ತೆಲಂಗಾಣ:ವೃದ್ಧೆಯೊಬ್ಬರು ಪಾತ್ರೆ ತೊಳೆಯುತ್ತಿರುವಾಗ 20ಕ್ಕೂ ಹೆಚ್ಚು ಕೋತಿಗಳ ಹಿಂಡು ದಾಳಿ ನಡೆಸಿವೆ. ಈ ದಾಳಿಗೆ ಸಿಲುಕಿ ವೃದ್ಧೆ ಸಾವಿಗೀಡಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಚಟರಬೋಯಿನಾ ನರಸವ್ವ(70) ಮೃತ ದುರ್ದೈವಿ. ಈಕೆ ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ ನಿವಾಸಿಯಾಗಿದ್ದಳು. 20ಕ್ಕೂ ಹೆಚ್ಚು ಕೋತಿಗಳ ಹಿಂಡಿನ ದಾಳಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ:ಸ್ಪುಟ್ನಿಕ್‌ ಕೋವಿಡ್‌ ಲಸಿಕೆ ಕಂಡು ಹಿಡಿದಿದ್ದ ರಷ್ಯಾ ವಿಜ್ಞಾನಿಯನ್ನು ಬೆಲ್ಟ್‌ನಿಂದ ಕತ್ತು ಹಿಸುಕಿ ಮುಗಿಸಿದ
ಮಹಿಳೆ ತನ್ನ ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕೋತಿಗಳು ದಾಳಿ ಮಾಡಿವೆ. ಮಂಗಗಳು ಅಲ್ಲಿಂದ ತೆರಳುವವರೆಗೂ ನೆರೆಹೊರೆಯವರು ಬಾಗಿಲು ಹಾಕಿಕೊಂಡು ಮನೆಯೊಳಗೆ ಹೋಗಿದ್ದಾರೆ. ದಾಳಿಯಿಂದಾಗಿ ವೃದ್ಧೆಯ ಎದೆ, ಬೆನ್ನು ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸ್ವಲ್ಪ ಸಮಯದ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರಸವ್ವ ಶನಿವಾರ ಮೃತಪಟ್ಟಿದ್ದಾರೆ.
ಕಿರಿಯ ಮಗಳು ಸುಗುಣ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರಿಂದ ಸಂತ್ರಸ್ತೆ ಮನೆಯಲ್ಲಿ ಒಬ್ಬರೇ ಇದ್ದರು. ನರಸವ್ವ ಸಹಾಯಕ್ಕಾಗಿ ಕೂಗಿಕೊಂಡರೂ, ಭಯಭೀತರಾದ ನೆರೆಹೊರೆಯವರು ಆಕೆಯನ್ನು ರಕ್ಷಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಕೈಲಾಸದಲ್ಲಿ ಉಚಿತ ಇ-ಪೌರತ್ವಕ್ಕಾಗಿ ಜನರನ್ನು ಆಹ್ವಾನಿಸಿದ ನಿತ್ಯಾನಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
