ಹೈದರಾಬಾದ್​:ಆಂಧ್ರಪ್ರದೇಶದ ಸಚಿವ ಮೇಕಪತಿ ಗೌತಮ್​ ರೆಡ್ಡಿ ಅವರು ಸೋಮವಾರ ಬೆಳಗ್ಗೆ ವಿಧಿವಶರಾದರು.
ಇಂದು ಮುಂಜಾನೆ ಗೌತಮ್​ ರೆಡ್ಡಿ ಅವರಿಗೆ ಎದೆನೋವು ಕಾಣಿಸಿಕೊಂಡು ಮನೆಯಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನ ಜೂಬ್ಲಿ ಹಿಲ್ಸ್​ನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಷ್ಟರಲ್ಲಿ ಹೃದಯಸ್ತಂಭನವಾಗಿತ್ತು. ಸಚಿವರು ಮೃತಪಟ್ಟಿದ್ದಾರೆ ಎಂದು ವೈದ್ಯರು 9.16ಕ್ಕೆ ಘೋಷಿಸಿದರು. ಗೌತಮ್​ ರೆಡ್ಡಿ ಅವರಿಗೆ 50 ವರ್ಷ ವಯಸ್ಸಾಗಿತ್ತು.
ಮಾಜಿ ಸಂಸದ ಮೇಕಪತಿ ರಾಜಮೋಹನ್​ ರೆಡ್ಡಿ ಅವರ ಪುತ್ರ ಗೌತಮ್​ ರೆಡ್ಡಿ ನೆಲ್ಲೂರು ಜಿಲ್ಲೆ ಆತ್ಮಾಕೂರು ಕ್ಷೇತ್ರವನ್ನ ಪ್ರತಿನಿಧಿಸುತ್ತಿದ್ದರು. 2014 ಮತ್ತು 2019ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಜಗನ್​ ಮೋಹನ್​ ರೆಡ್ಡಿ ಸಂಪುಟದಲ್ಲಿ ಕೈಗಾರಿಕೆ ಮತ್ತು ಐಟಿ ಇಲಾಖೆಯ ಸಚಿವರೂ ಆಗಿದ್ದ ಗೌತಮ್​ ರೆಡ್ಡಿ, ಒಂದು ವಾರದ ಹಿಂದಷ್ಟೇ ದುಬೈ ಎಕ್ಸ್​ಪೋ-2022 ನಲ್ಲಿ ಪಾಲ್ಗೊಂಡಿದ್ದರು. ಭಾನುವಾರವಷ್ಟೇ ದುಬೈನಿಂದ ಹೈದರಾಬಾದ್​ಗೆ ವಾಪಸ್​ ಆಗಿದ್ದರು.
ಗೌತಮ್​ ರೆಡ್ಡಿ ಸಾವಿನ ಸುದ್ದಿ ತೀವ್ರ ಆಘಾತ ನೀಡಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಜಗನ್ ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ.
ಯುವಕನ ಸೊಂಟದ ಮೂಳೆ ಮುರಿದ ಮಹಿಳಾ ಪಿಎಸ್​ಐ! ಗುಬ್ಬಿ ತಾಲೂಕಲ್ಲಿ ಅಮಾನವೀಯ ಘಟನೆ

ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
