ಲಖನೌ:ಇತ್ತೀಚೆಗೆ 30 ಇಂಚು ಎತ್ತರದ ವ್ಯಕ್ತಿಯೊಬ್ಬ ತನಗೆ ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ವಿಚಾರ ನಿಮಗೆಲ್ಲ ತಿಳಿದಿದೆ. ಆ ವ್ಯಕ್ತಿಗೆ ಸಲ್ಮಾನ್​ ಖಾನ್​ ಭೇಟಿ ಮಾಡಲು ಅವಕಾಶ ಸಿಕ್ಕಿದ್ದು, ಅದಾದ ಮೇಲೆ ಹುಡುಗಿಯರ ಲಿಸ್ಟೇ ಅವನೆದುರಿಗೆ ಬಂದಿದ್ದು ಎಲ್ಲವೂ ವೈರಲ್ ವಿಚಾರಗಳೇ. ಇದೀಗ ಆ ವ್ಯಕ್ತಿಗೆ ಎಂಗೇಜ್ಮೆಂಟ್​ ಕೂಡ ಆಗಿದೆಯಂತೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾದ ಅಜೀಮ್​ ಮಂಸೂರಿ ಹುಡುಗಿಗಾಗಿ ಒದ್ದಾಡಿದ್ದ ವ್ಯಕ್ತಿ. ಕೇವಲ 30 ಇಂಚು ಎತ್ತರ ಇದ್ದ ಕಾರಣ ಆತನಿಗೆ ಹುಡುಗಿಯೇ ಸಿಕ್ಕಿರಲಿಲ್ಲವಂತೆ. ಮನೆಯವರೂ ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಆತ ಪೊಲೀಸ್​ ಠಾಣೆಗೆ ತೆರಳಿ, ಪೊಲೀಸರ ಬಳಿ ಸಹಾಯ ಕೇಳಿದ್ದ. ನೀವಾದರೂ ನನಗೆ ಹುಡುಗಿಯನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದ. ಇದೀಗ ಆತನಿಗೆ ಬುಶಾರಾ ಜತೆ ಎಂಗೇಜ್ಮೆಂಟ್​ ಆಗಿದೆ.
ಬುಶಾರಾ ಮೂರು ಅಡಿಯಷ್ಟು ಎತ್ತರವಿದ್ದಾರಂತೆ. ಪ್ರಥಮ ವರ್ಷದ ಬಿಕಾಂ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಬುಶಾರೊಂದಿಗೆ ಅಜೀಂ ಮಾರ್ಚ್​ 31ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬುಶಾರಿಗೆ ಇನ್ನೊಬ್ಬ ಸಹೋದರಿಯಿದ್ದು, ಅವರಿಗಾಗಿ ವರನನ್ನು ಹುಡುಕಲಾಗುತ್ತಿದೆ. ಅವಳಿಗೂ ವರ ಸಿಕ್ಕ ಮೇಲೆ ಮುಂದಿನ ವರ್ಷ ಇಬ್ಬರಿಗೂ ಒಟ್ಟಿಗೆ ಮದುವೆ ಮಾಡಲಾಗುತ್ತದೆಯಂತೆ. (ಏಜೆನ್ಸೀಸ್​)
ಮಗನ ಜತೆ ಮಗಳ ಮದುವೆ! ಕಳೆದು ಹೋಗಿದ್ದ ಮಗಳನ್ನೇ ಸೊಸೆಯಾಗಿ ತಂದುಕೊಂಡ ತಾಯಿ!

ಚೈಲ್ಡ್​ ಕೇರ್​ ಸೆಂಟರ್​ನಲ್ಲೇ ಮಕ್ಕಳಿಗೆ ಲೈಂಗಿಕ ಕಿರುಕುಳ! ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಮುಖ್ಯಸ್ಥ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
