ಹೈದರಾಬಾದ್‌:ಸಿನಿಮಾ ನಟಿ. ಮಾಡೆಲ್​, ಡಾನ್ಸರ್​ ಹಂಸ ನಂದಿನಿ ಅವರು ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ತಲೆಯಲ್ಲಿ ಕೂದಲು ಇಲ್ಲದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹಂಸ ನಂದಿನಿ, ‘ನಾನು ಸ್ತನಕ್ಯಾನ್ಸರ್ ರೋಗಿ. 3ನೇ ಹಂತದಲ್ಲಿದೆ. 19 ವರ್ಷದ ಹಿಂದೆ ನನ್ನ ಅಮ್ಮನೂ ಕ್ಯಾನ್ಸರ್​ಗೆ ಬಲಿಯಾಗಿದ್ದರು. ಆ ನೋವು ಕಾಡುತ್ತಿರುವಾಗಲೇ ನನಗೂ ಕ್ಯಾನ್ಸರ್​ ಬಂದಿದೆ’ ಎಂದು ಬರೆದುಕೊಂಡಿದ್ದಾರೆ. ಈ ಕಹಿ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹಂಸ ನಂದಿನಿ, ಟಾಲಿವುಡ್​ನ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ತೆರೆಗೆ ಬಂದ ಕನ್ನಡದ ‘ಮೋಹಿನಿ 9886788888’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೂ ಕಾಲಿಟ್ಟಿದ್ದರು. ಪ್ರಭಾಸ್​ ನಟನೆಯ ‘ಮಿರ್ಚಿ’, ಪವನ್​ ಕಲ್ಯಾಣ್​ ಅಭಿನಯದ ‘ಅತ್ತಾರಿಂಟಿಕಿ ದಾರೇದಿ’ ಚಿತ್ರಗಳಲ್ಲಿ ವಿಶೇಷ ಪಾತ್ರದ ಮೂಲಕ ತೆಲುಗು ಜನರಿಗೆ ಹತ್ತಿರವಾಗಿದ್ದರು. ಸುದೀಪ್​ ಅಭಿನಯದ ‘ಈಗ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. 2018ರಲ್ಲಿ ತೆರೆಕಂಡ ‘ಪಂತಂ’ ಸಿನಿಮಾವೇ ಹಂಸ ನಂದಿನಿ ಅಭಿನಯದ ಕೊನೇ ಸಿನಿಮಾ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದ ಹಂಸ ನಂದಿನಿ, ಇಂದು(ಡಿ.20) ಬೆಳಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯಾನ್ಸರ್​ ಬಗ್ಗೆ ವಿವರಿಸಿದ್ದಾರೆ.
‘ಕಳೆದ 4 ತಿಂಗಳ ಹಿಂದೆ ಎದೆಯಲ್ಲಿ ಗಂಟು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಪರೀಕ್ಷಿಸಿದಾಗ ಸ್ತನ ಕ್ಯಾನ್ಸರ್​ 3ನೇ ಹಂತದಲ್ಲಿ ಇರುವುದು ಗೊತ್ತಾಯಿತು. ನನ್ನ ತಾಯಿಯೂ 40 ವರ್ಷ ವಯಸ್ಸಿಗೇ ಅಂದರೆ 19 ವರ್ಷಗಳ ಹಿಂದೆ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ಅಮ್ಮನನ್ನು ಕಳೆದುಕೊಂಡ ನೋವು ಕಾಡುತ್ತಲೇ ಇದೆ. ಇದೀಗ ನನಗೂ ಕ್ಯಾನ್ಸರ್​ ಬಂದಿದೆ. ಈಗಾಗಲೇ 9 ಬಾರಿ ಕಿಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕಿಮೋಥೆರಪಿ ಮಾಡಿಸಿಕೊಳ್ಳಬೇಕು’ ಎಂದು ಹಂಸ ನಂದಿನಿ ವಿವರಿಸಿದ್ದಾರೆ.


A post shared by Hamsa Nandini (@ihamsanandini)

‘ಮಹಾಮರಿ ಕ್ಯಾನ್ಸರ್​ಗೆ ನನ್ನ ಬದುಕು ಬಲಿಯಾಗಲು ನಾನು ಬಯಸುವುದಿಲ್ಲ. ನಗುತ್ತಲೇ ಧೈರ್ಯದಿಂದ ಕ್ಯಾನ್ಸರ್​ ವಿರುದ್ಧ ಹೋರಾಡುವೆ. ಗುಣಮುಖವಾಗಿ ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತೇನೆ. ನನ್ನ ಕಥೆ ಎಲ್ಲರಿಗೂ ಸ್ಫೂರ್ತಿಯಾಗಲಿ’ ಎಂದು ಬರೆದುಕೊಂಡಿದ್ದಾರೆ. ನೋವಿನಲ್ಲೂ ಹಂಸ ನಂದಿನಿಯ ಸ್ಫೂರ್ತಿದಾಯಕ ಮಾತು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಶೀಘ್ರವೇ ಗುಣಮುಖವಾಗಿ ಎಂದು ಹಾರೈಸುತ್ತಿದ್ದಾರೆ.
ಟ್ರೆಂಡ್​ ಆಯ್ತು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಅಪ್ಪು ಫೋಟೋ: ಪುನೀತ್​ ಅಗಲಿಕೆ ನೋವಲ್ಲೂ ಹೆಚ್ಚುತ್ತಿದೆ ಅಭಿಮಾನ

ಮಾಜಿ ಪ್ರಿಯಕರನ ಯಡವಟ್ಟಿಗೆ ಯುವತಿ ಮದ್ವೆಯೇ ಮುರಿದು ಬಿತ್ತು! ಶುಭಗಳಿಗೆಗೆ ಕೊಳ್ಳಿ ಇಟ್ಟ ಆ ಫೋಟೋ

ಪ್ರಿಯಕರನ ಜತೆ ಲಾಡ್ಜ್​ಗೆ ಹೋದಾಕೆ ವಾಪಸ್​ ಬಂದದ್ದು ಶವವಾಗಿ! ಆ ಕೋಣೆಯಲ್ಲಿತ್ತು ಪುರುಷರಿಬ್ಬರ ಜತೆಗಿನ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 19 =
Remember me
