ಕರ್ನೂಲ್:ಸಾವು ಯಾವಾಗ? ಹೇಗೆ ಸಂಭವಿಸುತ್ತೆ? ಎಂದು ಊಹಿಸಿಕೊಳ್ಳೋಕು ಭಯವಾಗುತ್ತೆ. ಇಲ್ಲೊಬ್ಬ ಯುವಕ ಗಣೇಶ ಉತ್ಸವದಲ್ಲಿ ದೇವರ ಮುಂದೆ ಡಾನ್ಸ್​ ಮಾಡುತ್ತಲೇ ಪ್ರಾಣಬಿಟ್ಟಿದ್ದಾರೆ. ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದಿದ್ದ ಜನರು ಯುವಕನ ಡಾನ್ಸ್​ ಮಾಡುತ್ತಿದ್ದ ದೃಶ್ಯವನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಲೇ ಇದ್ದರು. ನೋಡನೋಡುತ್ತಲೇ ಆತ ಮೃತಪಟ್ಟ ದೃಶ್ಯವೂ ಸೆರೆಯಾಗಿದ್ದು, ವೈರಲ್​ ಆಗಿದೆ.
ಇಂತಹ ದುರ್ಘಟನೆ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಗುತ್ತಿ ಪಟ್ಟಣದ ಗೌತಮಿಪುರ ಕಾಲನಿಯಲ್ಲಿ ಸಂಭವಿಸಿದೆ. ಚರಣ್ ಅಲಿಯಾಸ್​ ಕುಲ್ಲಯ್ಯಸ್ವಾಮಿ ಮೃತ ದುರ್ದೈವಿ. ಅಂದಹಾಗೆ ಈತನ ಸಾವಿಗೆ ಕಾರಣ ಏನೆಂಬುದೂ ಗೊತ್ತಾಗಿದೆ.
ಚರಣ್​ ಮತ್ತು ಆತನ ಸ್ನೇಹಿತರು ಡಾನ್ಸ್​ ಮಾಡುತ್ತಿದ್ದರು. ಏಕಾಏಕಿ ನೆಲಕ್ಕೆ ಕುಸಿದ ಚರಣ್​ ಮೇಲೆ ಏಳಲೇ ಇಲ್ಲ. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚರಣ್​ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಗಣೇಶೋತ್ಸವ ಸಂಭ್ರಮದಲ್ಲಿದ್ದ ಗ್ರಾಮಸ್ಥರಿಗೆ ಚರಣ್​ ಸಾವಿನ ಸುದ್ದಿ ಆಘಾತ ಉಂಟುಮಾಡಿದೆ. ಗ್ರಾಮದಲ್ಲೀಗ ಸ್ಮಶಾನ ಮೌನ ಆವರಿಸಿದ್ದು, ಗುತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೂರಲ್ಲಿ ಮಗನ ಜತೆ ಚಿಕ್ಕಮ್ಮನ ಕಾಮದಾಟ! ಗುಟ್ಟು ರಟ್ಟಾಗುತ್ತಿದ್ದಂತೆ ನಡೆದೇ ಹೋಯ್ತು ದುರಂತ

ಚಿಂತಾಮಣಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ 6 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

ಆ ಚುಚ್ಚುಮಾತನ್ನ ಸಹಿಸಲಾಗ್ತಿಲ್ಲ, ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ… ಮಗನ ಸಾವಿನ ಬಳಿಕ ಹೆತ್ತವರು ಎಸ್ಕೇಪ್​

ಮೈಸೂರಲ್ಲಿ 93 ದೇವಾಲಯಗಳಿಗೆ ನೆಲಸಮಕ್ಕೆ ಸಜ್ಜು! ಮಹಾನಗರ ಪಾಲಿಕೆಯ ಲಿಸ್ಟ್​ಗೆ ಜನ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
