ದೆಹಲಿ:ಪಂಜಾಬ್​ಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ವ್ಯವಸ್ಥೆ ಕಲ್ಪಿಸುವಲ್ಲಿ ಪಂಜಾಬ್​ ಸರ್ಕಾರ ವಿಫಲವಾಗಿದ್ದು, ಫಿರೋಜ್​ಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ರ‍್ಯಾಲಿ ರದ್ದಾಗಿದೆ. ಫಿರೋಜ್​ಪುರ ಫ್ಲೈಓವರ್​ನ ಟ್ರಾಫಿಕ್​ನಲ್ಲಿ ಸಿಲುಕಿದ ಪ್ರಧಾನಿ, ಪಂಜಾಬ್​ನಿಂದ ದೆಹಲಿಗೆ ವಾಪಸ್​ ಆಗಿದ್ದಾರೆ.
42,750 ಕೋಟಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು(ಬುಧವಾರ) ಪಂಜಾಬ್‌ಗೆ ಆಗಮಿಸಿದ್ದರು. ಫಿರೋಜ್‌ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ, ಮಾರ್ಗದಲ್ಲೇ ಟ್ರಾಫಿಕ್​ ಉಂಟಾಗಿತ್ತು. ಅಷ್ಟೇ ಅಲ್ಲ ಪೊಲೀಸ್​ ಭದ್ರತಾ ವೈಫಲ್ಯ ಎದ್ದು ಕಾಣುತ್ತಿತ್ತು. ರ‍್ಯಾಲಿ ತಡೆಯಲು ಉದ್ದೇಶಪೂರ್ವಕವಾಗಿಯೇ ಪಂಜಾಬ್​ ಸರ್ಕಾರ ಪೊಲೀಸರಿಗೆ ಸೂಚನೆ ಕೊಟ್ಟಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಜೆ.ಪಿ.ನಡ್ಡಾ, ಪಂಜಾಬ್​ನಲ್ಲಿ ಸಾವಿರಾರು ಕೋಟಿಗಳ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲು ಪ್ರಧಾನಿ ಅವರ ಭೇಟಿಗೆ ಅಡ್ಡಿಪಡಿಸಿರುವುದು ದುಃಖಕರ. ಆದರೆ ಇಂತಹ ಸಂಚಿಗೆ ಹೆದರುವುದಿಲ್ಲ. ಪಂಜಾಬ್‌ ಅನ್ನು ಅಭಿವೃದ್ಧಿ ಮಾಡುತ್ತೇವೆ. ಇಂದು ಆಯೋಜಿಸಿದ್ದ ಬಿಜೆಪಿ ರ‍್ಯಾಲಿಗೆ ಜನರು ಬರದಂತೆ ತಡೆಯಲು ಪೊಲೀಸರಿಗೆ ಪಂಜಾಬ್​ ಸರ್ಕಾರ ಸೂಚನೆ ನೀಡಿತ್ತು. ಪರಿಣಾಮ ಪೊಲೀಸರು ಹಾಗೂ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಮಾರ್ಗದಲ್ಲಿ ಟ್ರಾಫಿಕ್​ಜಾಮ್​ ಉಂಟಾಗಿತ್ತು. ಇದೆಲ್ಲವೂ ಪೂರ್ವ ನಿಯೋಜಿತ ಎಂದು ಜೆ.ಪಿ. ನಡ್ಡಾ ಆಕ್ರೋಶ ಹೊರ ಹಾಕಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಬಳಸಿದ ತಂತ್ರವನ್ನು ಗಮನಿಸಿದರೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರಿಗೂ ನೋವು ತರಿಸುತ್ತದೆ. ಸಮಸ್ಯೆಯನ್ನು ತಿಳಿಗೊಳಿಸುವಂತೆ ಪಂಜಾಬ್​ ಸಿಎಂ ಪೊಲೀಸರಿಗೆ ಕರೆ ಮಾಡಬಹುದಿತ್ತು. ಆದರೆ, ರ‍್ಯಾಲಿ ತಡೆಯುವ ಉದ್ದೇಶ ಅಡಗಿದ್ದರಿಂದ ಪ್ರಯೋಜನವಾಗಲಿಲ್ಲ. ಭದ್ರತಾ ಲೋಪ ಹಿನ್ನೆಲೆ ರ್ಯಾಲಿ ರದ್ದಾಗಿದೆ ಎಂದು ಜೆ.ಪಿ.ನಡ್ಡಾ ಟ್ವೀಟ್​ ಮಾಡಿದ್ದಾರೆ.
It is sad that the PM’s visit to launch development projects worth thousands of crores for Punjab was disrupted. But we will not let such cheap mentality hinder progress of Punjab and will continue the effort for the development of Punjab.
— Jagat Prakash Nadda (@JPNadda)January 5, 2022

ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ, ಫಿರೋಜ್‌ಪುರದಲ್ಲಿ ಪಿಜಿಐ ಸ್ಯಾಟಲೈಟ್ ಸೆಂಟರ್, ಕಪುರ್ತಲಾ ಮತ್ತು ಹೋಶಿಯಾರ್‌ಪುರದಲ್ಲಿ ಎರಡು ಹೊಸ ವೈದ್ಯಕೀಯ ಕಾಲೇಜು ಸೇರದಂತೆ ವಿವಿಧ ಯೋಜನೆಗಳಿಗೆ ಪಿಎಂ ಇಂದು ಚಾಲನೆ ನೀಡಬೇಕಿತ್ತು.
ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್​ ಪಡೆಯುವ ಮುನ್ನ ಎಚ್ಚರ! ನಕಲಿ ಟಿಕೆಟ್​ ಮಾರಾಟ ಜಾಲದಲ್ಲಿ ಸಿಕ್ಕಿಬಿದ್ದ ಟಿಟಿಡಿ ಸಿಬ್ಬಂದಿ

ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
