ಬೆಲ್‌ಗ್ರೇಡ್ (ಸೆರ್ಬಿಯಾ):ಭಾನುವಾರ ಬೆಲ್‌ಗ್ರೇಡ್​ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಜರಂಗ್ ಪೂನಿಯಾ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದು, ಆ ಮೂಲಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 4 ಪದಕ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಳೆದ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಬಜರಂಗ್, ಭಾನುವಾರ ನಡೆದ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ ಸ್ಪರ್ಧೆಯ 65 ಕೆ.ಜಿ. ವಿಭಾಗದಲ್ಲಿ ಪೋರ್ಟೊ ರಿಕೊದ ಸೆಬಾಸ್ಟಿಯನ್ ಸಿ ರಿವೇರಾ ವಿರುದ್ಧ 11-9 ಅಂಕಗಳ ಅಂತರದಿಂದ ಜಯ ಸಾಧಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ಜಾನ್ ಮೈಕೆಲ್ ಡಯಾಕೊಮಿಹಾಲಿಸ್ ವಿರುದ್ಧ ಸೋತಿದ್ದ ಬಜರಂಗ್, ರೆಪೇಚ್ ಸುತ್ತಿನಲ್ಲಿ ಸೆಣಸಾಡಿ ಕಂಚಿನ ಪದಕಕ್ಕೆ ಮುತ್ತಿಟ್ಟರು.
ಕ್ವಾರ್ಟರ್​​ ಫೈನಲ್​ ಪಂದ್ಯದಲ್ಲಿ ಬಜರಂಗ್​ರ ತಲೆಗೆ ಪೆಟ್ಟಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಪಂದ್ಯದಿಂದ ಹಿಂದೆ ಸರಿಯುವ ಅವಕಾಶವನ್ನು ಬಜರಂಗ್​ಗೆ ನೀಡಲಾಗಿತ್ತಾದರೂ, ಬಜರಂಗ್​ ಅವರು ತಲೆಗೆ ಬ್ಯಾಂಡೇಜ್​ ಕಟ್ಟಿಕೊಂಡೇ ಎದುರಾಳಿ ಜತೆ ಸೆಣಸಾಡಿ ಗೆಲುವಿನ ನಗೆ ಬೀರಿದರು.
ಇದು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬಜರಂಗ್ ಅವರು ಪಡೆದ ಮೂರನೇ ಕಂಚಿನ ಪದಕ ಇದಾಗಿದೆ. ಒಟ್ಟು 4 ಪದಕಗಳು ಇವರಿಗೆ ಒಲಿದಿದೆ. 2013ರಲ್ಲಿ ಕಂಚು, 2018ರಲ್ಲಿ ಬೆಳ್ಳಿ, 2019ರಲ್ಲಿ ಕಂಚು, 2022ರಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಇನ್ನು ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ ಸ್ಪರ್ಧೆಯ ವಿವಿಧ ವಿಭಾಗದಲ್ಲಿ ಭಾರತದ 30 ಕುಸ್ತಿಪಟುಗಳು ಕಣಕ್ಕಿಳಿದಿದ್ದರಾದರೂ ಇಲ್ಲಿಯವರೆಗೆ 2 ಪದಕ ಮಾತ್ರ ಗೆಲ್ಲಲಾಗಿದೆ. 53 ಕೆಜಿ ವಿಭಾಗದಲ್ಲಿ ವಿನೇಶ್ ಪೋಗಟ್​​ ಕಂಚಿನ ಪದಕ ಗೆದ್ದಿದ್ದಾರೆ.
4️⃣th Worlds medal for@BajrangPunia🤼‍♂️
Our Tokyo Olympics BRONZE medalist has bagged a BRONZE🥉 again. This time at the Wrestling World Championships (FS 65kg) in Belgrade🤩
His World Championships CV now:
SILVER – 2018BRONZE – 2013, 2019, 2022#WrestleBelgradepic.twitter.com/vF1kOEEflL
— SAI Media (@Media_SAI)September 18, 2022

ರಾಜ್ಯದಲ್ಲಿರೋದು ಚಂಬಲ್​ ಕಣಿವೆ ಡಕಾಯಿತರ ಆಡಳಿತ, ಖಜಾನೆ ಲೂಟಿ ಆಗ್ತಿದೆ: ಎಚ್​ಡಿಕೆ ಆಕ್ರೋಶ

ರಾಯಚೂರಲ್ಲಿ ದುರ್ಘಟನೆ: ಸೆಲ್ಫಿ ಹುಚ್ಚಾಟಕ್ಕೆ ಪಿಯು ವಿದ್ಯಾರ್ಥಿಗಳಿಬ್ಬರ ಸಾವು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − one =
Remember me
