ಮೀರತ್​:ಮಕ್ಕಳೆಂದರೆ ಇಷ್ಟ ಇಲ್ಲದವರು ಯಾರಿದ್ದಾರೆ ಹೇಳಿ? ಪ್ರತಿಯೊಂದು ಕುಟುಂಬದಲ್ಲೂ ಜನಿಸುವ ಮಗು ಹೊಸ ಚೈತನ್ಯವನ್ನು ಹುಟ್ಟಿಹಾಕುತ್ತದೆ. ಆದರೆ ನಮ್ಮ ದೇಶದಲ್ಲಿ ಹೆಣ್ಣು ಗಂಡು ಎನ್ನುವ ಭೇದ ಭಾವದಿಂದಾಗಿ ಅನೇಕ ಹೆಣ್ಣು ಶಿಶುಗಳ ಪರಿಸ್ಥಿತಿ ಹೀನಾಯವಾಗಿದೆ. ಹುಟ್ಟಿದ ಮಕ್ಕಳನ್ನ ಬೀದಿಗೆ ಎಸೆಯುವಷ್ಟು ಕಟುಕರಾಗಿದ್ದಾರೆ ನಮ್ಮಲ್ಲಿಯ ಕೆಲವರು.
ಇದನ್ನೂ ಓದಿ:ಶಿಕ್ಷಣದಲ್ಲಿ ಸುಧಾರಣೆಗೆ ಸರ್ಕಾರಿ ಶಾಲೆಗಳ‌ ದತ್ತು ಸ್ವೀಕಾರ ನೆರವು, ಸಿಎಂ ಬಿಎಸ್ ವೈ ಆಶಾಭಾವ
ಉತ್ತರ ಪ್ರದೇಶದ ಮೀರತ್​ ನಗರದ ರಸ್ತೆಯೊಂದರ ಬಳಿ ಗೋಣಿಚೀಲ ಬಿದ್ದಿತ್ತು. ಏನೋ ಮೂಟೆ ಕಟ್ಟಿ ಎಸೆದಂತಿದ್ದ ಆ ಚೀಲವನ್ನು ಯಾರೂ ಅಷ್ಟಾಗಿ ಗಮನಿಸಲು ಹೋಗಿಲ್ಲ. ರಾತ್ರೋ ರಾತ್ರಿ ರಸ್ತೆಗೆ ಬಂದು ಬಿದ್ದಿದ್ದ ಆ ಚೀಲದಲ್ಲಿ ಮಗು ನರಳುವ ಸದ್ದು ಕೇಳಿದೆ. ಅದನ್ನು ಗ್ರಹಿಸಿದ ದಾರಿಹೋಕರು, ಚೀಲವನ್ನು ತೆರೆದು ನೋಡುವ ಧೈರ್ಯ ಮಾಡಿದ್ದಾರೆ.
ಒಂದು ಗೋಣಿಚೀಲವನ್ನು ತೆರೆದಾಗ ಅದರಲ್ಲಿ ಮತ್ತೊಂದು ಚೀಲವಿತ್ತು. ಅದನ್ನೂ ತೆರೆದಾಗ ಮತ್ತೂ ಒಂದು ಚೀಲ ಕಾಣಿಸಿದೆ. ಮೂರನೇ ಚೀಲ ತೆರೆದಾಗ ಅದರಲ್ಲಿ ನವಜಾತ ಹೆಣ್ಣು ಶಿಶುವೊಂದು ಕಾಣಿಸಿದೆ. ಹುಟ್ಟಿ ಒಂದು ದಿನವೂ ಆಗಿರದ ಮಗುವನ್ನು ಹೊಕ್ಕಳು ಬಳ್ಳಿಯೊಂದಿಗೇ ಪಾಪಿ ತಂದೆ ತಾಯಿ ಗೋಣಿ ಚೀಲದಲ್ಲಿ ಕಟ್ಟಿ ರಸ್ತೆ ಬದಿ ಎಸೆದು ಹೋಗಿದ್ದಾರೆ.
ಇದನ್ನೂ ಓದಿ:ಪ್ರೀತಿ ಹೇಳಿಕೊಳ್ಳುವ ಧೈರ್ಯವಿಲ್ಲದೆ ಮದ್ವೆಗೆ ಒಪ್ಪಿಗೆ: ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಯುವತಿಗೆ ಕಾದಿತ್ತು ಸರ್ಪ್ರೈಸ್​!
ಮಗುವನ್ನು ನೋಡಿ ಗಾಬರಿಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪುವ ವೇಳೆ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ದೇಹದಿಂದ ವಾಸನೆ ಬರುತ್ತಿತ್ತು ಎನ್ನಲಾಗಿದೆ. ಮುಂಜಾವಿನ ಚಳಿಯಲ್ಲಿ ಮಗುವನ್ನು ರಸ್ತೆ ಬದಿ ಹಾಕಿದ್ದರಿಂದಾಗಿ ಮಗುವಿನ ದೇಹದ ಉಷ್ಣಾಂಶ ಹದಗೆಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಮಗುವನ್ನು ನವಜಾತ ಶಿಶು ರಕ್ಷಣಾ ಕೇಂದ್ರದಲ್ಲಿಟ್ಟು ಪೋಷಿಸಲಾಗುತ್ತಿದೆ. (ಏಜೆನ್ಸೀಸ್​)
ಅಪ್ರಾಪ್ತೆ ಮೇಲೆ ಅತ್ಯಾಚಾರ ಸಾಧ್ಯವಾಗದ್ದಿದ್ದಕ್ಕೆ ಅವನೇನು ಮಾಡಿದ ಗೊತ್ತಾ? ಬೆಚ್ಚಿ ಬೀಳಿಸುತ್ತೆ ಈ ಕ್ರೈಂ ಸ್ಟೋರಿ

ಅಮ್ಮನಿಗೆ ಅಪ್ಪ ಹೊಡೆಯಲು ಬಂದ, ಅವನಿಗೇ ರಕ್ತದೋಕುಳಿ ಮಾಡಿಸಿಬಿಟ್ಟೆ; ಪೊಲೀಸರಿಗೆ ಶರಣಾದ ಮಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
