ನವದೆಹಲಿ:100 ಕೋಟಿ ರೂಪಾಯಿ ಆರ್ಡರ್‌ ಅನುಸಾರವಾಗಿ ಭಾರತೀಯ ಸೇನೆಗೆ ಡ್ರೋನ್ ವ್ಯವಸ್ಥೆ ಪೂರೈಕೆಯನ್ನು ಪ್ರಾರಂಭಿಸಿರುವುದಾಗಿ ಇಂಜಿನಿಯರಿಂಗ್ ಪರಿಹಾರಗಳನ್ನು ಒದಗಿಸುವ ಆಕ್ಸಿಸ್ಕೇಡ್ಸ್ ಟೆಕ್ನಾಲಜೀಸ್ ಸಂಸ್ಥೆಯು ಸೋಮವಾರ ಹೇಳಿದೆ.
ಬೆಂಗಳೂರು ಮೂಲದ ಆಕ್ಸಿಸ್ಕೇಡ್ಸ್ ಏರೋಸ್ಪೇಸ್, ​​ಡಿಫೆನ್ಸ್, ಹೆವಿ ಇಂಜಿನಿಯರಿಂಗ್, ಆಟೋಮೋಟಿವ್ ಮತ್ತು ಎನರ್ಜಿ ಮುಂತಾದ ಕ್ಷೇತ್ರಗಳಿಗೆ ಸೇವೆ ಒದಗಿಸುವ ಪ್ರಮುಖ ಎಂಡ್ ಟು ಎಂಡ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಪರಿಹಾರ ಪೂರೈಕೆದಾರ ಸಂಸ್ಥೆಯಾಗಿದೆ.
ಮ್ಯಾನ್ ಪೋರ್ಟಬಲ್ ಕೌಂಟರ್ ಡ್ರೋನ್ ಸಿಸ್ಟಮ್ (ಎಂಪಿಸಿಡಿಎಸ್) ಅನ್ನು ಆಕ್ಸಿಸ್ಕೇಡ್ಸ್ ಅಭಿವೃದ್ಧಿಪಡಿಸಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
“ಆಕ್ಸಿಸ್ಕೇಡ್ಸ್ ಟೆಕ್ನಾಲಜೀಸ್ ಭಾರತೀಯ ಸೇನೆಯಿಂದ 100 ಕೋಟಿ ರೂಪಾಯಿಗಳ ಆದೇಶದ ಅಡಿಯಲ್ಲಿ ಸುಧಾರಿತ ಕೌಂಟರ್-ಡ್ರೋನ್ ಸಿಸ್ಟಮ್‌ಗಳ ವಿತರಣೆ ಪ್ರಾರಂಭಿಸಿದೆ” ಎಂದು ಕಂಪನಿ ಹೇಳಿದೆ. 2024ರ ಅಂತ್ಯದ ವೇಳೆಗೆ ಎಲ್ಲಾ ಡ್ರೋನ್ ಘಟಕಗಳನ್ನು ಸೇನೆಗೆ ತಲುಪಿಸುವ ಗುರಿಯನ್ನು ಕಂಪನಿ ಹೊಂದಿದೆ ಎಂದೂ ಅದು ತಿಳಿಸಿದೆ.
ಇದು ಮ್ಯಾನ್ ಪೋರ್ಟಬಲ್ ವಿಭಾಗದಲ್ಲಿ ಭಾರತೀಯ ರಕ್ಷಣಾ ಪಡೆಗಳಿಗೆ ಸೇರ್ಪಡೆಗೊಳ್ಳುತ್ತಿರುವ ಮೊದಲ ಕೌಂಟರ್ ಡ್ರೋನ್ ಸಿಸ್ಟಮ್ ಆಗಿದೆ. ಈ ವ್ಯವಸ್ಥೆಯನ್ನು ಭಾರತೀಯ ಸೇನೆಯ ವಿವಿಧ ಕಮಾಂಡ್‌ಗಳಲ್ಲಿ ಅನೇಕ ಸ್ಥಳಗಳಲ್ಲಿ ನಿಯೋಜಿಸಲಾಗುತ್ತಿದೆ. ನಮ್ಮ ಸಶಸ್ತ್ರ ಪಡೆಗಳ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸಲು ನಾವು ನವೀನತೆ ಮತ್ತು ಸುಧಾರಿತ ಭದ್ರತಾ ಪರಿಹಾರಗಳನ್ನು ಒದಗಿಸುವುದನ್ನು ಮುಂದುವರಿಸುವ ಗುರಿ ಹೊಂದಿದ್ದೇವೆ ಎಂದು ಆಕ್ಸಿಸ್ಕೇಡ್ಸ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪೇಟಿಎಂ ಕಂಪನಿ ಮಾಡುತ್ತಿದೆ ಉದ್ಯೋಗಿಗಳ ವಜಾ: ಎಷ್ಟು ಸಿಬ್ಬಂದಿ ವಜಾ? ಏಕೆ?

ಮ್ಯೂಚುವಲ್​ ಫಂಡ್​ ಹೂಡಿಕೆ: ದಾಖಲೆಯ ರೂ. 58.6 ಲಕ್ಷ ಕೋಟಿಗೆ ಏರಿಕೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:3 × three =
Remember me
