ನಾಗಾಂವ್​(ಅಸ್ಸಾಂ):ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸೋ ಘಟನೆ. ಆಟವಾಡುತ್ತಾ ಓದಿಕೊಂಡಿರಬೇಕಿದ್ದ ವಯಸ್ಸಿನ ಮೂವರು ಅಪ್ರಾಪ್ತ ಬಾಲಕರು ಮೊಬೈಲ್​ನಲ್ಲಿ ಸೆಕ್ಸ್ ವಿಡಿಯೋ ನೋಡುತ್ತಾ 6 ವರ್ಷದ ಬಾಲಕಿಯನ್ನ ಅಮಾನವೀಯವಾಗಿ ಕೊಂದಿದ್ದಾರೆ.
ಬಾಲಕಿಯನ್ನ ಕೊಂದು ಶವವನ್ನ ಶೌಚಗೃಹದ ಬಳಿ ಎಸೆದು ಪರಾರಿಯಾಗಿದ್ದರು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಘಟನೆ ನಡೆದ 24 ತಾಸಿನಲ್ಲಿ ಮೂವರು ಬಾಲಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಇಬ್ಬರ ವಯಸ್ಸು 11 ವರ್ಷ. ಮತ್ತೊಬ್ಬನ ವಯಸ್ಸು 8 ವರ್ಷ. ಇವರ ಮೊಬೈಲ್​ ತುಂಬೆಲ್ಲ ಪೋರ್ನ್​ ವಿಡಿಯೋಗಳೇ ಇದ್ದು, ಪೊಲೀಸರೇ ಅರೆಕ್ಷಣ ಶಾಕ್​ ಆಗಿದ್ದಾರೆ. ಅಷ್ಟೇ ಅಲ್ಲ, ಮೂವರು ಬಾಲಕರ ಪೈಕಿ ಓರ್ವ ಬಾಲಕನ ತಂದೆಗೆ ಈ ವಿಷಯ ಗೊತ್ತಿದ್ದರೂ ಮುಚ್ಚಿ ಹಾಕಲು ಯತ್ನಿಸಿ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಅಪ್ರಾಪ್ತ ಬಾಲಕರು ಬಾಲಕಿಯನ್ನ ಕೊಂದಿದ್ದು ಏಕೆ ಗೊತ್ತಾ?
ಅಸ್ಸಾಂನ ನಾಗಾಂವ್​ ಜಿಲ್ಲೆಯ ಕಾಲಿಯಾಬಾರ್​ನಲ್ಲಿ ಅ.19ರಂದು ಮೂವರು ಅಪ್ರಾಪ್ತ ಬಾಲಕರು ಮೊಬೈಲ್​ನಲ್ಲಿ ಪೋರ್ನ್​ ವಿಡಿಯೋ ನೋಡುತ್ತಾ ಕುಳಿತಿದ್ದರು. ಅದೇ ಸಮಯಕ್ಕೆ ಆಟವಾಡುತ್ತಾ 6 ವರ್ಷದ ಬಾಲಕಿ ಬಂದಳು. ಅವಳನ್ನು ತಮ್ಮತ್ತ ಕರೆದ ಬಾಲಕರು, ಮೋಬೈಲ್​ನಲ್ಲಿ ಪೋರ್ನ್​ ವಿಡಿಯೋ ನೋಡುವಂತೆ ಹೇಳಿದ್ದಾರೆ. ಏನೂ ಅರಿಯದ ಕಂದಮ್ಮ, ನಾನು ಹೋಗಬೇಕು ಬಿಡಿ ಎಂದು ಹಠ ಮಾಡಿದ್ದಾಳೆ. ತಮ್ಮೊಂದಿಗೆ ಕುಳಿತು ವಿಡಿಯೋವನ್ನು ನೋಡಲೇಬೇಕೆಂದು ಬಾಲಕಿಯನ್ನ ಹಿಂಸಿಸಿದ್ದಾರೆ. ಬಾಲಕಿ ಆಗಲ್ಲ ಎಂದಿದ್ದಕ್ಕೆ ಕುಪಿತಗೊಂಡ ಬಾಲಕರು ಕಲ್ಲಿನಿಂದ ಆಕೆಗೆ ಮನಸೋಇಚ್ಛೆ ಹೊಡೆದು ಕೊಂದಿದ್ದಾರೆ. ರಕ್ತಸಿಕ್ತವಾಗಿದ್ದ ಶವವನ್ನ ಸಮೀಪದ ಟಾಯ್ಲೆಟ್​ ಬಳಿ ಎಸೆದು ಬಾಲಕರು ಎಸ್ಕೇಪ್​ ಆಗಿದ್ದರು. ಈ ವಿಷಯ ಮೂವರು ಬಾಲಕರ ಪೈಕಿ ಓರ್ವನ ತಂದೆಗೆ ಗೊತ್ತಿದ್ದರೂ ಸುಮ್ಮನಿದ್ದ.
ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದರು. ಘಟನೆ ನಡೆದ 24 ತಾಸಿನಲ್ಲಿ ಮೂವರು ಅಪ್ರಾಪ್ತ ಬಾಲಕರನ್ನ ಬಂಧಿಸಿ, ಓರ್ವನ ತಂದೆಯನ್ನೂ ಬಂಧಿಸಿದ್ದಾರೆ.
ಮಕ್ಕಳಿಗೆ ಮೊಬೈಲ್​, ಕಂಪ್ಯೂಟರ್​, ಟ್ಯಾಬ್​, ಲ್ಯಾಪ್​ಟಾಪ್​ಗಳನ್ನ ಕೊಡುವ ಮುನ್ನ ಪಾಲಕರು ಜಾಗ್ರತೆ ವಹಿಸಬೇಕು. ಇವುಗಳನ್ನ ಮಕ್ಕಳು ಬಳಸುತ್ತಿದ್ದರೆ ಅವರ ಪ್ರತಿಯೊಂದು ಚಟುವಟಿಕೆಯತ್ತ ಒಂದು ಕಣ್ಣಿಟ್ಟು ಸರಿ-ತಪ್ಪುಗಳ ಬಗ್ಗೆ ತಿಳಿಹೇಳಬೇಕು. ಇಲ್ಲವಾದಲ್ಲಿ ಎಳೆಯ ವಯಸ್ಸಲ್ಲಿ ಲೈಂಗಿಕತೆ, ಮಾದಕ ವ್ಯಸನ, ಅಪರಾಧ ಪ್ರಕರಣದತ್ತ ವಾಲುತ್ತಾರೆ. ಎಲ್ಲವೂ ಮುಗಿದ ಮೇಲೆ ಎಚ್ಚೆತ್ತುಕೊಂಡರೆ ಪ್ರಯೋಜನವಿಲ್ಲ ಎಂದು ಪಾಲಕರಿಗೆ ಪೊಲೀಸರು ಹೇಳಿದ್ದಾರೆ.
ಲವ್​-ಸೆಕ್ಸ್​ ದೋಖಾ: ಎಎಸ್​ಐ ಸೇರಿ 8 ಮಂದಿ ವಿರುದ್ಧ ಎಫ್​ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್​ನೋಟ್​
ಪ್ರೇಯಸಿ ಹೆಸರಲ್ಲಿ ಕೊಡಗು ಎಸ್​ಪಿಗೆ ಪತ್ರ ಬರೆದು ಮಧ್ಯಪ್ರದೇಶದಲ್ಲಿ ಪೊನ್ನಂಪೇಟೆ ಮೂಲದ ಯುವಕ ಆತ್ಮಹತ್ಯೆ!
ಥೂ, ಇವನೆಂಥಾ ಕಾಮುಕ? ಸ್ಕ್ಯಾನಿಂಗ್ ಸೆಂಟರ್​ನ ಶೌಚಗೃಹದಲ್ಲಿ ಹೀಗಾ ಮಾಡೋದು?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen − sixteen =
Remember me
