ಮುಂಬೈ:ಬಾಲಿವುಡ್​ನ ನಟ ಆಮಿರ್​ ಖಾನ್​ ಪುತ್ರಿ ಇರಾ ಖಾನ್‌ ಭಾನುವಾರ(ಮೇ8) 25ನೇ ವಸಂತಕ್ಕೆ ಕಾಲಿಟ್ಟಿದ್ದು, ಕುಟುಂಬಸ್ಥರ ಜೊತೆ ಬರ್ತ್​ ಡೇ ಆಚರಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಕೇಕ್​ ಮೇಲೆ ಹಚ್ಚಿದ್ದ ಮೇಣಬತ್ತಿಯನ್ನು ಬಿಕಿನಿ ಧರಿಸಿಕೊಂಡೇ ಹಾರಿಸಿ ಕೇಕ್​ ಕತ್ತರಿಸುತ್ತಿರುವ ಫೋಟೋ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದೆ. ಸಖತ್​ ಹಾಟ್​ ಎಂದು ಹಲವರು ಕಮೆಂಟ್​ ಕೊಟ್ಟರೆ, ಮತ್ತೆ ಕೆಲವರು ಈ ಸಂದರ್ಭದಲ್ಲಾದರೂ ಬಟ್ಟೆಯನ್ನು ಸರಿಯಾಗಿ ಹಾಕಿಕೊಳ್ಳಬೇಕಿತ್ತು.., ಶೇಮ್​ ಆಮಿರ್​… ಎಂದು ಮೂದಲಿಸಿದ್ದಾರೆ.
ಇರಾ ಖಾನ್​ ಇನ್ನೂ ಬಾಲಿವುಡ್​ಗೆ ಎಂಟ್ರಿ ಆಗಿಲ್ಲವಾದರೂ ಸ್ಟಾರ್​ ನಟನ ಪುತ್ರಿ ಎಂಬ ಕಾರಣಕ್ಕೆ ಅವರಾಗಲೇ ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ಸೆಲೆಬ್ರಿಟಿಯಂತೆ ಕಾಣುತ್ತಿದ್ದಾರೆ. ಆಮಿರ್​ ಖಾನ್​ನ ಮಾಜಿ ಪತ್ನಿ ರೀನಾ ದತ್ತಾ, ಮಗ ಆಜಾದ್‌, ಆಮಿರ್​ ಖಾನ್​, ಬರ್ತ್​ ಡೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆಗ ತಾನೇ ಸ್ವಿಮಿಂಗ್​ ಪೂಲ್​ನಿಂದ ಎದ್ದು ಬಂದ ಇರಾ, ಬಿಕಿನಿಯಲ್ಲೇ ಕೇಕ್​ ಕತ್ತರಿಸುತ್ತಿದ್ದರೆ, ಅತ್ತ ಕುಟುಂಬಸ್ಥರು ಇರಾಳ ಸುತ್ತುವರಿದು ಶುಭ ಕೋರುತ್ತಾ ಸಂಭ್ರಮಿಸಿದ್ದಾರೆ. ಬಹುವರ್ಣದ ಬಿಕಿನಿ, ಕಿವಿಯೋಲೆ ಧರಿಸಿರುವ ಇರಾ ಎಂದಿನಂತೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ರೀನಾ ಕಪ್ಪು ಮತ್ತು ಬಿಳಿ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಆಮಿರ್​ ಮತ್ತು ಪುತ್ರ ಕೂಡ ಆಗಷ್ಟೇ ಸ್ವಿಮ್ಮಿಂಗ್​ ಪೂಲ್‌ನಿಂದ ಹೊರಬಂದಂತೆ ಚಿತ್ರದಲ್ಲಿ ಕಾಣುತ್ತಾರೆ.
ಫಿಟ್ನೆಸ್​ ಕೋಚ್​ ನೂಪುರ್​ ಶಿಖರೆ ಜೊತೆಗಿನ ಇರಾಳ ಲವ್​ ಕಹಾನಿ ಗುಟ್ಟಾಗಿಯೇನೂ ಉಳಿದಿಲ್ಲ. ಅವರಿಬ್ಬರು ಈ ಹಿಂದೆ ಸ್ವಿಮ್ಮಿಂಗ್​ ಪೂಲ್​ನಲ್ಲಿ ರೊಮ್ಯಾನ್ಸ್​ ಮೂಡಲ್ಲಿ ತೆಗೆಸಿಕೊಂಡಿದ್ದ ಫೊಟೋಗಳು ವೈರಲ್​ ಆಗಿತ್ತು. ಪ್ರೇಯಸಿ ಇರಾಳ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಗೆಳೆಯ ನೂಪುರ್ ಶಿಖರೆ, ‘ಹ್ಯಾಪಿ ಬರ್ತ್‌ಡೇ ಮೈ ಲವ್, ಐ ಲವ್ ಯು ಸೋ ಮಚ್ ಬಬ್ಸ್ @ಖಾನ್.ಇರಾ #ಹ್ಯಾಪಿ #ಬರ್ತ್‌ಡೇ #ಲವ್’ ಎಂದು ಬರೆದುಕೊಂಡಿದ್ದಾರೆ.
ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
