ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಆರೋಪಿಗಳು ಹೇಳಿಕೆ ಕೇಳಿ ಪೋಲೀಸರೇ ಶಾಕ್​ ಆಗಿದ್ದಾರೆ. ಏನೂ ಅರಿಯದ ಮುಗ್ಧ ಮಗುವಿನ ತಲೆ ಕಡಿದು ‘ಇದು ದೈವಾಜ್ಞೆ, ದೇವರ ಆದೇಶದ ಮೇರೆಗೆ ಮಗುವಿನ ತಲೆ ಕಡಿದು ಬಲಿ ಕೊಟ್ಟಿದ್ದೇವೆ’ ಎಂದು ಕ್ರೂರಿಗಳು ಸಮರ್ಥಿಸಿಕೊಂಡಿದ್ದಾರೆ.
ಇಂತಹ ಅಮಾನವೀಯ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲನಿಯಲ್ಲಿ ನಡೆದಿದೆ. ಆರೋಪಿಗಳಿಬ್ಬರೂ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸಕ್ಕಿದ್ದ ಉತ್ತರಪ್ರದೇಶ ಮೂಲದ ಕುಟುಂಬಕ್ಕೆ ಸೇರಿದ 6 ವರ್ಷದ ಬಾಲಕನ ತಲೆಯನ್ನು ಶನಿವಾರ ರಾತ್ರಿ ಕಡಿದಿದ್ದಾರೆ. ಈ ಸುದ್ದಿ ಸುಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕ ಬಂದ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.
ವಿಚಾರಣೆ ವೇಳೆ ‘ಬಾಲಕ ತಲೆ ಕಡಿಯುವಂತೆ ನಮಗೆ ದೇವರ ಆದೇಶವಿತ್ತು. ಹಾಗಾಗಿ ಬಾಲಕನ ತಲೆ ಕಡಿದೆವು’ ಎಂದಿದ್ದಾರೆ. ಕೊಲೆಯಾದ ಬಾಲಕನ ಕುಟುಂಬ ಮತ್ತು ಕೊಲೆ ಮಾಡಿದ ಆರೋಪಿಗಳಿಗೆ ಪರಸ್ಪರ ಪರಿಚಯವಿತ್ತು. ಇವರೆಲ್ಲೂ ಒಂದೇ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಿರತರಾಗಿದ್ದರು. ಕುಟುಂಬದೊಂದಿಗೆ ಯಾವುದೇ ದ್ವೇಷ ಇರಲಿಲ್ಲ. ಆದರೆ ಕುಡಿದ ಅಮಲಿನಲ್ಲಿ ತಲೆ ಕಡಿದು ದೈವಾದೇಶ ಎಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆಜೆಸ್ಟಿಕ್​ ಸಮೀಪ ರೈಲ್ವೆ ಬ್ರಿಡ್ಜ್​ ಕೆಳಗೆ ಸಿಲುಕಿದ ಲಾರಿ: ಟ್ರಾಫಿಕ್​ ಜಾಮ್​

ICU ಬೆಡ್​ ಮೇಲೆ ಮಲಗಿಕೊಂಡೇ ಸಬ್​ರಿಜಿಸ್ಟ್ರಾರ್​ ಕಚೇರಿಗೆ ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕಿದ ವೃದ್ಧೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + two =
Remember me
