ಚೆನ್ನೈ:ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನೂರಿನಲ್ಲಿ ಪತನಗೊಂಡಿದ್ದು, ನಾಲ್ವರ ಮೃತದೇಹ ಪತ್ತೆಯಾಗಿದೆ. ಬಿಪಿನ್​ ರಾವತ್​ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತ್ನಿ ಮಧುಲಿಕಾ ಸೇರಿ ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ಸೇನೆಯ ಎರಡು ಹೆಲಿಕಾಪ್ಟರ್‌ಗಳು ಬುಧವಾರ ಕೊಯಮತ್ತೂರಿನಿಂದ ವೆಲ್ಲಿಂಗ್ಟನ್‌ ಸೇನಾ ಕೇಂದ್ರಕ್ಕೆ ಹೋಗುತ್ತಿದ್ದವು. ಈ ಪೈಕಿ ಒಂದು ಹೆಲಿಕಾಪ್ಟರ್‌ ಪತನಗೊಂಡಿದ್ದು, ಇದರಲ್ಲಿ ಬಿಪಿನ್​ ರಾವತ್​ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಇದೇ ಹೆಲಿಕಾಪ್ಟರ್​ನಲ್ಲಿ ಸೇನಾ ಕಮಾಂಡರ್ ನರವಾಣೆ ಕೂಡ ಇದ್ದರು ಎನ್ನಲಾಗಿದೆ.
ತಕ್ಷಣದ ಸಾವುನೋವುಗಳ ಬಗ್ಗೆ ಏನನ್ನೂ ಖಚಿತಪಡಿಸಲು ಸಾಧ್ಯವಾಗಿಲ್ಲ. ಹೆಲಿಕಾಪ್ಟರ್ ಪತನವಾದ ಸ್ಥಳದಲ್ಲಿ ಸೇನಾಪಡೆಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
An IAF Mi-17V5 helicopter, with CDS Gen Bipin Rawat on board, met with an accident today near Coonoor, Tamil Nadu.An Inquiry has been ordered to ascertain the cause of the accident.
— Indian Air Force (@IAF_MCC)December 8, 2021

ಘಟನೆಯ ಬಗ್ಗೆ ಉನ್ನತ ತನಿಖೆಗೆ ಆದೇಶಿಸಿರುವುದಾಗಿ ವಾಯುಸೇನೆ ಟ್ವೀಟ್‌ ಮಾಡಿದೆ. ವಿಮಾನ ಪತನ ಸುದ್ದಿ ತಿಳಿಯುತ್ತಿದ್ದಂತೆ ರಾಜ್​ನಾಥ್​ ಸಿಂಗ್​ ಅವರು ಊಟಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಮಂಗಳೂರಲ್ಲಿ ಮತಾಂತರ ಕಿರುಕುಳಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ! ಡೆತ್​ನೋಟ್​ನಲ್ಲಿ ಕಣ್ಣೀರ ಕಥೆ

ಪತ್ನಿ ಬಾಣಂತನಕ್ಕೆ ಹೋದಾಗ ಆ ಒಂದು ಫೋಟೋ ತೋರಿಸಿ ನಾದಿನಿ ಮೇಲೆ ನಿರಂತರ ರೇಪ್: ವಿಷ್ಯ ಬಯಲಾಗ್ತಿದ್ದಂತೆ ಹೈಡ್ರಾಮ

Sign in to your account
Please enter an answer in digits:18 + 15 =
Remember me
