಿಟ್ಟಿಗೆ ಬಿದ್ದ ಯುವಕ ಆಕೆಯೊಂದಿಗೆ ಹೋಳಿ ಆಚರಿಸಿದ್ದ ಫೋಟೋವನ್ನು ಬಳಸಿಕೊಂಡು, ಹೋಲಿ ಹಬ್ಬದ ಶುಭಾಶಯ ಕೋರುವ ಪೋಸ್ಟರ್​ ರಚಿಸಿ ಅಂಟಿಸಿದ್ದಾನೆ. ಇದರಿಂದಾಗಿ ಸಿಟ್ಟಿಗೆದ್ದ ಯುವತಿಯ ಮನೆಯವರು ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
ಮಂಗಳವಾರದಂದು ಆ್ಯಂಟಿ ರೋಮಿಯೋ ಸ್ಕ್ವಾಡ್​ನವರು ಆರೋಪಿಯನ್ನು ಬಂಧಿಸಿದ್ದು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಪೊಲೀಸ್​ ಅಧಿಕಾರಿ ಸರೋಜ್​ ಕುಮಾರ್​,”ಯುವತಿಯ ಮೇಲಿನ ದ್ವೇಷದಿಂದಾಗಿ ಆರೋಪಿ ಈ ಕೆಲಸ ಮಾಡಿದ್ದಾನೆ. ಅವನ ವಿರುದ್ಧ ಐಪಿಸಿಯ ಹಲವು ಸೆಕ್ಷನ್​ಗಳ ಮತ್ತು ಐಟಿ ಆ್ಯಕ್ಟ್​ನ ಅಡಿಯಲ್ಲಿಯೂ ದೂರು ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − ten =
Remember me
