ಮುಂಬೈ:ಕರೊನಾ ವೈರಸ್​ ಕುರಿತಾಗಿ ದೇಶದ ಜನತೆಗೆ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಮತ್ಯು ರಾಜ್ಯ ಸರ್ಕಾರಗಳು ಹರಸಾಹಸ ಮಾಡುತ್ತಿವೆ. ಹಾಗಿದ್ದರೂ ದೇಶದ ಜನತೆ ಮಾತ್ರ ವೈರಸ್​ನ ಕುರಿತಾಗಿ ನಿರ್ಲಕ್ಷ್ಯ ತೋರುತ್ತಲೇ ಬಂದಿದೆ. ವ್ಯಕ್ತಿಯೊಬ್ಬ ಕರೊನಾದಿಂದ ಗುಣಮುಖವಾದ ಮೇಲೂ ತನ್ನ ಉಸಿರನ್ನು ನಿಲ್ಲಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಫಿಲಿಪೈನ್​ ಮೂಲದ 68 ವರ್ಷದ ವೃದ್ಧನೊಬ್ಬ ಇತ್ತೀಚೆಗೆ ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಆತನಲ್ಲಿ ಕರೊನಾ ವೈರಸ್​ ಇರುವುದು ದೃಢವಾದ ಹಿನ್ನೆಲೆ ಆತನಿಗೆ ಮಾರ್ಚ್​ 13ರಿಂದ ಕಸ್ತುರ್ಬಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗಿತ್ತು. ಅಲ್ಲಿ ಆತನಲ್ಲಿ ಕರೊನಾ ಸೋಂಕು ಹೋಗುವವರೆಗೂ ಚಿಕಿತ್ಸೆ ನೀಡಲಾಗಿದೆ. ಆತ ಕರೊನಾ ವೈರಸ್​ನಿಂದ ಸಂಪೂರ್ಣವಾಗಿ ಗುಣಮುಖನಾದ ನಂತರ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಆತ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ.
ಮೃತನಾದ ವ್ಯಕ್ತಿ ಮಧುಮೇಹ, ಅಸ್ತಮಾದಿಂದ ಬಳಲುತ್ತಿದ್ದ. ಆತನಲ್ಲಿ ಕರೊನಾ ಕಂಡುಬಂದ ಹಿನ್ನೆಲೆ ಉಸಿರಾಟದ ತೊಂದರೆಯುಂಟಾಗಿ ಮೂತ್ರಪಿಂಡಗಳು ಸಹ ವೈಫಲ್ಯಗೊಂಡಿದ್ದವು ಎನ್ನಲಾಗಿದೆ.
ದೇಶದಲ್ಲಿ ಇಂದು 30 ನೂತನ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ. ಭಾನುವಾರದ ರಾತ್ರಿಯವರೆಗ ಒಟ್ಟು ಏಳು ಸಾವು ದಾಖಲಾಗಿವೆ.(ಏಜೆನ್ಸೀಸ್​)
427ಕ್ಕೆ ಏರಿದ ದೇಶದ ಕರೊನಾ ಸೋಂಕಿತರ ಸಂಖ್ಯೆ; ಯಾವ ರಾಜ್ಯದಲ್ಲಿ ಎಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − seven =
Remember me
